ಬೆಂಗಳೂರು ನಗರ ಜಿಲ್ಲೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22, 2022-23 ರ ಜುಲೈ ಆವೃತ್ತಿಗಳಲ್ಲಿ ಪ್ರಥಮ/ದ್ವಿತೀಯ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು 2023-24ನೇ ಸಾಲಿಗೆ (ಜುಲೈ ಆವೃತ್ತಿ) ದ್ವಿತೀಯ / ತೃತೀಯ ಬಿ.ಎ/ ಬಿ.ಕಾಂ/ ಬಿ.ಎಸ್ಸಿ (ಜನರಲ್ / ಹೋಮ್ ಸೈನ್ಸ್/ ಐಟಿ), ಬಿ.ಸಿ.ಎ/ ಬಿ.ಬಿ.ಎ ಹಾಗೂ 2021-22, 2022-23ರ ಅಂತಿಮ ಎಂ.ಎ (ಎಂ.ಸಿ.ಜೆ)/ ಎಂ.ಕಾಂ/ ಎಂ.ಬಿ.ಎ/ ಎಂಎಸ್ಸಿ ಕೋರ್ಸ್ ಗಳಿಗೆ ಬೋಧನಾ ಶುಲ್ಕವನ್ನು ದಂಡ ಶುಲ್ಕವಿಲ್ಲದೇ ಪಾವತಿಸಲು ಡಿಸೆಂಬರ್ 15 ರವೆರೆಗೆ ಅವಧಿ ವಿಸ್ತರಿಸಲಾಗಿದೆ.
ಮತ್ತು ರೂ.400 ದಂಡದೊಡನೆ ಡಿಸೆಂಬರ್ 31 2023 ರವರೆಗೆ ವಿದ್ಯಾರ್ಥಿಗಳು ಆನ್ ಲೈನ್ www.ksoumysuru.ac.in ಮೂಲಕ ಬೋಧನಾ ಶುಲ್ಕವನ್ನು ಪಾವತಿಸಬಹುದು. ಪಾವತಿಸಿದ ರಸೀದಿ ಮತ್ತು ಅರ್ಜಿಯೊಂದಿಗೆ 15 ದಿನಗಳ ಒಳಗಾಗಿ ಪ್ರವೇಶಾತಿ ಪಡೆದ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಪ್ರವೇಶಾತಿ ನವೀಕರಣ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳು ಪೂರ್ಣಗೊಳಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಪ್ರಾದೇಶಿಕ ಕೇಂದ್ರ -01, ಮೊದಲನೇ ಮಹಡಿ, ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು- 26 ಅಥವಾ ಕಛೇರಿಯ
ದೂರವಾಣಿ ಸಂಖ್ಯೆ: 080-26603664 ಹಾಗೂ 98449-65515 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ಪ್ರಾದೇಶಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.