ತಿಪಟೂರು: ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಕಾನೂನು ಪರಿಣಿತರಾದ ಜೆ.ಸಿ ಮಾಧುಸ್ವಾಮಿಯವರಿಗೆ ಬಿಜೆಪಿ ಪಕ್ಷದ ವತಿಯಿಂದ ಟಿಕೆಟ್ ನೀಡುವಂತೆ ತಿಪಟೂರು ಮಾಧುಸ್ವಾಮಿ ಅಭಿಮಾನಿ ಬಳಗದಿಂದ ಒತ್ತಾಯಿಸಲಾಯಿತು.
ತಿಪಟೂರಿನ ಕೌಸ್ತುಭ ಹೋಟೆಲ್ ನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಅಭಿಮಾನಿ ಬಳಗದಿಂದ ಮಾಧುಸ್ವಾಮಿಯ ಪರವಾಗಿ ತಾಲೂಕಿನ ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ನೊಳಂಬ ಸಮಾಜದ ಮುಖಂಡರು ಬಿಜೆಪಿ ಪಕ್ಷದಿಂದ ಟಿಕೆಟ್ ನೀಡುವಂತೆ ವರಿಷ್ಠರನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತ ನಾಡಿದ ನೋಳಂಬ ಸಮಾಜದ ಮುಖಂಡ, ಕಾಂಗ್ರೆಸ್ ಮುಖಂಡ ಮಾರನಗೆರೆ ಸಂಗಮೇಶ್ ಮಾತನಾಡಿ ಬಿಎಸ್ ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಕಾನೂನು ಸಚಿವರಾಗಿ ಮತ್ತು ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಜೆಸಿ ಮಾಧುಸ್ವಾಮಿಯವರು ಅಪಾರಜ್ಞಾನ ಉಳ್ಳವರಾಗಿದ್ದು ಕಾನೂನನ್ನು ಅರಿತಿದ್ದು ಹಾಗೂ ನೀರಾವರಿ ಕ್ಷೇತ್ರದಲ್ಲಿ ಅಪಾರ ಕೆಲಸವನ್ನು ಮಾಡಿದ್ದು ಇಂತಹ ವ್ಯಕ್ತಿಗೆ ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ನೀಡುವಂತೆ ಒತ್ತಾಯಿಸಿದರು.
ತಿಮ್ಮಲಾಪುರದ ರವಿಕುಮಾರ್ ಮಾತನಾಡಿ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಇಂದಿನಿಂದಲೂ ಸಹ ಹೊರಗಿನವರು ಬಂದು ಸ್ಪರ್ಧೆ ಮಾಡಿ ಗೆಲುವು ಸಾಧಿಸಿರುವ ಉದಾಹರಣೆಗಳು ಯಾವುದು ಇಲ್ಲದೆ ಎಂದು ಯಾವುದೇ ಕಾರಣಕ್ಕೂ ಹೊರಗಡೆ ಅಭ್ಯರ್ಥಿಗೆ ಮಾನ್ಯತೆ ನೀಡದೆ ಸ್ವಂತ ಜಿಲ್ಲೆಯ ನಾಡಿಮಿಡಿತವನ್ನು ಅರಿತಿರುವ ಮಾಧುಸ್ವಾಮಿಯವರಿಗೆ ಟಿಕೆಟ್ ನೀಡಿದರೆ ಜಯಶಾಲಿಯಾಗುವುದು ಖಚಿತವಾಗಿದ್ದು ಹಾಗೂ ನೋಳಂಬ ಸಮಾಜಕ್ಕೂ ಪ್ರಾತಿನಿದ್ಯ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಗುಡಿಗೌಡರು ಪ್ರಕಾಶ್ ಮಾತನಾಡಿ. ಮಾಧುಸ್ವಾಮಿಯವರು ಜಾತ್ಯತೀತವಾದ ವ್ಯಕ್ತಿತ್ವವನ್ನು ಹೊಂದಿದ್ದು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವಂತಹ ಸ್ವಭಾವವಾಗಿದ್ದು ಹಾಗೂ ರೈತರ ಬಗ್ಗೆ ಅತಿ ಹೆಚ್ಚು ಕಾಳಜಿಯನ್ನು ವಹಿಸಿರುವ ವ್ಯಕ್ತಿತ್ವವುಳ್ಳವರಾಗಿದ್ದು ಇವರಿಗೆ ಭಾರತೀಯ ಜನತಾ ಪಕ್ಷದ ವತಿಯಿಂದ ಟಿಕೆಟ್ ನೀಡಿದರೆ ಗೆಲುವು ಖಚಿತವಾಗಿ ತುಮಕೂರು ಲೋಕಸಭಾ ಕ್ಷೇತ್ರವು ರಾಷ್ಟ್ರಮಟ್ಟದಲ್ಲಿ ವಿಶೇಷ ಸ್ಥಾನವನ್ನು ಪಡೆಯುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾರನಗೆರೆ ವಿಜಯಕುಮಾರ್, ಶಿವಕುಮಾರಸ್ವಾಮಿ, ದಯನಂದ ಸಾಗರ್, ಮತ್ತಿದ್ದರು.