ಬಂಗಾರಪೇಟೆ: ದೇಶದ ಜನರ ಆರ್ಥಿಕ ಸ್ಥಿತಿ ಸುಧಾರಿಸುವ ಸದುದ್ದೇಶ ಹಾಗೂ ಭಾರತ ಆರ್ಥಿಕವಾಗಿ ಸದೃಢವಾಗಬೇಕೆಂಬ ಸಂಕಲ್ಪದೊಂದಿಗೆ ಹೆಮ್ಮೆಯ ಪ್ರಧಾನಿ ಮೋದಿ ಅವರು `ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಬೃಹತ್ ಅಭಿಯಾನವನ್ನು ಆರಂಭಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಕೆ.ಚಂದ್ರಾರೆಡ್ಡಿ, ಬಿ.ವಿ.ಮಹೇಶ್ ಕಪಾಲಿ, ಶಂಕರ್ ಅಭಿಪ್ರಾಯಪಟ್ಟರು.
ಕೆಸರಹಳ್ಳಿ,ಗ್ರಾಮದಲ್ಲಿ ಲೀಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ “ವಿಕಸಿತ ಭಾರತ ಸಂಕಲ್ಪ ಯಾತ್ರೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರದ ಮುದ್ರಾ, ಜನಧನ್, ಪಿ.ಎಂ.ವಿಶ್ವಕರ್ಮ, ಪ್ರಧಾನಮಂತ್ರಿ ಸುರಕ್ಷ ಭೀಮ ಯೋಜನೆ, ಜೀವನಜ್ಯೋತಿ ಭೀಮಾ ಯೋಜನೆ, ಸುಕನ್ಯ ಸಮೃದ್ಧಿ, ಅಟಲ್ ಪಿಂಚಣಿ, ಜೀವನ ಜ್ಯೋತಿ ವಿಮಾ, ಉಜ್ವಲ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿಯನ್ನು ಎಲ್ಇಡಿ ವಾಹನಗಳ ಮೂಲಕ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶದ ವಾರ್ಡ್ಗಳಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಯೋಜನೆಗಳ ಲಾಭ ಪಡೆದ ಫಲಾನುಭವಿಗಳನ್ನು ಒಗ್ಗೂಡಿಸಿ, ಈ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳಿಗೆ ಅದರ ಲಾಭ ಸಿಗುವಂತೆ ಮಾಡುವ ಈ ಕಾರ್ಯಕ್ರಮವಾಗಿದ್ದು ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಗುರಿಯಾಗಿದೆ ಎಂದರು.
ಜಾತಿ, ಮತ, ಧರ್ಮ, ಪಕ್ಷ, ಬೇಧ ಮರೆತು ದೇಶದ 140 ಕೋಟಿ ಜನರ ಆಶಯಕ್ಕೆ ಬದ್ಧರಾಗಿ ಸಮಗ್ರ ಅಭಿವೃದ್ಧಿಗೆ ತಾರತಮ್ಯ ನಿರಪೇಕ್ಷಿತ ಆಡಳಿತಕ್ಕೆ ಮುನ್ನುಡಿ ಬರೆದು ಯೋಜನೆಗಳನ್ನು ಅನುಷ್ಠಾನಗೊಳಿಸಿ ದೇಶದ ಜನತೆಗೆ ಅರಿವು ಮೂಡಿಸುವ ಉದ್ದೇಶವೇ “ವಿಕಸಿತ ಭಾರತ ಸಂಕಲ್ಪ ಯಾತ್ರೆ” ಎಂದರು.
ಸೇವೆಗಾಗಿ ಕಂಕಣ ಬದ್ದ ಸಂಸದ ಮುನಿಸ್ವಾಮಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಅಧಿಕಾರ ಶಾಶ್ವತ ಅಲ್ಲ ತಾತ್ಕಾಲಿಕ, ಅದರೇ ಸಿಕ್ಕ ಅವಕಾಶದಲ್ಲಿ ಬಡವರ ದಲಿತರ ಅಲ್ಪಸಂಖ್ಯಾತರ ನೊಂದವರ ಪಾಲಿನ ಧ್ವನಿಯಾಗಿ ಕೆಲಸ ಮಾಡಿದಾಗ ಬದುಕಿಗೆ ನೈಜ್ಯ ಅರ್ಥ ಸಿಗುತ್ತದೆ, ಎಂಬ ದೂರ ದೃಷ್ಟಿಯ ಚಿಂತನ ಲಹರಿಗಳ ಮೂಲಕ ನಿರಂತರವಾಗಿ ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಅಪರೂಪದ ಮಾಣಿಕ್ಯ ಕೋಲಾರದ ಸಂಸದ ಎಸ್ ಮುನಿಸ್ವಾಮಿ,. ಸಂಸದರು ಎಂದಿಗೂ ಸಹ ಅಧಿಕಾರದ ಆಸೆ ಮತ್ತು ಅಮಲಿನಲ್ಲಿ ಮೆರೆದವರಲ್ಲ ಬಡವರ ರೈತರ ಶ್ರಮಿಕರ ಶೋಷಿತರ ವೃದ್ಧರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಕಂಕಣ ಬದ್ಧರಾಗಿ ಸೇವಾ ಮನೋಭಾವದ ಪ್ರವೃತ್ತಿಯಲ್ಲಿ ತೊಡಗಿದ್ದಾರೆ.