ಬೆಂಗಳೂರು: ಬೆಂಗಳೂರು ಆವೃತ್ತಿಯ ಕೊನೆಯ ಪ್ರೊ ಕಬಡ್ಡಿ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ರೋಚಕ ಗೆಲುವು ಕಂಡಿದೆ. ಕೊನೆಯ ನಿಮಿಷದಲ್ಲಿ ಹೋರಾಟವನ್ನು ತೀವ್ರಗೊಳಿಸಿ ಜೈಪುರ್ ಪಿಂಕ್ ಪ್ಯಾಂಥರ್ ವಿರುದ್ಧ 32-30 ಅಂತರದ ಜಯ ಸಾಧಿಸಿತು.ಇದು 6 ಪಂದ್ಯಗಳಲ್ಲಿ ಬುಲ್ಸ್ಗೆ ಒಲಿದ 2ನೇ ಗೆಲುವು.
ಈ ಎರಡೂ ಜಯ ಬೆಂಗಳೂರು ಆವೃತ್ತಿಯಲ್ಲೇ ಒಲಿದದ್ದು ವಿಶೇಷ. ಇನ್ನೊಂದೆಡೆ ಜೈಪುರ್ 4ನೇ ಪಂದ್ಯದಲ್ಲಿ 2ನೇ ಸೋಲು ಕಂಡಿತು. ಒಂದರಲ್ಲಿ ಜಯ ಸಾಧಿಸಿದ್ದು, ಇನ್ನೊಂದು ಟೈ ಆಗಿದೆ. ಕೊನೆಯ ರೈಡ್ನಲ್ಲಿ ಭವಾನಿ ರಜಪೂತ್ ಅವರನ್ನು ಟ್ಯಾಕಲ್ ಮಾಡಿದ ನಾಯಕ ಸೌರಭ್ ನಂದಲ್ ಬುಲ್ಸ್ಗೆ ಅಮೂಲ್ಯ ಅಂಕಗಳನ್ನು ತಂದಿತ್ತರು.