This is the title of the web page
This is the title of the web page

ಅಬಕಾರಿ ಇಲಾಖೆ ಕಾರ್ಯಾಚರಣೆ : 39,56,468 ರೂ. ಮೌಲ್ಯದ ಮದ್ಯ ವಶ

ಚಾಮರಾಜನಗರ: ಕಂಟ್ರೋಲಿಂಗ್ ಅಬಕಾರಿ ಭದ್ರತಾ ಚೀಟಿಗಳು ಇಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ 39,56,468 ರೂ ಮೌಲ್ಯದ 5481 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಶನಿವಾರ (ಏ.8) ದಂದು ಸಂಜೆ 5.15 ಗಂಟೆ ಸಮಯದಲ್ಲಿ ಚಾಮರಾಜನಗರದ ಕೆ.ಎಸ್.ಬಿ.ಸಿ.ಎಲ್ ಡಿಪೋಗೆ ಚಿಕ್ಕಬಳ್ಳಾಪುರದ ಬ್ಲೂ ಏಷಿಯನ್ ಬ್ರೆವರೇಜಸ್ ಲಿಮಿಟೆಡ್ ನಿಂದ ಸರಬರಾಜಾದ 630 ಪೆಟ್ಟಿಗೆಗಳಲ್ಲಿ 5 ಪೆಟ್ಟಿಗೆಗಳಲ್ಲಿ ಇನ್ನರ್ ಕಾರ್ಟನ್ ಬಾಕ್ಸ್ ನ ಕಂಟ್ರೋಲಿಂಗ್ ಅಬಕಾರಿ ಭದ್ರತಾ ಚೀಟಿಗಳು ಇಲ್ಲದೇ ಇರುವುದು ಕಂಡುಬಂತು ಈ ಹಿನ್ನೆಲೆಯಲ್ಲಿ ಒಟ್ಟಾರೆ 5481 ಲೀಟರ್ ಮದ್ಯವನ್ನು ವಶಕ್ಕೆ ಪಡೆದು ಡಿಸ್ಟಿಲರಿ ಸನ್ನದುದಾರರು ಹಾಗೂ ಚಾಲಕರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.

ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ (ಜಾರಿ ಮತ್ತು ತನಿಖೆ) ನಿರ್ದೆಶನದ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಅಬಕಾರಿ ಉಪ ಆಯುಕ್ತರಾದ ಆರ್. ನಾಗಶಯನ, ಅಬಕಾರಿ ಉಪ ಅಧೀಕ್ಷಕರಾದ ಎಂ.ಡಿ. ಮೋಹನ್‍ಕುಮಾರ್, ಅಬಕಾರಿ ನಿರೀಕ್ಷಕರಾದ ಮೀನಾ, ಕೆ.ಎಸ್.ಬಿ.ಸಿ.ಎಲ್ ಡಿಪೋ ವ್ಯವಸ್ಥಾಪಕರಾದ ಬಸವರಾಜು, ಅಬಕಾರಿ ನಿರೀಕ್ಷಕರಾದ ಗುರುನಾಥಶೆಟ್ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.