ಬೆಂಗಳೂರು : ವಾಕ್ ಸ್ವಾತಂತ್ರ್ಯಎಲ್ಲರಿಗೂ ಇದೆ ಹಾಗಂತ ಏನು ಬೇಕಾದರೂ ಮಾತನಾಡುವುದು ತಪ್ಪು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಸಮಾಜದ ಮೇಲೆ ಅದು ಯಾವ ರೀತಿಯ ಪರಿಮಾಣ ಬೀರುತ್ತೆ ವ್ಯಕ್ತಿ ಮತ್ತು ಸಮುದಾಯದ ಬಗ್ಗೆ ಮಾತನಾಡುವುದು ಎಷ್ಟು ಪರಿಣಾಮ ಬೀರುತ್ತೆ ಇದೆಲ್ಲಾ ಯೋಚನೆ ಮಾಡಿ ದ್ವೇಷ ಭಾಷಣ ತಡೆ ಬಿಲ್ ಮಾಡಿದ್ದು ಎಂದರು.
ದ್ವೇಷ ಭಾಷಣ ತಡೆ ಬಿಲ್ಗೆ ರಾಜ್ಯಪಾಲರು ಅಂಕಿತ ಹಾಕದ ವಿಚಾರವಾಗಿ ೨೮ ಅಂಶಗಳನ್ನು ಪ್ರಶ್ನೆ ಮಾಡಿ ಅದನ್ನು ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ರಾಷ್ಟ್ರಪತಿಗಳು ಅಬ್ಸರ್ವೇಷನ್ಗೆ ವಾಪಸ್ ಕಳುಹಿಸಿದರೆ ನೋಡಬೇಕು ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ರಾಜ್ಯದ ಹಲವು ಭಾಗಗಳಲ್ಲಿ ಕೆಲವರು ಭಾಷಣವನ್ನು ಮಾಡಿದ್ದರು ಭಾಷಣ ಮಾಡಿದ ಮೇಲೆ ಏನಾಗಿದೆ ಎಂದು ನಾವು ಗಮನಿಸಿದ್ದೇವೆ ಇದಕ್ಕೆ ಕಡಿವಾಣ ಹಾಕುವುದಕ್ಕೆ ಆ ಬಿಲ್ ಅನ್ನು ನಾವು ತಂದಿದ್ದು ನಿಮ್ಮ ಉದ್ದೇಶ ಏನಿದೆ? ಯಾರು ಏನಾದರೂ ಮಾಡಬಹುದಾ? ಎಂದು ಪರಮೇಶ್ವರ್ ಪ್ರಶ್ನೆ ಮಾಡಿದರು.
ಉದ್ದೇಶ ಪೂರ್ವಕವಾಗಿ ಈ ಕಾಯಿದೆ ಜಾರಿಗೆ ಬರಬಾರದು ಎಂದು ನೆನೆಗುದಿಗೆ ಬೀಳಿಸಬೇಕು ಎಂದು ರಾಜ್ಯಪಾಲರು ಕಳುಹಿಸಿದ್ದಾರೆ ಮುಂದಿನ ದಿನಗಳಲ್ಲಿ ಯಾವ ರೀತಿ ಆಗುತ್ತೆ ಎಂದು ನೋಡೋಣ ಮುಂದೆ ಸರಿ ಹೋಗಬಹುದು ಎಂಬ ಭಾವನೆ ಇದೆ ಎಂದು ತಿಳಿಸಿದರು.
ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ ದ್ವೇಷ ಭಾಷಣದಿಂದ ಸಮಾಜದ ಮೇಲೆ ದುಷ್ಪರಿಣಾಮ: ಪರಮೇಶ್ವರ್



