ಕನಕಪುರ: ವಿಶೇಷ ಚೇತನ ಮಕ್ಕಳು ಪ್ರತಿನಿತ್ಯ ತಪ್ಪದೇ ವ್ಯಾಯಾಮ ಮಾಡುವುದರಿಂದ ಅವರು ದೈಹಿಕ ಹಾಗೂ ಮಾನಸಿಕ ಸದೃಢರಾಗಬಹುದು ಎಂದು ದಯಾನಂದ ಸಾಗರ್ ಆಸ್ಪತ್ರೆಯ ಫಿಜಿಯೋಥೆರಪಿ ವೈದ್ಯೆ ಪೆಬಾ ತಿಳಿಸಿದರು.
ನಗರದ ಎಸ್ಆರ್ಪಿ ಕಚೇರಿಯಲ್ಲಿ ದಯಾನಂದ ಸಾಗರ್ ಆಸ್ಪತ್ರೆ ಫಿಸಿಯೋ ಸೆಂಟರ್ ವಿಭಾಗ ಹಾಗೂ ಲಯನ್ಸ್ ಸಂಸ್ಥೆ ವತಿಯಿಂದ ವಿಶೇಷ ಚೇತನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಲಕ್ಷದ ಲ್ಲಿ 2 ಅಥವಾ 3 ಮಕ್ಕಳಿಗೆ ಅಂಗವಿಕಲತೆ ಕಾಣಿಸಿಕೊಳ್ಳು ತ್ತದೆ ಫಿಜಿಯೋಥೆರಪಿಯಿಂದ ವಿಶೇಷ ಚೇತನ ಮಕ್ಕಳಿಗೆ ಸ್ವತಂತ್ರವಾಗಿ ಬದುಕಲು ದೈಹಿಕ ಮತ್ತು ಮಾನಸಿಕ ಶಕ್ತಿ ಸಿಗಲಿದೆ ಎಂದರು.
ವಿಶೇಷ ಚೇತನ ಮಕ್ಕಳು ಪ್ರತಿನಿತ್ಯ ವ್ಯಾಯಾಮವನ್ನು ಮಾಡುವುದರಿಂದ ಮಕ್ಕಳ ವೈಲ್ಯವಿರುವ ಮೂಳೆ ಮಾಂಸಗಳಲ್ಲಿ ಶಕ್ತಿ ಬರಲಿದೆ ಮಕ್ಕಳಲ್ಲಿ ನೆನಪಿನ ಶಕ್ತಿ ಜೊತೆಗೆ ಏಕಾಗ್ರತೆ ಹೆಚ್ಚಾಗುತ್ತದೆ ಯಾವುದೇ ಮಕ್ಕಳು ಪೋಷಕರಿಗೆ ಹೊರೆಯಾಗಬಾರದು ಎಂಬ ಉದ್ದೇಶ ದಿಂದ ಅವರಿಗೆ ಫಿಸಿಯೋಥೆರಪಿ ಮಾಡುತ್ತಿದ್ದೇವೆ, ಪೋಷಕರು ತಮ್ಮ ಮಕ್ಕಳಿಗೆ ಸಂಪೂರ್ಣವಾದ ಚಿಕಿತ್ಸೆ ಯನ್ನು ಕೊಡಿಸುವುದರಿಂದ ಮಕ್ಕಳು ಯಾರಿಗೂ ಹೊರೆ ಯಾಗದೆ ತಮ್ಮ ಅಂಗ ವೈಕಲ್ಯದಿಂದ ಹೊರಬಂದು ಸ್ವತಂತ್ರವಾಗಿ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.
ಡಾ. ವಿಜಯಕುಮಾರ್ ಮಾತನಾಡಿ ವಿಶೇಷ ಚೇತನ ಮಕ್ಕಳು ದೇವರು ಕೊಟ್ಟ ಮಕ್ಕಳು ಎಂದು ಭಾವಿಸಬೇಕು ಪೋಷಕರು ತಾಯಂದಿರು ವಿಶೇಷ ಚೇತನ ಮಕ್ಕಳನ್ನು ಹೆಚ್ಚಿನ ಮುತುವರ್ಜಿ ವಹಿಸಿ ಹಾರೈಕೆ ಮಾಡಬೇಕು ತಾಯಿಯೇ ಮೊದಲ ಗುರು ಆ ಮಕ್ಕಳಲ್ಲಿ ಬದಲಾವಣೆ ಯನ್ನು ತರುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಿ ಎಸ್ ಆರ್ ಪಿ ಕೇಂದ್ರದಲ್ಲಿ ಮಕ್ಕಳಿಗೆ ಚಿಕಿತ್ಸೆಯನ್ನು ಕೊಡಿಸಿ ಈ ಮಕ್ಕಳಿಗೆ ಸರಿ ತಪ್ಪುಗಳ ಅರಿವಿರುವುದಿಲ್ಲ ಪೋಷಕರು ಮಕ್ಕಳನ್ನು ಕಡೆಗಣಿಸಬೇಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ದೆ ಗಳನ್ನು ನಡೆಸಿ ವಿಜೇತ
ರಾದ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಬಿ ಆರ್ ಸಿ ಶಿವಣ್ಣ, ಬಿ ಆರ್ ಪಿ ಪವಿತ್ರ,ಬಿಐಇಆರ್ಟಿ ಜಗದೀಶ್, ಉಮೇಶ್ಬಾಬು, ಎಸ್.ಬಿ.ಗೌಡ, ಲಯನ್ಸ್ ಮರಸಪ್ಪ ರವಿ,ಲಯನ್ಸ್ ಹರೀಶ್,ಲಯನ್ಸ್ ಗೋಪಾಲ್, ವೆಂಕಟೇಶ್, ಬಸವರಾಜ್, ದಯಾನಂದ ಸಾಗರ್ ಆಸ್ಪತ್ರೆ ಫಿಜಿಯೋಥೆರಪಿ ವೈದ್ಯ ಕಂಚನ್ ಹಾಗೂ ಸಿಬ್ಬಂದಿಗಳು, ವಿಶೇಷ ಚೇತನ ಮಕ್ಕಳು ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.