ಬೆಂಗಳೂರು : ನಕಲಿ ಐಡಿ, ನಕಲಿ ಅಂಕಪಟ್ಟಿ, ನಕಲಿ ಆಧಾರ್ ಕಾರ್ಡ್ಗಳನ್ನು ತಿದ್ದುಪಡಿ ಮಾಡಿ ಸಾರ್ವಜನಿಕರಿಗೆ ನೀಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿರುತ್ತಾರೆ.
ಹೆಬ್ಬಗೋಡಿ ಪೊಲೀಸ್ ಠಾಣ ವ್ಯಾಪ್ತಿಯ ಭವಾನಿ ರಸ್ತೆಯ ಕಂಪ್ಯೂಟರ್ನಲ್ಲಿ ಒಂದರಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ಐಡಿ ಹಾಗೂ ಇತರೆ ಪತ್ರಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಹೆಬ್ಬಗೋಡಿ ಪೊಲೀಸರು ದಾಳಿ ನಡೆಸಿ ಪಿಯುಸಿ ಓದುತ್ತಿದ್ದ ಯಶವಂತ(೧೯), ಐಟಿಐ ಮಾಡುತ್ತಿದ್ದ ರಘುವೀರ್ (೨೫) ಎಂಬುವರನ್ನು ಬನ್ನೇರುಘಟ್ಟದಲ್ಲಿ ಬಂಧಿಸಿರುತ್ತಾರೆ.
ಇವರುಗಳಿAದ ಕಂಪ್ಯೂಟರ್, ಲ್ಯಾಮಿನೇಷನ್ ಮಿಷನ್ ಪ್ರಿಂಟರ್ ಹಾಗೂ ೨ ಮೊಬೈಲ್ ನಗದು ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.