ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಹಿಳಾ ಪ್ರಕಾರದ ಮಹಿಳಾ ದಿನಾಚರಣೆ ಯ ಮುಂದುವರಿದ ಭಾಗವೂ ಅತ್ಯಂತ ವಿಶೇಷ ರೀತಿಯಲ್ಲಿ ಡಿ.ವಿ.ಜಿ. ರಸ್ತೆಯ ಅಬಲಾಶ್ರಮದಲ್ಲಿ ತಿಮ್ಮಣ್ಣ ಭಟ್ಟರ ಕಗ್ಗದಲ್ಲಿರುವ ಕೌಟುಂಬಿಕ ಮೌಲ್ಯಗಳ ಉಪನ್ಯಾಸದೊಂದಿಗೆ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿ ಮಾಡಿತು. ಸಭೆಯ ಅಧ್ಯಕ್ಷಷತೆಯನ್ನು ಶ್ರೀ ತಿಮ್ಮಣ್ಣ ಭಟ್ಟರು ವಹಿಸಿದ್ದರು ಮಹಿಳಾ ಪ್ರಕಾರದ ಅಧ್ಯಕ್ಷರಾದ ಶ್ರೀಮತಿ ಮೃದುಲಾರವರು ವೇದಿಕೆಯ ಮೇಲೆ ಇದ್ದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ರಾಷ್ಟ್ರಕ್ಕೆ ಮಹಿಳೆಯರ ವಿಶೇಷ ಕೊಡುಗೆಗಳನ್ನು ಕಳೆದ ಬಾರಿ ಸ್ಮರಿಸಿದ್ದನ್ನು ಮುಂದುವರೆಸುತ್ತಾ ಶ್ರೀಮತಿ ವೀಣಾ ರವಿಕುಮಾರ್ ಅವರು ಪ್ರಸ್ತುತ ದಿನದ ಮಾದರಿ ಮಹಿಳೆ ಶ್ರೀಮತಿ ಸುಧಾ ಮೂರ್ತಿಯವರ ಪರಿಚಯ ಹಾಗೂ ಸಾಧನೆಗಳ ಬಗೆಗೆ ಹಾಗೂ ಹವ್ಯಾಸಿ ರಂಗಕರ್ಮಿ ಮತ್ತು ಸಾಹಿತಿ ಶ್ರೀಮತಿ ನಾಗವೇಣಿ ರಂಗನ್ ಇವರು ನಾಟಕ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಹಾಗೂ ನಾಟಕ ಸಾಹಿತ್ಯದಲ್ಲಿ ತೊಡಗಿರುವ ಮಹಿಳೆಯರ ಬಗೆಗೆ ಬೆಳಕು ಚೆಲ್ಲಿದರು.
ಅಧ್ಯಕ್ಷರಾದರೂ ವಿಶೇಷ ಉಪನ್ಯಾಸ ಮಾಡಿದ ತಿಮ್ಮಣ್ಣ ಭಟ್ಟರ ಕಗ್ಗದ ಜ್ಞಾನ ಹಾಗೂ ಡಿವಿಜಿಯವರ ಸಂದೇಶಗಳು ಮಂತ್ರಮುಗ್ಧರನ್ನಾಗಿ ಮಾಡಿದವು. ಕಗ್ಗದಲ್ಲಿರುವ ಕೌಟುಂಬಿಕ ಮೌಲ್ಯಗಳ ಬಗ್ಗೆ ಹೇಳುತ್ತಾ ಭಟ್ಟರು ತಮ್ಮ ವಿಶೇಷ ಶೈಲಿಯಲ್ಲಿ 294ನೇ ಪದ್ಯವಾದ ಉಪ್ಪಿಟ್ಟು ಹುಳಿಯಿಷ್ಟು ಕಗ್ಗವನ್ನು ಹೇಗೆ ಡಿವಿಜಿಯವರು ಸಂಸಾರಕ್ಕೆ ಅಡುಗೆಯ ರುಚಿಗಳ ಮೂಲಕ ಹೊಲಿಸಿ ಕೇವಲ ಪ್ರೀತಿ ಮಾತ್ರವಲ್ಲ ತಕರಾರು ಜಗಳ, ವಾದ ವಿವಾದ ಮತಭೇದಗಳಿದ್ದರು ಎಲ್ಲ ರಸವನ್ನು ಆಸ್ವಾದಿಸಿ ಜೀವನ ನಡೆಸಬೇಕು ಎಂದರು.
ಮನುಷ್ಯನ ಸ್ವಭಾವ ಮಂಗನಂತೆ ಸಣ್ಣದಿರುವುದನ್ನು ಕೆರೆದು ಹೆಚ್ಚು ಮಾಡಿಕೊಂಡು ದುಃಖ ಪಡುತ್ತೇವೆ ಎಂಬುದಕ್ಕೆ ತರಚುವ ಗಾಯ ಕೆರೆದು ಎಂಬ 644ನೇ ಪದ್ಯ ಉದಾಹರಣೆಯನ್ನು ನೀಡುತ್ತಾ, 375ನೇ ಪದ್ಯವಾದ ಮನವನಾಳ್ವುದು ಹಟದ ಮಗುವನಾಳುವನಯದೆ ಎಂದು ಹೇಳಗೆ ನಾವು ಮಕ್ಕಳಿಗೆ ವಿಧ ವಿಧವಾಗಿ ರಮಿಸಿ ಕತೆಯನ್ನು ಕಟ್ಟುತ್ತಾ ಊಟ ಮಾಡುಸುತ್ತೇವೆಯೋ ಹಾಗೆ ಬರುವ ಸಮಸ್ಯೆ ಸಂಕಷ್ಟಗಳನ್ನು ಮರೆಯುತ್ತ ಹೊಸದಾಗಿ ಸಮಾಧಾನ ಹುಡುಕಿಕೊಂಡು ಸಂಸಾರ ನಡೆಸಬೇಕು.
ಮನುಷ್ಯನ ಮನಸ್ಸು ಹಾಲಿನಂತೆ ಸೂಕ್ಷ್ಮವಾದುದು ಹೇಗೆ ಹಾಲು ಹೆಚ್ಚು ಕುದ್ದರೆ ಉಕ್ಕಬಹುದು ಕಡಿಮೆ ಕಾಯ್ದರೆ ಕೆಡಬಹುದು ಮದೇ ಪದೆ ಕೈ ಆಡಿಸಿದರೆ ಒಡೆಯಬಹುದು ಎಂಬುದನ್ನು ಅರಿತು ಸಂಬಂಧಗಳಲ್ಲಿ ಎಚ್ಚರಿಕೆಯನ್ನು ವಹಿಸಿ ನಡೆದುಕೊಳ್ಳಬೇಕು ಎಂಬ 378ನೇ ಕಗ್ಗ, ಇಂಗಿಂತ ಜ್ಞಾನವಿಲ್ಲದ ಪರಿವಾರ ಎಂಬ ಕಗ್ಗದ 176ನೇ ಶ್ಲೋಕದ ಮೂಲಕ ನಾವು ಮಾಡುವುದು ನಮ್ಮ ಪರಿವಾರದವರಿಗೆ ಅರಿವೇ ಇರುವುದಿಲ್ಲ ತಾವು ಮಾಡುವ ನೋವು ಜನರಿಗೆ ಅರಿವಾಗುವುದಿಲ್ಲ ಹೀಗೆ ಪರಿವಾರದವರು ಮಾಡುವ ನಿರ್ಲಕ್ಷ್ಯಗಳಾನ್ನು ಮನಸ್ಸಿಗೆ ಹಚ್ಚಿಕೊಳ್ಳದೇ ನಡೆಯಬೇಕು ಆಗ ಪರಿವಾರದಲ್ಲಿ ಸಾಮರಸ್ಯದಿಂದ ಜೀವನ ಸುಲಭವಾಗುತ್ತದೆ ಎಂದೂ, 820ನೇ ಪದ್ಯವಾದ ಜೀವನವ್ಯಾಪಾರದಲ್ಲಿ ಜೀವನದ ಬಗ್ಗೆ ಹೇಳುತ್ತಾ ಮೂರು ಜನರಿಂದ ಪ್ರಪಂಚ ನಡೆಯುತ್ತದೆ ಸ್ವತಃ ನೀನು ಮತ್ತು ಸುತ್ತಲಿನ ಪರಿಸರ ಆದರೆ ಎಲ್ಲಕ್ಕೂ ಮಿಗಿಲಾಗಿ ಆ ಪರಮಾತ್ಮನ ಆಶಯ ಮತ್ತು ಅನುಗ್ರಹದಿಂದ ನಡೆಬೇಕಾದ್ದು ನಡೆಯುತ್ತದೆ ಎಂದು ಹೇಳಿದರು.
485ನೇ ಪದ್ಯದಲ್ಲಿ ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ ಎಂಬ ನಡಿಯಿಂದ ಹೇಳುತ್ತಾರೆ ಪ್ರಹ್ಲಾದನು ನಂಬಿ ಮೋಕ್ಷವನ್ನು ಪಡೆದ ಅವನ ತಂದೆ ದ್ವೇಷ ಮಾಡಿ ನಂಬದೇ ಮೋಕ್ಷವನ್ನು ಪಡೆದ ಆದರೆ ಹೇ ಜೀವವೇ ನೀನು ಸಿಂಬಳದ ನೊಳದಂತೆ ವ್ಯಾಮೋಹಗಳ ಕೂಪದಲ್ಲಿ ಬಿದ್ದು ಸಾಯುತ್ತಿರುವೆ ಎಂದು ಹೇಳಿದರು.
ಇಂದಿನ ಕಾಲದ ಪರಿಸ್ಥಿತಿಗೆ ಉತ್ತಮವಾದ ಉದಾಹರನೇಯಾಗಿದೆ.
930ನೇ ಪದ್ಯದಲ್ಲಿ ಆರ ಕೈತುತ್ತಿಗಂ ಕಾಯಿಸದೇ ಪದ್ಯವನ್ನು ಹೇಳುತ್ತಾ ಅನಾಯಾಸೇನ ಮರಣಂ, ವಿನಾ ದೈನಯೇನ ಜೀವನಂ ದೇಹಿ ಮೆ ಕೃಪಯಾ ಕೃಷ್ಣ ತ್ವಯಿ ಭಕ್ತಿಮಚಲಂ ಎಂಬ ಭಾವದಲ್ಲಿ ಜೀವನದ ಸಾರವನ್ನು ಹೀಗೆಯೇ ಯಾರನ್ನು ಬೇಡದೆ ಇರುವ ಹಾಗೆ ಯಾರ ಮೇಲೂ ಭಾರವಾಗದೇ ಹಾಗೆ ಇರುವುದನ್ನು ರೂಢಿಸಿಕೊಳ್ಳಬೇಕೆಂಬ ಸಂದೇಶವು ಕೌಟುಂಬಿಕ ನೆಲೆಗಟ್ಟಿನಲ್ಲಿ ವಿಶೇಷ ಮಹತ್ವವನ್ನು ತಿಳಿಸುತ್ತದೆ. 420ನೇ ಪದ್ಯದಲ್ಲಿ ಮಕ್ಕಳ ಭವಿಷ್ಯಕ್ಕೆ ಕಕ್ಕುಲತೆಗೊಳಬೇಡ ಎಂದು ಹೇಳಿ ಕೌರವ ಪಾಂಡವರ ಉದಾಹರಣೆಯನ್ನು ಹೇಳುತ್ತಾ ಡಿವಿಜಿಯವರ ನೆಮ್ಮದಿಯ ಜೀವನಕ್ಕೆ ಅತೀ ಮುಖ್ಯವಾದ ವಿಚಾರವನ್ನು ಹೇಳಿ ನಾವು ಮಕ್ಕಳಿಗೆ ಒತ್ತಡ ಹೇರದೆ ಅವರನ್ನು ಸ್ವತಂತ್ರವಾಗಿ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಬೇಕು ಎಂದರು,
759ನೇ ಕಗ್ಗವಾದ ಬರದಿಹುದುರೆಣಿಕೆಯಲಿ ಎಂಬ ಪದ್ಯದಲ್ಲಿ ನಮ್ಮವರಲ್ಲಿರುವ ಕೆಟ್ಟದನ್ನು ಏಣಿಸುತ್ತಾ ಜೀವನ ಅಸಮಾಧಾನ ಮಾಡಿಕೊಳ್ಳುವ ಬದಲು ಇರುವುದರ ಆನಂದವನ್ನು ಅನುಭವಿಸಬೇಕು ಗೌರವಿಸಬೇಕು ಎಂಬ ಆಗಲೇ ಸಂತಸದಿಂದಿರಲು ಹಾದಿಯಾಗುತ್ತದೆ ಎಂಬುದನ್ನು ಅರಿಯಬೇಕು ಎಂದು ಉತ್ತಮ ಉದಾಹರಣೆಯನ್ನು ನೀಡಿದರು.
ಮುಪ್ಪು ಬಂದಾಗ ಮೋಹ ತೊರುವ ಹಿರಿಯರನ್ನು ಪ್ರೀತಿಸಿ ಆರೈಕೆ ಮಾಡಿದರೆ ಕುಟುಂಬದ ನೆಮ್ಮದಿ ಸೌಖ್ಯವನ್ನು ಪಡೆಯುವುದು ಸುಲಭವೆಂದು ಹೇಳುತ್ತಾ ನಮ್ಮ ಸಂಬಂಧಗಳ ನಡುವೆ ಪ್ರೀತಿಯ ಅಭಿವ್ಯಕ್ತಿ ಹಾಗೂ ಸಮಯವಿದ್ದಾಗ ಹೇಳಿಕೊಳ್ಳದೇ ಮುಂದೆ ಕೊರಗುವುದು ಬೇಡವೆಂಬ ಸೊಗಸಾದ ಸಂದೇಶವನ್ನು ನೀಡಿದರು ಶ್ರೀಮತಿ ಜ್ಯೋತಿಯವರು ಸೊಗಸಾದ ಪ್ರಾರ್ಥನೆ ಹಾಗೂ ಮನರಂಜಕವಾದ ಭಾವಗೀತೆಯೊಂದಿಗೆ ಜನರನ್ನು ರಂಜಿಸಿದರು.
ಕಾರ್ಯಕ್ರಮಕ್ಕೆ ಅಭಾಸಾಪ ದಕ್ಷಿಣ ವಲಯದ ಅಧ್ಯಕ್ಷರಾದ ಡಾ|| ಭಾನುರವರು ಉಪಾಧ್ಯಕ್ಷರಾದ ಶ್ರೀಮತಿ ಶೀಲಾ ಅರಕಲಗೂಡುರವರ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು. ಸಮಾಜದಲ್ಲಿ ಕ್ಷೀಣವಾಗುತ್ತಿರುವ ಕೌಟುಂಬಿಕ ಮೌಲ್ಯಗಳನ್ನು ಭಗವದ್ಗೀತೆಯ ಸಮಾನವಾದ ಕಗ್ಗದಿಂದ ತಿಳಿದು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದೆಂಬುದನ್ನು ತಿಮ್ಮಣ್ಣ ಭಟ್ಟರು ಮನೋಜ್ಞವಾಗಿ ತಿಳಿಸಿ ಕೊಟ್ಟರು