ದಲಿತರ ಬಂಗಾರದ ಪಲ್ಲಕ್ಕಿ ಉತ್ಸವದ ಸಂಬಂಧ ಚೆಲುವನಾರಾಯಣಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ಲಕ್ಷ್ಯಧೋರಣೆಯ ಬಗ್ಗೆ ದಲಿತ ಮುಖಂಡರೂ ಆದ ಮೈಸೂರು ಅಶೋಕಾಪುರಂ ಕಾಳಿಕಾಂಬ ಟ್ರಸ್ಟ್ ಅಧ್ಯಕ್ಷರೂ ಮೈಸೂರಿನ ಮಹಾನಗರಪಾಲಿಕೆಯ ಮಾಜಿ ಮೇಯರ್ ಪುರುಷೋತ್ತಮ್ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮಪ್ರತಿಗಳನ್ನು ಆಹ್ವಾನಿಸಿದ ತಮಗಾದ ಅಪಮಾನದ ಬಗ್ಗೆ ಮಾಹಿತಿ ನೀಡಿದ ಅವರು ಮೇಲುಕೋಟೆ ದೇಗುಲದ ಅಧಿಕಾರಿ ಮಂಗಳವಾರ ರಾತ್ರಿ ನಮ್ಮೊಡನೆ ಉತ್ಸವದ ವೇಳೆ ಇರದೆ ವ್ಯವಸ್ಥೆಗಳ ಬಗ್ಗೆ ಜವಾಬ್ದಾರಿ ವಹಿಸದೆ ಮನೆಗೆ ಹೋಗಿದ್ದಾರೆ. ಎರಡು ವರ್ಷಗಳಿಂದ ನಮ್ಮ ಬಗ್ಗೆ ನಿರ್ಲಕ್ಷ್ಯಮಾಡಲಾಗುತ್ತಿದೆ. ಈ ವರ್ಷ ಕನಿಷ್ಟ ಉತ್ಸವದ ಆಹ್ವಾನ ಪತ್ರಿಕೆ ತಲುಪಿಸುವ ಕಾರ್ಯ ಸಹ ಮಾಡಿಲ್ಲ. ನಾವೇ ಮಾರ್ಚನಲ್ಲಿ ಯಾವ ದಿನ ಉತ್ಸವ ನಡೆಯಲಿದೆ ಎಂದು ನೀಡಿದ ಪತ್ರಕ್ಕೂ ಉತ್ತರ ನೀಡದೆ ಉಡಾಪೆ ಮಾಡಿರುವುದು ನಮ್ಮ ದಲಿತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಇದರಿಂದ ದಲಿತ ಮುಖಂಡರನ್ನು ರಾಮಾನುಜರೇ ನಮಗೆ ವಹಿಸಿದ ಉತ್ಸವಕ್ಕೆ ಆಹ್ವಾನಿಸಲು ಸಾಧ್ಯವಾಗಲಿಲ್ಲ ಎಂಬ ನೋವಿದೆ. ಪ್ರತಿವರ್ಷ ರಾತ್ರಿ 8ಗಂಟೆಗೆ ಬಂಗಾರದ ಪಲ್ಲಕ್ಕಿ ಉತ್ಸವ ಆರಂಭವಾಗುತ್ತಿತ್ತು. ದೇವಾಲಯದ ಅಧಿಕಾರಿಗಳೇ ಸ್ವತಃ ಇದ್ದು ನೋಡಿಕೊಳ್ಳುತ್ತಿದ್ದರು.ಆದರೆ ಕಳೆದ ವರ್ಷ ಮತ್ತು ಈ ವರ್ಷ ರಾತ್ರಿ 9ರ ನಂತರ ಉತ್ಸವ ಮಾಡಲು ಅವ ಕಾಶನೀಡಲಾಗುತ್ತಿದೆ. ಇಂತಹ ಬೇಜವಾಬ್ದಾರಿಗೆ ಕಾರಣರಾರು ಎಂದು ಪ್ರಶ್ನಿಸಿದ ಮಾಜಿಮೇಯರ್ ಈ ಬಗ್ಗೆ ಕ್ರಮವಹಿಸಲು ಮಂಡ್ಯಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತೇವೆ.
ರಾಮಾನುಜಾಚಾರ್ಯರು ನಮಗೆ ನೀಡಿದ ಅವಕಾಶದಂತೆ ದಲಿತರ ಪ್ರತಿನಿಧಿಯಾಗಿ ಮೈಸೂರಿನ ಅಶೋಕಾಪುರಂನ ಕಾಳಿಕಾಂಬ ಟ್ರಸ್ಟ್ ವತಿಯಿಂದ ಶ್ರದ್ದಾಭಕ್ತಿಯಿಂದ ರಥೋತ್ಸವದ ರಾತ್ರಿ ಬಂಗಾರದ ಪಲ್ಲಕ್ಕಿ ಉತ್ಸವ ನಡೆಸುತ್ತಾ ಬಂದಿದ್ದೇವೆ. ಸಾವಿರಾರು ದಲಿತರು ಉತ್ಸವದಲ್ಲಿ ಭಾಗಿಯಾಗುತ್ತಾರೆ. ವೈಭವದ ಉತ್ಸವ ನಡೆಯು ತ್ತಿದ್ದು, ದಲಿತ ಮುಖಂಡರು ಭಾಗವಹಿಸಿ ದ್ದರೂ ದೇವಾಲಯದ ಅಧಿಕಾರಿ ಉತ್ಸವದಲ್ಲಿ ಭಾಗವಹಿ ಸದೆ ಹೋಗಿರುವುದು ನಮ್ಮ ಸಮುದಾಯಕ್ಕೇ ಮಾಡಿದ ಅವಮಾನವಾಗಿದೆ ಎಂದಿದ್ದಾರೆ. ಮೇಲುಕೋಟೆ ದೇವಾಲಯದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದಲಿತಸಮುದಾಯಕ್ಕಾಗುತ್ತಿರುವ ಅಪಮಾನದ ಸಂಬAಧ ಎಚ್ಚರಿಸಲು ಎಂತಹ ಹೋರಾಟಮಾಡಲೂ ಸಿದ್ದವಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ದಲಿತರ ಉತ್ಸವದ ಬಗ್ಗೆ ದೇಗುಲದ ಇ.ಎಮ್ ನಿರ್ಲಕ್ಷ್ಯ ಮಾಜಿ ಮೇಯರ್ ಖಂಡನೆ



