This is the title of the web page
This is the title of the web page

ಫೇಸ್ಬುಕ್ ಸಕ್ರಿಯ ಯುವಕರು ನನ್ನ ಅಣ್ಣ, ತಮ್ಮಂದಿರು: ಬಾಲಕೃಷ್ಣ

ಮಾಗಡಿ: ಸಾಮಾಜಿಕ ಜಾಲತಾಣ, ವ್ಯಾಟ್ಸಪ್, ಟ್ವಿಟರ್ ಇನ್ಸ್ಟಾಗ್ರಾಮ್, ಖಾತೆಯಲ್ಲಿ ನನ್ನ ಒಂದೇ ಒಂದು ಭಾವಚಿತ್ರವನ್ನು ಹಾಕಿ ನಮಗೆ ಪ್ರಚಾರ ನೀಡಲು ಸಕ್ರಿಯವಾಗಿರುವ ಪ್ರತಿಯೊಬ್ಬ ಯುವಕರು ಕೂಡಾ ನನ್ನ ಅಣ್ಣ ತಮ್ಮಂದಿರ ಸಮಾನರು ಎಂದು ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ”ಯುವ ಶಕ್ತಿಗಳ ಸ್ನೇಹ ಸಮ್ಮಿಲನ” ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದಿನ ಓಡುತ್ತಿರುವ ತಂತ್ರಜ್ಞಾನ ಯುಗದಲ್ಲಿ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾದ್ಯಮಗಳಿಗಿಂತ ಅತಿ ವೇಗವಾಗಿ ಯಾವುದೇ ವಿಚಾರಗಳು ವಿನಿಮಯವಾಗಬೇಕಾದರೆ ಫೇಸ್ಬುಕ್, ವ್ಯಾಟ್ಸಪ್, ಟ್ವಿಟರ್ ಸೇರಿದಂತೆ ಇತರೆ ವೇದಿಕೆಗಳು ಪ್ರದಾನ ಪಾತ್ರ ವಹಿಸುತ್ತವೆ.ಅದರಲ್ಲೂ ರಾಜಕಾರಣಿಗಳು ಇವುಗಳು ಅತ್ಯವಶ್ಯಕವಾಗಿ ಸಹಕಾರಿಯಾಗಲಿವೆ.

ನನ್ನ ಯಾವುದೇ ಕಾರ್ಯಕ್ರಮದ ಒಂದೊಂದು ವಿಡಿಯೋ  ಫೋಟೋಗಳನ್ನು ಮೇಲಿನವುಗಳಲ್ಲಿ ಬಿತ್ತರಿಸುವ ಪ್ರತಿಯೊಬ್ಬರೂ ನನ್ನ ಸಹೋದರ ಅಶೋಕ್ ಹೇಗೋ ನೀವು ಕೂಡಾ ನನ್ನ ಸಹೋದರರೇ ಆದಕಾರಣವಾಗಿ ನಮ್ಮ ಕುಟುಂಬದ ವತಿಯಿಂದ ನಿಮಗೆ ಅಭಾರಿಯಾಗಿರುತ್ತೇನೆ ಎಂದು ಬಾಲಕೃಷ್ಣ ತಿಳಿಸಿದರು.

ಈ ಕ್ಷೇತ್ರದ ಶಾಸಕರು ಕೇವಲ ರಸ್ತೆ ಚರಂಡಿ ಗುದ್ದಲಿಪೂಜೆ ಮಾಡುವುದರಲ್ಲಿಯೇ ತಮ್ಮ ಅಧಿಕಾರಾವಧಿಯ ಕಾಲಹರಣ ಮಾಡಿದರು.ನಾನು ಇಪ್ಪತ್ತು ತಿಂಗಳ ಅಧಿಕಾರಾವಧಿಯಲ್ಲಿ ಹತ್ತು ಹಲವಾರು ಗುರುತರವಾದ ಶಾಶ್ವತ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ.ಇವರ ಹದಿನಾಲ್ಕು ತಿಂಗಳ ಅಧಿಕಾರಾವಧಿಯಲ್ಲಿ ಒಂದೇ ಒಂದು ಶಾಶ್ವತ ಅಭಿವೃದ್ಧಿ ಕಾಮಗಾರಿಯ ಸಾಕ್ಷಿಗುಡ್ಡೆ ಇಲ್ಲ.ಇದನ್ನು ನನ್ನ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಭಿತ್ತರಿಸಬೇಕು.ಕೇವಲ ಮಾದ್ಯಮದವರ ಮುಂದೆ ಬಡಾಯಿ ಕೊಚ್ಚಿಕೊಳ್ಳುವ ಇವರು ನಮ್ಮ ಕುಟುಂಬದ ವಿರುದ್ದವಾಗಿ ವ್ಯಂಗ್ಯವಾಡುತ್ತಾರೆ.ಈ ತಾಲ್ಲೂಕಿನಲ್ಲಿ ಏನೆಲ್ಲಾ ಅಭಿವೃದ್ಧಿಗಳಾಗಿವೆ ಅವುಗಳೆಲ್ಲವೂ ನನ್ನವೇ ಎಂದು ಸ್ಪಷ್ಟಪಡಿಸಿದರು.

ನಾನು ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದರೂ ಕೂಡಾ ಮನೆಯಲ್ಲಿ ಕೂರದೇ ನನ್ನನ್ನು ನಂಬಿದ ಕಾರ್ಯಕರ್ತರಿಗೋಸ್ಕರವಾಗಿ ಸದಾಕಾಲವೂ ನಿಂತಿದ್ದೇನೆ.ನನ್ನ ಒಬ್ಬೇ ಒಬ್ಬ ಕಾರ್ಯಕರ್ತರನ್ನು ಮುಟ್ಟಲು ಬಿಟ್ಟಿಲ್ಲ ಬಿಡುವುದೂ ಇಲ್ಲ.ಶಾಸಕರು ತಮ್ಮನ್ನು ನಂಬಿರುವ ಕಾರ್ಯಕರ್ತರನ್ನು ರಕ್ಷಿಸುವುದಿರಲಿ ಸ್ವಿಚ್ ಆಫ್ ಮಂಜಣ್ಣ ನಾನು ಸ್ವಿಚ್ ಆನ್ ಬಾಲಕೃಷ್ಣ ಎಂದರು.

ಮೆಗಾಡೈರಿ, ನಮ್ಮದು ಕೆಶಿಪ್ ರಸ್ತೆ, ಗಾರ್ಮೆಂಟ್ಸ್ ನನ್ನದೇ, ಸತ್ಯಗಾಲ ನನ್ನ ಕನಸಿನ ಕೂಸು ಎಂದು ಬೊಗಳೆ ಬಿಡುವುದನ್ನು ಬಿಟ್ಟರೆ ಶಾಸಕರ ಅಭಿವೃದ್ಧಿ ಶೂನ್ಯ, ಪಾರಂಗ ಶಾಲೆಯ ಮಕ್ಕಳಿಗೆ ಟಿ.ಸಿ.ಕೊಡಿಸಲು ಬಾಲಕೃಷ್ಣ ಬೇಕು,ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಹನ್ನೊಂದು ವಿದ್ಯಾರ್ಥಿಗಳ ಫಲಿತಾಂಶ ತೊಂದರೆಯಾದರೆ ಬಾಲಕೃಷ್ಣ,ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆಗೆ ನಾನು ಬೇಕು ಎಂದ ಅವರು,ಒಂದು ಭಾರೀ ಕುಮಾರಣ್ಣ ನಮ್ಮಣ್ಣ ಎನ್ನುತ್ತಾರೆ,ಮತ್ತೊಂದು ಕಡೆಯಲ್ಲಿ ಅಶ್ವತ್ ನಾರಾಯಣ್ ನನ್ನ ದೊಡ್ಡಣ್ಣ ಎಂಬ ತದ್ವಿರುದ್ಧವಾದ ಹೇಳಿಕೆ ನೀಡುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ಅವರಿಗೆ ಸ್ಪಷ್ಟವಾದ ನಿಲುವು ಬದ್ದತೆಯಿಲ್ಲ ಎಂದು ಬಾಲಕೃಷ್ಣ ಹರಿಹಾಯ್ದರು.

ಇಡೀ ತಾಲ್ಲೂಕಿನಲ್ಲಿ ಒಬ್ಬೇ ಒಬ್ಬ ಕಾಂಗ್ರೆಸ್ ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿರುವುದು ಹೊರತುಪಡಿಸಿದರೆ ನಮ್ಮಲ್ಲಿ ಯಾರೂ ಕೂಡಾ ಕಳಪೆ ಕಾಮಗಾರಿ ಮಾಡಿಲ್ಲ ಗುಣಮಟ್ಟದ ಕಾಮಗಾರಿಗೆ ನಾನು ಹೆಸರುವಾಸಿ ಎಂದು ಪಟ್ಟಣದ ಗೌರಮ್ಮನಕೆರೆ ಬಳಿ ಮಾದ್ಯಮದವರ ಪ್ರಶ್ನೆಗೆ ಶಾಸಕರು ಉತ್ತರ ನೀಡಿದ್ದರು. ಕಾಮಗಾರಿ ಮುಗಿದ ಎರಡೇ ತಿಂಗಳಲ್ಲಿ ಇದೇ ರಸ್ತೆ ಕಿತ್ತುಹೋಗಿದೆ ಎಂದು ಮಾದ್ಯಮದವರೇ ಸುದ್ದಿ ಮಾಡಿದ್ದಾರೆ ಇದು ಶಾಸಕರ ಅಭಿವೃದ್ಧಿಯಾಗಿದೆ.

ತಾಲ್ಲೂಕು ಕಚೇರಿ,ಗ್ರಾಪಂ,ಪುರಸಭೆ,ಸರಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ ತಾಂಡವವಾಡುತ್ತಿದ್ದು ಇದನ್ನು ತಡೆಯುವುದಿರಲಿ ಎರಡ್ಮೂರು ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ಕರೆಯದಿರುವುದೇ ಶಾಸಕರ ಐದು ವರ್ಷಗಳ ಅಧಿಕಾರಾವದಿಯ ಗುರುತರವಾದ ಸಾಧನೆಯಾಗಿದೆ ಎಂದು ಬಾಲಕೃಷ್ಣ ಶಾಸಕ ಎ.ಮಂಜುನಾಥ್ ವಿರುದ್ದ ಹರಿಹಾಯ್ದರು.