ನಿನ್ನೆ ಸಂಜೆಯವರೆಗೂ ಚೆನ್ನಾಗಿ ಕೆಲಸ ಮಾಡುತ್ತಿದ್ದ ಫೇಸ್ಬುಕ್ ಇದ್ದಕ್ಕಿದ್ದ ಹಾಗೆ 9ಗಂಟೆಯ ಹೊತ್ತಿಗೆ ಸರಿಯಾಗಿ ಬರುತ್ತಿದ್ದ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಸೆಷನ್ ಲಾಗಡ್ ಔಟ್ ಲಾಗಿನ್ ಅಗೈನ್ ಎಂದು ತೋರಿಸಲು ಆರಂಭವಾಯಿತು. ಈ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಜನರು ಫೇಸ್ಬುಕ್ ಇನ್ಸ್ಟಾಗ್ರಾಂ ಬಳಸುತ್ತಿರುತ್ತಾರೆ.
ಎಲ್ಲ ವಾಟ್ಸ್ ಆಪ್ ಗ್ರೂಪ್ಗಳಲ್ಲೂ ಇದೆ ಚರ್ಚೆಯೇ ಆರಂಭವಾಯಿತು. ನನ್ನ ಸುಮಾರು 10-15 ಗುಂಪುಗಳಲ್ಲಿ 4-5 ಗುಂಪುಗಳಲ್ಲಿ ಇದೇ ಚರ್ಚೆ ಎಲ್ಲರಿಗೂ ಏನೋ ಕಳೆದುಕೊಂಡ ಅನುಭವ ಒಬ್ಬೊಬ್ಬರಿಗೆ ಒಂದೊಂದು ಚಿಂತೆ ಒಬ್ಬರು ಅವರು ಮಾಡಿದ ರೀಲ್ ಹೋದರೆ ಎಂಬ ಚಿಂತೆಯಲ್ಲಿದ್ದರೆ, ಇನ್ನೊಬ್ಬರು ಫೇಸ್ಬುಕ್ ನಲ್ಲಿ ಇಲ್ಲಿಯವರೆಗೆ ಇರುವ ಫೋಟೋಗಳು ಹೋದರೆ ಎಂದು ಚಿಂತಿಸಿದರು, ಮತ್ತೊಬ್ಬರು ಪಾಸ್ ವಾರ್ಡ್ ನೆನಪಿಲ್ಲ ಹೊಸ ಮಾಡಬೇಕೆ ಎಂದರು,
ಮತ್ತೆ ಕೆಲವರು ಎಲ್ಲರೂ ಕೇವಲ ವಾಟ್ಸ್ಆಪ್ಗಳಲ್ಲಿ ಮಾತ್ರ ಸಿಗುವುದೇ ಕೆಲವರಂತೂ 10-15 ಬಾರಿ ಲಾಗಿನ್ ಆಗಲು ಪ್ರಯತ್ನ ಮಾಡಿ ಅದರ ನೋಟಿಫಿಕೇಷನ್ ಕೂಡ ಶೇರ್ ಮಾಡಿಕೊಂಡಿದ್ದಾರೆ. ಎಷ್ಟು ದೊಡ್ಡ ಮಟ್ಟದ ಅಡಿಕ್ಷನ್ ಅಲ್ಲವೇ?ಇಂದಿನ ದಿನಮಾನದಲ್ಲಿ ಎಲ್ಲ ವಯೋಮಾನದ ಜನರು ಅಂತರ್ಜಾಲದ ಜಾಲದೊಳಗೆ ಎಷ್ಟು ಮುಳುಗಿ ಹೋಗಿದ್ದಾರೆಂದು ನಿನ್ನೆಯ ದಿನ ಖಚಿತವಾಯಿತು.
ಸಾಮಾಜಿಕ ಜಾಲತಾಣಗ:ಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವುದು ತಿಳಿದಿರುವ ವಿಷಯವೇ ಆದರೆ 1-2 ತಾಸುಗಳೂ ಅದನ್ನು ಬಿಟ್ಟಿರಲು ಸಾಧ್ಯವೇ ಇಲ್ಲವೇ? ಎನ್ನುವ ಪ್ರಶ್ನೆ ಬಂದಿದ್ದಂತೂ ಸಹಜ.ಇಂತಹ ಘಟನೆಗಳು ಹಿಂದೂ ಆಗಿವೆ ಮೊದಲೇಲ್ಲಾ ಯಾವುದೋ ಒಂದು ಆಪರೇಷನ್ ಬಳಸಲು ಬಂದಿರುವುದು ಗಮನ ಬಂದಾಗ ಹ್ಯಾಕ್ ಆಗಿರಬಹುದೇನೋ ಎಂಬ ಅಂಜಿಕೆಯಾಗುತ್ತದೆ.
ಆದರೆ ನಿನ್ನೆಯ ದಿನ ಎಲ್ಲರದ್ದೂ ಸೆಷನ್ ಎಕ್ಸ್ಪೈರೈಡ್ ಲಾಗಿನ್ ಅಗೈನ್ ಅಂದಾಗ ಎಲ್ಲರ ಸಮಸ್ಯೆಯೂ ಆಗಬಹುದೆಂದು ಅನಿಸಿತ್ತು. ಆದರೆ ಬಹಳಷ್ಟು ಜನರಿಗೆ ಗಾಬರಿಯಾಗಿದ್ದಂತೂ ಸತ್ಯದ ಸಂಗತಿ. ಎಲ್ಲರಿಗೂ ಬಂದಿದ್ದು ನಮಗೂ ಬರುತ್ತದೆ. 2005ರ ಹೊತ್ತಿಗೆ ಕೇವಲ ಕೆಲವೇ ಜನ ಬಳಸುತ್ತಿದ್ದ ಜಾಲತಾಣಗಳು ಇಂದು ಎಲ್ಲರ ಅವಶ್ಯಕತೆ ಆಗಿದೆ. ಇನ್ನು ಸ್ವಲ್ಪ ದಿನ ಹೋದರೆ ಮಾಯವಾಗಲು ಬಹುದು. ಕಾಲಚಕ್ರ ತಿರುಗುತ್ತಾ ಇರುತ್ತದೆ. ಬದಲಾವಣೆಗೆ ಹೊಂದಿ ಕೊಂಡು ಹೋಗುವ ದೊಡ್ಡ ಶಕ್ತಿಯನ್ನು ದೇವರು ಮಾನವರಿಗೆ ನೀಡಿದ್ದಾನೆ ಅದರ ಉಪಯೋಗ ಸರಿಯಾಗಿ ಮಾಡಿಕೊಳ್ಳಬೇಕು.
ಸಾಮಾನ್ಯ ಸಂಬಂಧಗಳನ್ನು ಕಡೆಗಣಿಸಿ ಫೇಸ್ಬುಕ್ ಇನ್ಸ್ಟಾಗ್ರಾಂ ಲೋಕದಲ್ಲಿ ಮುಳುಗಿರುವ 10ವಯಸ್ಸಿನಿಂದ ಹಿಡಿದು 80 ವಯಸ್ಸಿನ ಜನರನ್ನು ಕಾಣುತ್ತಲೇ ಇದ್ದೇವೆ. ಯಾವುದೇ ವಯಸ್ಸಿನಲ್ಲಿ ಎಂತಹದೇ ಇರಲಿ ಅಡಿಕ್ಷನ್ ಕಷ್ಟವೇ ಹಿಂದೆ ಧೂಮಪಾನ ಮದ್ಯಪಾನಗಳ ರಿಹ್ಯಾಬಿಲಿಟೇಷನ್ ಸೆಂಟರ್ ಇದ್ದಂತೆ ಸಾಮಾಜಿಕ ಜಾಲತಾಣಗಳ ರಿಹೇಬಿಲಿಟೇಷನ್ ಕೆಂದ್ರಗಳ ಅವಶ್ಯಕತೆ ಬರುತ್ತಿದೆಯೇ ಎನಿಸಿದ್ದಂತೂ ನಿಜ. ಇಂತಹ ಅಡಿಕ್ಷನ್ ಅಥವಾ ಚಟದಿಂದ ಹೊರ ಬರುವ ಪ್ರಯತ್ನ ಮಾಡಲೇ ಬೇಕು.
ಇಂಟರ್ನೆಟ್ ಎಂಬ ಮಾಯಾಜಾಲವು ಎಲ್ಲರನ್ನೂ ಆವರಿಸಿ ಬಿಟ್ಟಿದೆ. ದಿನದಲ್ಲಿ ಹಲವಾರು ಬಾರಿ ಮೊಬೈಲ್ ನೋಡುವುದು ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನೋಡಿ ಬರುವುದು ಸಾಮಾನ್ಯ ವಿಷಯವಾಗಿದೆ. ಇಂತಹ ಅಭ್ಯಾಸಗಳು ಮಾನಸಿಕವಾಗಿ ನಮಗೆ ಅಡೆತಡೆಯಾಗದಂತೆ ನಮ್ಮ ಮನಸ್ಸಿನ ನಿಯಂತ್ರಣ ನಾವೇ ಮಾಡಿಕೊಳ್ಳುವುದು ಯಾವುದೇ ವಿಷಯವಿರಲಿ ವಿಚಲಿತರಾಗದಿರುವುದು ನಮಗೇ ಉತ್ತಮ.
ಅಡಿಕ್ಷನ್ ಅಂದರೆ ಚಟ ಯಾವುದೇ ಇರಲಿ ಅದು ಮನುಷ್ಯನ ಮಾನಸಿಕ ಆರೋಗ್ಯಕ್ಕೆ ಉತ್ತಮವಲ್ಲ ಎಂಬುದು ಎಂದಿನಿಂದಲೂ ಸಿದ್ಧವಾಗಿರುವ ಅಂಶ. ಹೀಗಾಗಿ ವ್ಯಸನವೆನಿಸುವ ಮಟ್ಟಿಗೆ 1-2 ತಾಸು ಅಷ್ಟೇ ಏಕೆ ಒಂದು ದಿನ ಇಂಟರ್ ನೆಟ್ ಇಲ್ಲದೇ ಬದುಕುವ ಅಭ್ಯಾಸವನ್ನು ನಾವೇ ಸ್ವತಃ ಮಾಡಿಕೊಳ್ಳಬೇಕು. ಕನ್ನಡದಲ್ಲಿ ಗಾದೆ ಇದೆ “ಹೆಣ್ಣು ಹಠ ಮಾಡಿ ಕೆಟ್ಟಳು ಗಂಡು ಚಟ ಮಾಡಿ ಕೆಟ್ಟ” ಎಂದು ಆದರೆ ಈ ಸಾಮಾಜಿಕ ಜಾಲತಾಣದ ಚಟ ಹೆಣ್ಣು ಗಂಡು ಎಂಬ ಭೇದವಿಲ್ಲ, ವಯಸ್ಸಿನ ಮಿತಿ ಇಲ್ಲ ಎಲ್ಲರೂ ಕೂಡ ಮುಳುಗಿರುವ ವಿಚಾರ ಕಳವಳಕಾರಿಯಾಗಿದೆ.
ಮುಂದೆ ಒಂದುವರೆ ಗಂಟೆಯ ನಂತರ ಮತ್ತೆ ಪುನಃ ಆರಂಭವಾದ ನಂತರ ಎಲ್ಲರಿಗೂ ಜೀವದಲ್ಲಿ ಜೀವ ಬಂತದಂತೆ ಆಗಿದ್ದಂತೂ ಎಲ್ಲರ ಪೇಸ್ಬುಕ್ ವಾಲ್ನಲ್ಲಿ ಅವರ ಸ್ಟೇಟಸ್ ನೋಡಿ ತಿಳಿದುಕೊಂಡಿದ್ದು ಆಯಿತು. ಎಲ್ಲ ಅನುಕೂಲತೆಗಳು ಹೊಸ ಹೊಸ ಆವಿಷ್ಕಋಗಳು ಇದ್ದರೂ ಇಲ್ಲದೇ ಇದ್ದರೂ ವಿಚಲಿತರಾಗದೇ ಬದುಕುವ ಅಭ್ಯಾಸ ಮಡಿಕೊಳ್ಳಬೇಕು.
ಮಾಧುರಿ ದೇಶಪಾಂಡೆ, ಬೆಂಗಳೂರು