ಬೆಂಗಳೂರು: ಪೆಟ್ರೋಲ್ ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಪೆಟ್ರೋಲ್ ಮೇಲಿನ ಶೇ. 13ರಷ್ಟು ತೆರಿಗೆ ಪೈಕಿ ಶೇ.10ರಷ್ಟು ಕಡಿಮೆ ಮಾಡಿರುವ ಕೇಂದ್ರ ಕೇವಲ ಶೇ.3ರಷ್ಟು ತೆರಿಗೆ ವಿಧಿಸಿದೆ. ಡಿಸೇಲ್ ಮೇಲಿದ್ದ ಶೇ.10ರಷ್ಟು ತೆರಿಗೆಯನ್ನು ಶೂನ್ಯಕ್ಕೆ ಇಳಿಸಿದೆ. ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ಗೆ 3 ರೂಪಾಯಿ ಮತ್ತು ಡೀಸೆಲ್ ಸುಂಕ ಶೂನ್ಯಕ್ಕೆ ಇಳಿದಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಮತ್ತು ಅದರ ಪರಿಣಾಮವಾಗಿ ಟೆಹ್ರಾನ್ ಹಾರ್ಮುಜ್ ಜಲಸಂಧಿಯ ಮೇಲೆ ಹೇರಿದ ದಿಗ್ಬಂಧನದಿAದ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನಿಂದಾಗಿ ಬೆಲೆ ಏರಿಕೆಯಾಗುವ ಭೀತಿಯ ಮಧ್ಯೆ ಈ ಕಡಿತ ಮಾಡಲಾಗಿದೆ. ಪೆಟ್ರೋಲ್ ಲೀಟರ್ಗೆ 13 ರೂ.ನಿಂದ 3 ರೂ.ಗೆ ಇಳಿಸಲಾಗಿದೆ.ಕೇಂದ್ರ ಸರ್ಕಾರವು ಈ ಹಿಂದೆ ಮೇ 2022 ರಲ್ಲಿ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಇದರ ನಂತರ, ಪೆಟ್ರೋಲ್ ಪ್ರತಿ ಲೀಟರ್ಗೆ 8 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ಗೆ 6ರೂ.ನಷ್ಟು ಅಗ್ಗವಾಗಿತ್ತು. ಸರ್ಕಾರದ ಈ ಕ್ರಮವು ಸಾಮಾನ್ಯ ಜನರಿಗೆ ಎಷ್ಟು ಪರಿಹಾರವನ್ನು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.ಇಸ್ರೇಲ್-ಇರಾನಿನ ಸಂಘರ್ಷದ ಮಧ್ಯೆ ಟೆಹ್ರಾನ್ ಭಾರತಕ್ಕೆ ಹಾರ್ಮುಜ್ ಜಲಸಂಧಿಯನ್ನು ತೆರೆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ನ ದಿಗ್ಬಂಧನವು ಜಾಗತಿಕ ಪೂರೈಕೆ ಸರಪಳಿ ಬಿಕ್ಕಟ್ಟನ್ನು ಸೃಷ್ಟಿಸಿತ್ತು.ದೇಶದ ಅತಿದೊಡ್ಡ ಖಾಸಗಿ ಇಂಧನ ವ್ಯಾಪಾರಿ ನಯಾರ ಎನರ್ಜಿ ಇಂಧನ ಬೆಲೆಯಲ್ಲಿ ತೀವ್ರ ಏರಿಕೆ ಮಾಡಿದ ನಂತರ ಸರ್ಕಾರ ಈ ಕ್ರಮ ಕೈಗೊಂಡಿದೆ.



