ಬೆಂಗಳೂರು: ಮರೆಂಗ ಏಷ್ಯಾ ಹಾಸ್ಪಿಟಲ್ಸ್ ಮತ್ತು ಕ್ವಾಲಿಟಿ ಆಂಡ್ ಅಕ್ರೆಡಿಟೇಶನ್ ಇನ್ಸ್ಟಿಟ್ಯೂಟ್ (ಕ್ಯೂಎಐ) ಕೈಜೋಡಿಸಿ ಅಹಮದಾಬಾದ್ನ ಮರೆಂಗೋ ಸಿಐಎಂಎಸ್ ಹಾಸ್ಪಿಟಲ್ನಲ್ಲಿ ಅತ್ಯಾಧುನಿಕ `ಸ್ಟ್ರೋಕ್ ಆರೈಕೆಯಲ್ಲಿ ಗುಣಮಟ್ಟ ಮತ್ತು ರೋಗಿ ಸುರಕ್ಷತೆ ಪರಿಣಿತಿ ಕೇಂದ್ರ’ ಸ್ಥಾಪನೆ ಮಾಡಲಿವೆ.
ಸ್ಟ್ರೋಕ್ ಆರೈಕೆ ಚಿಕಿತ್ಸೆಯನ್ನು ಸುಧಾರಿಸುವ ಗುರಿಯನ್ನು ಈ ಸಹಭಾಗಿತ್ವವು ಹೊಂದಿದ್ದು, ರಾಜ್ಯ ಮತ್ತು ಈ ವಲಯದಲ್ಲಿ ಆರೋಗ್ಯ ಸೇವೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಸಹಭಾಗಿತ್ವಕ್ಕೆ ಒಪ್ಪಂದಕ್ಕೆ ಮರೆಂಗೋ ಏಷ್ಯಾ ಹಾಸ್ಪಿಟಲ್ಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಮೂಹ ಸಿಇಒ ಡಾ. ರಾಜೀವ್ ಸಿಂಘಾಲ್ ಮತ್ತು ಕ್ವಾಲಿಟಿ & ಅಕ್ರೆಡಿಟೇಶನ್ ಇನ್ಸ್ಟಿಟ್ಯೂಟ್ (ಕ್ಯೂಎಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ. ಕೆ. ರಾಣಾ ಸಹಿ ಹಾಕಿದ್ದಾರೆ.
ಶಿಕ್ಷಣ, ತರಬೇತಿ, ಗುಣಮಟ್ಟ ಸುಧಾರಣೆ ಮತ್ತು ಮಾನ್ಯತೆ/ಪ್ರಮಾಣೀಕರಣ ವ್ಯವಸ್ಥೆಯನ್ನಾಗಿ ಕ್ಯೂಎಐ ಅನ್ನು ಸ್ಥಾಪಿಸಲಾಗಿದೆ.
ಮರೆಂಗೋ ಏಷ್ಯಾ ಹಾಸ್ಪಿಟಲ್ಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಮೂಹ ಸಿಇಒ ಡಾ. ರಾಜೀವ್ ಸಿಂಘಾಲ್, ಪಾರ್ಶ್ವವಾಯು ನಿರ್ವಹಣೆಯಂತಹ ಸಂಕೀರ್ಣ ವಲಯದಲ್ಲಿ ಪರಿಣಿತಿ ಸಾಧಿಸುವುದಕ್ಕೆ ಪ್ರಯತ್ನಿಸುವುದು ನಮ್ಮ ಜವಾಬ್ದಾರಿಯಾಗಿದೆ.
ಮರೆಂಗೋ ಸಿಐಎಂಎಸ್ ಹಾಸ್ಪಿಟಲ್ನಲ್ಲಿರುವ ನರವಿಜ್ಞಾನಗಳ ಸುಧಾರಿತ ಪರಿಣಿತಿ ಕೇಂದ್ರವು ಪಾರ್ಶ್ವವಾಯು ನಿರ್ವಹಣೆಯಲ್ಲಿ ಹೋಲಿಕೆ ಇಲ್ಲದ ರೋಗಿ ಆರೈಕೆಯನ್ನು ಒದಗಿಸಿದೆ. ಸ್ಟ್ರೋಕ್ ಕಾಳಜಿಯನ್ನು ಇನ್ನಷ್ಟು ಸುಧಾರಿಸಲು, ಗುಜರಾತ್ ಮತ್ತು ಇತರ ಪ್ರದೇಶಗಳಲ್ಲಿ ನ್ಯೂರಾಲಜಿಸ್ಟ್ಗಳಿಗೆ ಸ್ಟ್ರೋಕಾಲಜಿಸ್ಟ್ ಪ್ರೋಗ್ರಾಮ್ ಅನ್ನು ಆಸ್ಪತ್ರೆಯು ಪರಿಚಯಿಸಿದೆ ಎಂದರು.
ಡಾ. ಸಿಂಘಾಲ್ ಹೇಳುವಂತೆ ಸ್ಟ್ರೋಕ್ ಆರೈಕೆಯಲ್ಲಿ ಸುಧಾರಿತ ಪರಿಣಿತಿ ಕೇಂದ್ರವಾಗಿ ನಮ್ಮ ಆಸ್ಪತ್ರೆ ಹೊರಹೊಮ್ಮುತ್ತಿರುವುದು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ ಎಂದರು.ಕ್ವಾಲಿಟಿ & ಅಕ್ರಡಿಟೇಶನ್ ಇನ್ಸ್ಟಿಟ್ಯೂಟ್ (ಕ್ಯೂಎಐ) ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ. ಬಿ ಕೆ ರಾಣಾ ಅವರು,
ಮರೆಂಗೋ ಸಿಐಎಂಎಸ್ ಹಾಸ್ಪಿಟಲ್ನಲ್ಲಿ `ಪಾರ್ಶ್ವವಾಯು ಆರೈಕೆಯಲ್ಲಿ ಗುಣಮಟ್ಟ ಮತ್ತು ರೋಗಿ ಸುರಕ್ಷತೆಗೆ ಪರಿಣಿತಿ ಕೇಂದ್ರ’ ಸ್ಥಾಪಿಸುವುದನ್ನು ಘೋಷಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ಬಹುಮಾದರಿ ಕಾರ್ಯತಂತ್ರಗಳನ್ನು ಬಳಸಿಕೊಂಡು ಪಾರ್ಶ್ವವಾಯು ಆರೈಕೆಯಲ್ಲಿ ಗುಣಮಟ್ಟ ಸುಧಾರಣೆ ಮತ್ತು ರೋಗಿ ಸುರಕ್ಷತೆ ವಲಯ ದಲ್ಲಿ ಶ್ರಮಿಸುವುದಕ್ಕಾಗಿ ಮರೆಂಗೋ ಸಿಐಎಂಎಸ್ ಹಾಸ್ಪಿಟಲ್ನೊಂದಿಗೆ ಪಾಲುದಾರಿಕೆ ಹೊಂದುತ್ತಿರುವುದು ಕ್ಯೂಎಐಗೆ ಹೆಮ್ಮೆಯ ಸಂಗತಿಯಾಗಿದೆ.