ನವದೆಹಲಿ: ಇಸ್ರೋ ಇಂದು ಸಂಜೆ ತನ್ನ ಅತಿದೊಡ್ಡ ರಾಕೆಟ್ ಎಲ್ವಿಎಂ ೩ ಅನ್ನು ಸಂವಹನ ಉಪಗ್ರಹ ಸಿಎಂಎಸ್ -೦೩ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇಸ್ರೋ ೪,೦೦೦ ಕೆಜಿ ತೂಕದ ಉಪಗ್ರಹವನ್ನು ಭಾರತದ ನೆಲದಿಂದ ದೂರದ ಜಿಯೋಸಿಂಕ್ರೊನಸ್ ಟ್ರಾನ್ಸ÷್ಫರ್ ಕಕ್ಷೆಯಲ್ಲಿ (ಜಿಟಿಒ) ಇರಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಇಂದು ಸಂಜೆ ೫.೨೬ ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಎರಡನೇ ಲಾಂಚ್ ಪ್ಯಾಡ್ (ಎಸ್ಎಲ್ಪಿ) ನಿಂದ ಎಲ್ವಿಎಂ ೩-ಎಂ೫ ಉಡಾವಣೆಯಾಗಲಿದೆ. ಸಂಜೆ ೪.೫೬ ರಿಂದ ಇಸ್ರೋದ ಯೂಟ್ಯೂಬ್ ಚಾನೆಲ್ನಲ್ಲಿ ನೀವು ಲೈವ್ ಸ್ಟಿçÃಮ್, ಸಿದ್ಧತೆ ಮತ್ತು ನಂತರ ಉಡಾವಣೆಯನ್ನು ವೀಕ್ಷಿಸಬಹುದು.



