ನೆಲಮಂಗಲ: NITಸೇರಿದಂತೆ ಉನ್ನತ ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸುವ ಎಇಇ (Joint Entrance
Exam) ಮೇನ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಹೊಯ್ಸಳ ಪದವಿ ಪೂರ್ವ ಕಾಲೇಜಿನ 45 ಕ್ಕೂ ಅಧಿಕ ವಿದ್ಯಾರ್ಥಿಗಳು ನಿಗಧಿಪಡಿಸಿದ ಅಂಕ ಗಳಿಗಿಂತ ಅಧಿಕ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಅದರಲ್ಲಿ 5 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ. ಜೀವಿತ [98%], ಅಮಿತ್ [96%] ಲಾವಣ್ಯ [96%] ನಿಖಿಲ್ [96%] ಶಿಲ್ಪಶ್ರೀ [92%] ಎಂಬ ವಿದ್ಯಾರ್ಥಿಗಳು 90% ಕ್ಕಿಂತ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾಗಿದ್ದು.15 ವಿದ್ಯಾರ್ಥಿಗಳು 80% ಅಂಕ ಪಡೆದಿದ್ದು ಇನ್ನುಳಿದ ವಿದ್ಯಾರ್ಥಿಗಳು ನಿಗಧಿಪಡಿಸಿದ ಅಂಕಗಳಿಗಿಂತ ಅಧಿಕ ಅಂಕಗಳನ್ನು ಪಡೆದು ಎಇಇ Advance ಪರೀಕ್ಷೆ ಬರೆಯಲು ಅರ್ಹತೆ ಪಡೆದು ಹೊಯ್ಸಳ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಶಿರಡಿ ಸಾಯಿ ಶಿಕ್ಷಣ ದತ್ತಿ ಸಂಸ್ಥೆಯ ಅಧ್ಯಕ್ಷ ರಾಮಕೃಷ್ಣಪ್ಪ, ಮಾತನಾಡಿ ಈ ಅತ್ಯುತ್ತಮ ಫಲಿತಾಂಶಕ್ಕೆ ವಿದ್ಯಾರ್ಥಿಗಳ ಪರಿಶ್ರಮ, ಅನುಭವಿ ಉಪನ್ಯಾಸಕರ ಬೋಧನೆ ಹಾಗೂಅತ್ಯುತ್ತಮ ಮಾರ್ಗದರ್ಶನ. ಪ್ರಾಂಶುಪಾಲರ ಅತ್ತಿವ ಕಾರ್ಯವೈಖರಿ ಹಾಗೂ ಪೋಷಕರು ಮತ್ತು ನೆಲಮಂಗಲ ಜನತೆಯಸಹಕಾರದಿಂದ ಅತ್ಯುತ್ತಮ ಫಲಿತಾಂಶ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರೊ.K.V ಗೌರಿಶಂಕರ್ ಮತ್ತು ಉಪ ಪ್ರಾಂಶುಪಾಲರು H.R ಗೋಪಾಲ್, ಉಪನ್ಯಾಸಕರಾದ ಚಿದಾನಂದ ಗೌಡ, ಮಹದೇವಪ್ಪ ಗೌಡ, ಪೂರ್ಣಿಮಾ, ಅನಂತರಾಮು, ವಿಕಾಸ್.ಶ್ರೀಮತಿ ಗೀತಾ, ಹಾಗೂ ಕಾಲೇಜು ಭೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.