This is the title of the web page
This is the title of the web page

ಭಾರೀ ಬಿಗಿ ಭದ್ರತೆಯ ಸ್ಟ್ರಾಂಗ್ ರೂಂಗಳಲ್ಲಿವೆ ಇವಿಎಂಗಳು

ಮೈಸೂರು: ಮೈಸೂರಿನ ಮಹಾರಾಣಿ ಮಹಿಳಾ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಇ.ವಿ.ಎಂ ಮೆಷಿನ್ ಗಳನ್ನು ಭಾರೀ ಭದ್ರತೆಯ ಸಾಂಗ್ ರೂಂಗಳಿಗೆ ಇಡಲಾಗಿದ್ದು ಇದ್ದಕ್ಕೆ 3 ಹಂತದ ಭಾರೀ ಪೊಲೀಸ್ ಮಾಡಲಾಗಿದೆ.ಮೊನ್ನೆಯಷ್ಟೇ ಮತದಾನ ಮುಕ್ತಾಯಗೊಂಡಿದ್ದು, ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ.

ಅವರ ಭವಿಷ್ಯವನ್ನು ಚುನಾವಣೆ ನಡೆದ ದಿನದ ಅಂದು ರಾತ್ರಿಯೇ ಮೈಸೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳನ್ನು ಮೈಸೂರಿನ ಮಹಾರಾಣಿ ಕಾಮರ್ಸ್ ಅಂಡ್ ಮ್ಯಾನೇಜ್ ಮೆಂಟ್’ ಕಾಲೇಜು ಸ್ಟ್ರಾಂಗ್ ರೂಂಗಳಲ್ಲಿ ಭದ್ರಪಡಿಸಲಾಗಿದೆ.

ಹಾಗೆ ಸ್ಪಾಂಗ್ ರೂಂಗಳಿಗೆ ಪ್ರವೇಶ ದ್ವಾರದಲ್ಲಿ ಶಸ್ತ್ರ ಸಜ್ಜಿತವಾಗಿರುವ ಸಿಐಎಸ್ ಎಫ್ ತುಕಡಿ, ಎರಡನೇ ಹಂತದಲ್ಲಿ ಸಿಎಆರ್ ತುಕಡಿ ಪೊಲೀಸರು ಹಾಗೂ ಮೂರನೇ ಸುತ್ತಿನಲ್ಲಿ ಸಿಟಿ ಸಿವಿಲ್ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ತಿಳಿಸಿದ್ದಾರೆ.

ಬುಧವಾರ ರಾತ್ರಿಯಿಂದಲೇ ಸ್ಟಾಂಗ್ ರೂಂಗೆ 3 ಪಾಳಿಯಲ್ಲಿ ದಿನದ 24 ಗಂಟೆಯೂ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಎನ್.ಆರ್, ಉಪ ವಿಭಾಗದ ಎಸಿಪಿ ಸಿಂಹಾರಾಯ, ವಿಜಯನಗರ ಉಪ ವಿಭಾಗದ ಗಜೇಂದ್ರ ಪ್ರಸಾದ್ ಮತ್ತು ಕೆ.ಆರ್, ಉಪ ವಿಭಾಗದ ಎಸ್‍ಇ ಗಂಗಾಧರಸ್ವಾಮಿ ಅವರು ಭದ್ರತಾ ಕಾರ್ಯವನ್ನು ಮೇಲ್ವಿಚಾರಣೆ ಮಾಡುವರು ಎಂದು ಅವರು ತಿಳಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ,ಮುತ್ತುರಾಜ್ ಅವರು ಸ್ಟಾಂಗ್ ರೂಂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದು, ತಾವೂ ಪ್ರತೀ ದಿನ ಭೇಟಿ ನೀಡಿ ಭದ್ರತಾ ವ್ಯವಸ್ಥೆ ವೀಕ್ಷಿಸಿ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದೇವೆ ಎಂದೂ ಪೊಲೀಸ್ ಆಯುಕ್ತರು ತಿಳಿಸಿದರು. ಮೇ 13 ಅಂದರೆ ನಾಳೆ ಮತ ಎಣಿಕೆ ದಿನ ಕೇಂದ್ರಕ್ಕೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸುತ್ತ ಬ್ಯಾರಿಕೇಡ್ ಅಳವಡಿಸಿ ಜನರು ಪ್ರವೇಶಿಸದಂತೆ ನಿರ್ಬಂಧಿಸಲಾಗುವುದು.

ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಒಂದೇ ಕಡೆ ನಡೆಯುವುದರಿಂದ ಹೆಚ್ಚು ಮಂದಿ ಜನ ಜಮಾಯಿಸುವ ಕಾರಣ ನಿಯಂತ್ರಿಸಲು ಅಶ್ವಾರೋಹಿ ದಳದ ಸಿಬ್ಬಂದಿಗಳನ್ನೂ ಬಂದೋಬಸ್‍ಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇವಿಎಂಗಳಿರುವ ಸ್ಟಾಂಗ್ ರೂಂಗೆ ಹೆಚ್ಚುವರಿ ಸಿಸಿ ಕ್ಯಾಮರಾಗಳನ್ನು ಮುಂಜಾಗ್ರತಾ ಕ್ರಮವಾಗಿ ಅಳವಡಿಸಿ ತೀವ್ರ ನಿಗಾ ವಹಿಸಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಮೆಟಲ್ ಡೋರ್ ಡಿಟೆಕ್ಟರ್ ಹಾಕಿ ತಪಾಸಣೆ ಮಾಡುತ್ತಿದ್ದು,

ನಿಯೋಜಿತ ಚುನಾವಣಾ ಸಿಬ್ಬಂದಿ, ಭದ್ರತಾ ಪೊಲೀಸರು, ಪಾಸ್ ಹೊಂದಿರುವವರನ್ನು ಹೊರತುಪಡಿಸಿ ಬೇರೆ ವ್ಯಕ್ತಿಗಳನ್ನು ಮತ ಎಣಿಕಾ ಕೇಂದ್ರಕ್ಕೆ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದ ಅವರು, ಇಡೀ ಮತ ಎಣಿಕಾ ಕೇಂದ್ರ ಸಿ.ಐ.ಎಸ್.ಎಫ್ ಸಿಬ್ಬಂಧಿಗಳ ವಶದಲ್ಲಿದ್ದು, ಮತ ಎಣಿಕೆಗೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿಗಳೂ ಲಿಖಿತ ರೂಪದಲ್ಲಿ ಕಾರಣ ತಿಳಿಸಿ ಒಳಗೆ ಪ್ರವೇಶಿಸಬೇಕಾಗಿದೆ ಎಂದು ಆಯುಕ್ತರು ತಿಳಿಸಿದರು.