ಬೆಂಗಳೂರು: ಆಂಧ್ರಪ್ರದೇಶ ರಾಜ್ಯದಲ್ಲಿ ಕುಳಿತುಕೊಂಡು ಕರ್ನಾಟಕ ಹಾಗೂ ಆಂಧ್ರಪ್ರದೇಶದ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ತಾನು ಲೋಕಾಯುಕ್ತ ಅಧಿಕಾರಿ ಎಂದು ದೂರವಾಣಿ ಮುಖಾಂತರ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲು ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುತ್ತಾರೆ.
ಶ್ರೀನಾಥ್ ರೆಡ್ಡಿ ಎಂಬ ಆರೋಪಿಯು ಮೂಲತಃ ಬಾಗೇಪಲ್ಲಿಯವನಾಗಿದ್ದು ತುಮಕೂರು ಜಿಲ್ಲೆಯ ಶಿರಾದ ರಾಮದಾಸ್ ಎಇಇ ಎಂಬ…
ಅಧಿಕಾರಿಗೆ ದೂರವಾಣಿ ಕರೆ ಮಾಡಿ ನಾನು ಲೋಕಾಯುಕ್ತ ಅಧಿಕಾರಿ ನಿಮ್ಮ ಮೇಲೆ ದೂರು ಬಂದಿರುವುದು ಹಾಗಾಗಿ ನಮ್ಮ ಎಡಿಜಿಪಿ ಸಾಹೇಬರು ನಿಮ್ಮಲ್ಲಿ ಮಾಡಬೇಕಂತೆ ಅವರಿಗೆ ಫೋನು ಕೊಡುತ್ತೇನೆ ಎಂದು ವಂಚಿಸಿ ಸರ್ಕಾರಿ ಅಧಿಕಾರಿಗಳಿಗೆ ಭಯ ಹುಟ್ಟಿಸುತ್ತಿದ್ದೇನೆ ಎಂದು ರಾಮದಾಸ್ ಎಂಬ ಎ ಇ ಇ ಅಧಿಕಾರಿ ನೀಡಿದ ದೂರದ ಮೇಲೆಈತನನ್ನು ಬಂಧಿಸಿ ಬಂಧಿಸಿರುತ್ತಾರೆಂದು ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಗೂ ಈತನು 2007 ರಿಂದ ಮನೆ ಕಳ್ಳತನ ಪ್ರಕರಣಗಳಲ್ಲಿಯೂ ಸಹ ಭಾಗಿಯಾಗಿರುತ್ತಾನೆ ಎಂದು ತಿಳಿಸಿದರು.ಆಂಧ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ 50 ಸರ್ಕಾರಿ ಅಧಿಕಾರಿಗಳನ್ನು ಈ ತರಹ ದೂರವಾಣಿ ಕರೆ ಮಾಡಿ ವಂಚಿಸಿರುವುದು ತಿಳಿದುಬಂದಿದೆ.