ಆನೇಕಲ್: ದೇಶದಲ್ಲಿ ಪ್ರತಿಯೊಬ್ಬರು ಶಾಂತಿ ಮತ್ತು ಸಮಾನತೆಯಿಂದ ಬದುಕಲು ಸಂವಿಧಾನ ಕಾರಣವಾಗಿದ್ದು, ಪ್ರಬುದ್ಧ ದೇಶ ನಿರ್ಮಾಣಕ್ಕಾಗಿ ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಿ ಉಳಿಸಬೇಕಿದೆ ಎಂದು ಸರ್ಜಾಪುರಗ್ರಾಪಂ ಉಪಾಧ್ಯಕ್ಷರಾದ ಎ.ಸತೀಶ್ ಕುಮಾರ್ ರವರು ತಿಳಿಸಿದರು.
ಅವರು ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಆಟದ ಮೈದಾನದಲ್ಲಿ ಆಯೋಜಿಸಿದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ದೇಶದಲ್ಲಿ ಪ್ರತಿಯೊಬ್ಬರು ಶಾಂತಿ ಮತ್ತು ಸಮಾನತೆಯಿಂದ ಜೀವಿಸಲು ಸಂವಿಧಾನ ಕಾರಣವಾಗಿದ್ದು ಪ್ರಪಂಚದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಮಾನತೆ ನೀಡುವ ಜತೆಗೆ ಶಾಂತಿಯಿಂದ ಬದುಕುವ ಅವಕಾಶ ಮಾಡಿಕೊಟ್ಟಿದೆ ಜಗತ್ತಿನಲ್ಲೇ ನಮ್ಮ ಸಂವಿಧಾನ ಆತ್ಯಂತ ದೊಡ್ಡದಾಗಿದ್ದು ತನ್ನದೇ ಆದ ವೈಶಿಷ್ಟತೆ ಹೊಂದಿದ್ದು ಎಲ್ಲರಿಗೂ ಸಮಾನ ಹಕ್ಕು ಭಾದ್ಯತೆ ಸಿಕ್ಕಿದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತ ಶಶಿಧರ್, ಮಾಜಿ ಅಧ್ಯಕ್ಷರಾದ ವೈ.ಶ್ರೀರಾಮುಲು, ಶಂಭಯ್ಯ, ಎಸ್.ಎಂ ಶ್ರೀನಿವಾಸ್, ಬುಡಗಪ್ಪ, ವೆಂಕಟೇಶ್, ಸದಸ್ಯರಾದ ಶಿವಕುಮಾರ್, ಕಲಾವತಿ, ರೇಣುಕಮ್ಮ, ಚಿನ್ನು ರಾಮಸ್ವಾಮಿ, ಸರಸ್ವತಮ್ಮ, ರೇಣುಕ, ವೀಣಾ, ಗಾಯಿತ್ರಿ, ಲಲಿತಮ್ಮ, ಶ್ವೇತಾ ಕುಮಾರಿ, ಮಮತಾ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಮೇಶ್, ರೇಖಾ ನಾಗೇಶ್, ಮುಖಂಡರಾದ ಗೋಪಾಲ್ ರೆಡ್ಡಿ, ಮಂಜೇಗೌಡ, ಅಫ್ಜಲ್ ಹಾಗೂ ಮತ್ತಿತ್ತರರು ಹಾಜರಿದ್ದರು.