ಕನಕಪುರ: ರೂರಲ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕರಾದ ಕರಿಯಪ್ಪನವರು ಮನಸ್ಸು ಮಾಡಿದ್ದರೆ ಈ ರಾಜ್ಯದ ಮುಖ್ಯಮಂತ್ರಿ ಆಗಬಹುದಿತ್ತು, ಅಂತಹ ಮೇರು ವ್ಯಕ್ತಿತ್ವ ಅವರದು. ದೇಶದ ಮಹಾನ್ ನಾಯಕಿ ಇಂದಿರಾಗಾಂಧಿಯವರೇ ಅವರ ಅಭಿಮಾನಕ್ಕೆ ಕನಕಪುರಕ್ಕೆ ಬಂದಿದ್ದರು ಎಂದು ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿಜಿಆರ್ ಸಿಂಧ್ಯಾ ತಿಳಿಸಿದರು.
ಇಲ್ಲಿನ ರೂರಲ್ ಎಜುಕೇಶನ್ ಸೊಸೈಟಿಯ ದೂತೂರು ಮಾರೇಗೌಡ ಸಭಾಂಗಣದಲ್ಲಿ ನಡೆದ ಪೂಜ್ಯ ಎಸ್. ಕರಿಯಪ್ಪನವರ ಜನ್ಮದಿನೋತ್ಸವ ಮತ್ತು ಪುಣ್ಯ ಸ್ಮರಣೆ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರಿಯಪ್ಪನವರು ಪೂಜ್ಯರಿಗೆ ಸಮಾನರು ಮನೆಗಳಲ್ಲಿ ದೇವರ ಫೋಟೋಗಳ ಜೊತೆ ಅವರ ಫೋಟೋಗಳನ್ನು ಇಟ್ಟು ಪೂಜೆ ಮಾಡುತ್ತಾರೆ, ಮಹಾತ್ಮರಲ್ಲಿ ಮಹಾತ್ಮ ರಾಗಿದ್ದರೂ, ಅಂತಹ ವ್ಯಕ್ತಿ ವ್ಯಕ್ತಿತ್ವ ಅವರದಾಗಿತ್ತು ಎಂದು ಹೇಳಿದರು.
ಕರಿಯಪ್ಪನವರು ಶಾಸಕರಾಗಿದ್ದಾಗ ಮುಖ್ಯಮಂತ್ರಿ ಗಳಾಗಿದ್ದ ದೇವರಾಜ ಅರಸು ಅವರು ಮಂತ್ರಿ ಮಾಡುವುದಾಗಿ ಹೇಳಿದಾಗ ತಮಗೆ ಅದು ಬೇಕಿಲ್ಲ, ರಾಮೇಗೌಡರನ್ನು ಮಂತ್ರಿ ಮಾಡಿ ಎಂದು ಮಂತ್ರಿ ಮಾಡಿಸಿದ್ದು ಕರಿಯಪ್ಪನವರು ಎಂದು ಸ್ಮರಿಸಿದರು. ಯಾವುದೇ ಅಪೇಕ್ಷೆ ಇಲ್ಲದೆ ರಾಜಕಾರಣ ಮಾಡಿದ ರಾಜಕಾರಣಿ ಎಂದರೆ ಕರಿಯಪ್ಪ
ನವರು. ಅದೇ ರೀತಿ ಆಜನ್ಮ ಬ್ರಹ್ಮಚಾರಿಯಾಗಿ ಯಾವುದೇ ನಿರೀಕ್ಷೆಯಿಲ್ಲದೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಲಕ್ಷಾಂತರ ಜನರಿಗೆ ದಾರಿ ದೀಪವಾಗಿದ್ದಾರೆ, ಅದರಲ್ಲಿ ತಾವು ಒಬ್ಬರು, ಒಂದು ವೇಳೆ ಕರಿಯಪ್ಪನವರು ಹಾರೋಹಳ್ಳಿಯಲ್ಲಿ ಶಾಲೆಯನ್ನು ತೆರೆಯದಿದ್ದರೆ ತಾವು ಮರಳವಾಡಿಯಲ್ಲಿ ಕೃಷಿಕರಾಗಿ ಉಳಿಯಬೇಕಿತ್ತು ಎಂದರು. ಮುಂದಿನ ದಿನಗಳಲ್ಲಿ ಕನಕಪುರವು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ, ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಕನಕಪುರದವರೆಗೆ ವಿಸ್ತರಣೆ ಯಾಗುತ್ತದೆ, ಮೆಟ್ರೋ ಕನಕಪುರದವರೆಗೆ ಬರುತ್ತದೆ, ತಮಿಳುನಾಡು ತಕರಾರು ದೂರವಾಗಿ ಮೇಕೆದಾಟು ಜಲಾಶಯ ನಿರ್ಮಾಣವಾಗುತ್ತದೆ ಅದೆಲ್ಲವನ್ನು ನೋಡಲು ನನಗೆ ಆಯಸ್ಸು ಬೇಕಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಚ್.ಕೆ.ಶ್ರೀಕಂಠ ಅವರು ಮಾತನಾಡಿ ಕನಕಪುರ ತಾಲ್ಲೂಕು ಶೈಕ್ಷಣಿಕವಾಗಿ ಬೆಳೆದಿದೆ ಎಂದರೆ ಅದಕ್ಕೆ ಕರಿಯಪ್ಪನವರು ಕಾರಣ, ಅಂದು ಮತ್ತು ಇಂದು ಬಡವರು ಈ ಸಂಸ್ಥೆಯಲ್ಲಿ ಓದುತ್ತಿದ್ದಾರೆ, ಹಣ ವಿದ್ದವರು ಜೈನ್ ಇಲ್ಲವೇ ಬೆಂಗಳೂರಿಗೆ ಹೋಗುತ್ತಿದ್ದಾರೆ ಎಂದರು.ಪಾರದರ್ಶಕತೆ ಮತ್ತು ಶಿಸ್ತು ಕರಿಯಪ್ಪ ನವರ ಆದರ್ಶವಾಗಿತ್ತು, ಅದನ್ನು ನಾವು ಪಾಲಿಸಿಕೊಂಡು ದಾನಿಗಳ ಸಹಕಾರದಿಂದ ಕೃಷಿ ಕಾಲೇಜು, ಕೃಷಿ ಡಿಪ್ಲೋಮೋ, ಸ್ವಾತನೂರಿನಲ್ಲಿ ಕೌಶಲ್ಯ ತರಬೇತಿ ಪ್ರಾರಂಭ ಮಾಡುತ್ತಿದ್ದೇವೆ ಇದಕ್ಕೆ ಕರಿಯಪ್ಪನವರ ಅಭಿಮಾನಿಗಳು ಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈಗಿನ ಯುವ ಪೀಳಿಗೆ ಕರೆಯಪ್ಪನವ ರನ್ನು ನೋಡಿಲ್ಲ ಕರಿಯಪ್ಪನವರ ಕಾರ್ಯಚಟು ವಟಿಕೆಗಳು, ಅವರು ನಡೆದು ಬಂದ ದಾರಿ ಅವರ ಬದುಕಿನ ಸರಳತೆಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಲು ಸಾಕ್ಷಾ ಚಿತ್ರವನ್ನು ಮಾಡಿದ್ದು ಅದನ್ನು ಬಿಡುಗಡೆಗೊಳಿಸುತ್ತಿದ್ದೇವೆ ಎಂದು ತಿಳಿಸಿದರು. ಕರಿಯಪ್ಪನವರ ಸಂಸ್ಥೆಗೆ ದಾನಿಗಳು ಇಲ್ಲಿಯವರೆಗೂ ಒಂಬತ್ತು ಕೋಟಿಗೂ ಹೆಚ್ಚು ಧನಸಹಾಯವನ್ನು ಮಾಡಿದ್ದಾರೆ, ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತ ಅವರನ್ನು ಅಭಿನಂದಿಸುತ್ತೇವೆ. ಮುಂದೆಯೂ ಇದೇ ರೀತಿ ಸಹಕಾರ ನೀಡಲಿ ಎಂದರು. ಮಜ್ಜಿಗೆ ವಿತರಣೆ: ನಗರದ ಎಂಜಿ ರಸ್ತೆಯಲ್ಲಿ ಸಾಗಿದ ಕರಿಯಪ್ಪನವರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದAತಹ ಜನರಿಗೆ ಎಂ ಎಸ್ ಗೋಲ್ಡ್
ಪ್ಯಾಲೇಸ್ ನವರು ಬಿಸಿಲು ಮತ್ತು ಬಾಯಾರಿಕೆ ನಿವಾರಿಸಲು ಎಲ್ಲರಿಗೂ ಉಚಿತವಾಗಿ ಮಜ್ಜಿಗೆ ಪ್ಯಾಕೆಟ್ ಗಳನ್ನು ವಿತರಣೆ ಮಾಡಿದರು.ಮುಖ್ಯಮಂತ್ರಿ ಅಗಲಿದ್ದಾರೆ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದ್ಯದಲ್ಲೇ ಮುಖ್ಯಮಂತ್ರಿ ಅಗಲಿದ್ದಾರೆ. ಅವರು ಮುಖ್ಯಮಂತ್ರಿ ಆಗಲಿ ಎಂದು ನನ್ನ ಬಯಕೆಯೂ ಆಗಿದೆ, ಆ ಶಕ್ತಿ ಶಿವಕುಮಾರ್ ಗೆ ಇದೆ. ಈ ತಾಲ್ಲೂಕಿನ ಮಣ್ಣಿನಿಂದ ಶಿವಕುಮಾರ್ ಮುಖ್ಯಮಂತ್ರಿಯಾದರೆ ತಾಲೂಕಿಗೂ ಒಳ್ಳೆಯದಾಗುತ್ತದೆ, ಆ ಕೀರ್ತಿ ತಾಲ್ಲೂಕಿಗೆ ಬರುತ್ತದೆ, ಎಲ್ಲರೂ ಆಶಿಸೋಣ.
ಕರಿಯಪ್ಪನವರು ಮಹಾತ್ಮರಲ್ಲಿ ಮಹಾತ್ಮರಾಗಿದ್ದರೂ, ಅಂತಹ ವ್ಯಕ್ತಿ ವ್ಯಕ್ತಿತ್ವ ಅವರದಾಗಿತ್ತು: ಪಿಜಿಆರ್ ಸಿಂಧ್ಯಾ



