ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹ್ಯಾಡಾಳ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಗ್ರಾಪಂ ಸ್ವಾಧೀನದಲ್ಲಿದ್ದ ಖಾನೆಷುಮಾರಿ ಸ್ವತ್ತಿನ ಸಂಖ್ಯೆ 181 ಜಾಗಕ್ಕೆ (ಕುಂಟೆ) ಸಂಬಂಧಿಸಿದಂತೆ ಸ್ವತ್ತನ್ನು ರಾಮಯ್ಯ ಬಿನ್ ಕೆಂಪಣ್ಣ ಎಂಬುವವರು ಶೆಡ್ ನಿರ್ಮಿಸಿದ್ದರು.
ಕಳೆದ ಜನವರಿ 12ರಂದು ತಾಪಂ ನ್ಯಾಯಾಲಯದ ಉಪಸ್ಥಿತಿಯಲ್ಲಿ ಪ್ರಕರಣ ಸಂಖ್ಯೆ ಜಿಪಿಎ/09/2022-23/101ಕ್ಕೆ ಸಂಬಂಧಿಸಿದಂತೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ ವಸಂತ್‍ಕುಮಾರ್ ಅವರ ನೇತೃತ್ವದಲ್ಲಿ ಗ್ರಾಪಂ ಸ್ವತ್ತನ್ನು ಕೂಡಲೇ ತೆರವುಗೊಳಿಸಿ ಗ್ರಾಪಂಗೆ ಸ್ವಾಧೀನ ಪಡಿಸಿಕೊಳ್ಳುವಂತೆ ಚನ್ನರಾಪಟ್ಟಣ ಗ್ರಾಪಂ ಪಿಡಿಒ ಸಿ.ಮುನಿರಾಜ್ ಅವರಿಗೆ ನಿರ್ದೇಶನ ಮತ್ತು ಆದೇಶ ಹೊರಡಿಸಿರುತ್ತಾರೆ.
ಅದರಂತೆ ನ್ಯಾಯಾಲಯದ ಆದೇಶದ ಕಾಪಿಗಳನ್ನು ಸ್ವಾಧೀನಾನುಭವದಲ್ಲಿದ್ದವರಿಗೂ ಸಹ ನೊಟೀಸ್ ಕಳುಹಿಸಲಾಗಿತ್ತು. ಆದರೆ ನೊಟೀಸ್‍ಗೆ ಸ್ಪಂದಿಸದ ಕಾರಣದಿಂದಾಗಿ ಶುಕ್ರವಾರದಂದೂ ಒಂದು ಗಂಟೆಗಳ ಕಾಲ ಶೆಡ್ ತೆರವು ಕಾರ್ಯಚರಣೆ ಮುನ್ನಾ ಶೆಡ್‍ನಲ್ಲಿರುವಂತಹ ವಸ್ತುಗಳನ್ನು ಹೊರ ಹಾಕುವಂತೆ ಅಧಿಕಾರಿಗಳು ಮೌಖಿಕವಾಗಿ ಸೂಚಿಸಿದ್ದರೂ ಸಹ ಮುಂದಾಗದಿದ್ದಾಗ ಪೊಲೀಸರ ಮತ್ತು ಸಾರ್ವಜನಿಕರ ಹಾಜರಿಯಲ್ಲಿ ಅಧಿಕಾರಿಗಳೇ ಜೆಸಿಬಿ ಮತ್ತ್ತು ಸಿಬ್ಬಂದಿಗಳ ಸಹಯೋಗದಲ್ಲಿ ಶೆಡ್‍ನಲ್ಲಿದ್ದ ವಸ್ತುಗಳನ್ನು ಹೊರಹಾಕಿ ಶೆಡ್‍ಅನ್ನು ನೆಲಸಮಗೊಳಿಸಲಾಯಿತು.
Leave a Review