ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕುರುಬರ ಹಳ್ಳಿಯ ನಾಡಪ್ರಭು ಕೆಂಪೇಗೌಡ ಕ್ರೀಡಾಂಗಣದಲ್ಲಿ ಇಂದು ಆಶಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಾರ್ಷಿಕ ಕ್ರೀಡಾಕೂಟ ಹಾಗೂ 2 km ಮ್ಯಾರಥಾನ್ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ರವರು ಪಾಲ್ಗೊಂಡು ಕ್ರೀಡಾಕೂಟ ಉದ್ಘಾಟನೆ ಮಾಡಿ ಮ್ಯಾರಥಾನ್ ನಡಿಗೆ ಜಾಥಾಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಕೆ ಗೋಪಾಲಯ್ಯ ರವರು,ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಪ್ರತಿಭೆ ಹಾಗೂ ಬುದ್ಧಿವಂತಿಕೆ ಇರಲಿದ್ದು, ಯಾರು ಕೂಡ ಪೋಷಕರು ಎದೆಗುಂದಬಾರದು, ಏಷ್ಟೋ ಜನಕ್ಕೆ ಮಕ್ಕಳೇ ಇಲ್ಲ,ದೇವರ ಮೊರೆ ಹೋಗಿ ಮಕ್ಕಳನ್ನು ಕರುಣಿಸು ಎಂದು ಹೀಗಾಗಿ ಇವರು ದೇವರು ಸಮಾನ, ಇವರ ಇಟ್ಟು ಕೊಂಡು ಇದರ ಸದುಪಯೋಗ ಪಡೆದುಕೊಂಡು ಸಾಧನೆಗೈಯ್ಯುವ ಮೂಲಕ ತಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಬೇಕೆಂದು ಹೇಳಿದ ಅವರು ಯಾವುದೇ ನೂನ್ಯತೆ ಇಲ್ಲದೇ ಎಲ್ಲಾ ರೀತಿಯಲ್ಲೂ ಚೆನ್ನಾಗಿರುವ ಮಕ್ಕಳಿಗೆ ಚಂಚಲತೆ ಇರುತ್ತದೆ.
ಆದರೆ, ವಿಶೇಷ ಚೇತನ ಮಕ್ಕಳಿಗೆ ಯಾವುದೇ ರೀತಿಯ ಚಂಚಲತೆ ಇಲ್ಲದ ಕಾರಣ ವಿಶೇಷ ಪ್ರತಿಭೆ ಹಾಗೂ ಜಾಣ ತಲೆ ಇರುತ್ತದೆ. ಆದ್ದರಿಂದ ಇದರ ಸದುಪಯೋಗ ಪಡೆದುಕೊಂಡು ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು. ನಮ್ಮ ಕ್ಷೇತ್ರದಲ್ಲಿ ಕೂಡ ವಿಕಲಚೇತನರಿಗೆ ಎಲ್ಲ ರೀತಿಯ ತ್ರಿಚಕ್ರ ವಾಹನ, ಆರೋಗ್ಯ ಶಿಬಿರ ಏರ್ಪಡಿಸಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಔಷಧಿ ವಾಕಿಂಗ್ ಸ್ಟಿಕ್, ಕೃತಕ ಕಾಲು ಜೋಡಣೆ ಸೇರಿದಂತೆ ಹಲವು ರೀತಿಯ ಅವರಿಗೆ ಅವಶ್ಯಕ ವಸ್ತುಗಳನ್ನು ನೀಡುವ ಮೂಲಕ ಅವರು ಕೂಡ ಸಮಾಜದಲ್ಲಿ ಎಲ್ಲರಂತೆ ಬದುಕು ಕಟ್ಟಿಕೊಳ್ಳಲು ನೆರವು ನೀಡಿದ್ದೇನೆ.
ಮತ್ತು ಮಕ್ಕಳ ಮಾನಸಿಕ ಹಾಗೂ ದೈಹಿಕ ಸಮತೋಲನದ ಬೆಳವಣಿಗೆಗೆ ಈ ರೀತಿ ಕ್ರೀಡೆಗಳು ಅಗತ್ಯ, ನಾನು ಪ್ರತಿ ವರ್ಷ ವಿಶೇಷ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ವಯಕ್ತಿಕವಾಗಿ 1 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಹೇಳಿದ ಗೋಪಾಲಯ್ಯ ರವರು ಇವತ್ತು ಇದನ್ನು ಸಂಘಟಿಸಿದ ಆಶಾ ಚಾರಿಟೇಬಲ್ ಟ್ರಸ್ಟ್ ನವರಿಗೆ ಅಭಿನಂದನೆಗಳು ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರುಗಳಾದ ಶ್ರೀನಿವಾಸ್ ಬಿಡಿ, ಬಿಎಂ, ಆರ್ ಮಂಜುನಾಥ್, ಶ್ರೀನಿವಾಸ್ ಬಿಡಿ ಚಿಕ್ಕಸ್ವಾಮಿ ಹಿರಿಯ ಪೊಲೀಸ್ ಅಧಿಕಾರಿಗಳು ಬಸವೇಶ್ವರ ನಗರ…,ದುರ್ಗಾ ಕೆ ಪಿ ಎಸ್, ಸಂಚಾರಿ ಇನ್ಸಪೆಕ್ಟರ್ ಬೆಂಗಳೂರು ನಗರ, ಸುಚಿತ್ರ ಸೋಮಶೇಖರ್,ಸಂಸ್ಥಾಪಕರು ಸೃಷ್ಠಿ ಅಕಾಡಮಿ, ಆಶಾ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕರಾದ ಜಯಶ್ರೀ ರಮೇಶ್ ಸೇರಿದಂತೆ ವಿಶೇಷ ಚೇತನ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.