This is the title of the web page
This is the title of the web page

ಸಂಜು ಸ್ಯಾಮ್ಸನ್ ತ್ಯಾಗಕ್ಕೆ ಫ್ಯಾನ್ಸ್ ಶಹಬ್ಬಾಶ್ ಗಿರಿ

ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ತಮ್ಮ ಸಹ ಆಟಗಾರ ಯಶಸ್ವಿ ಜೈಸ್ವಾಲ್‍ಗಾಗಿ ಮಾಡಿದ ಕೆಲಸಕ್ಕೆ ಟ್ವಿಟರಿಗರು ಕೊಂಡಾಡಿದ್ದಾರೆ.

ನಿನ್ನೆ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ಗೆಲುವಿಗೆ ಒಂದು ರನ್ ಬೇಕಾಗಿದ್ದಾಗ ಸಂಜು ಬ್ಯಾಟಿಂಗ್ ಎಂಡ್ ನಲ್ಲಿದ್ದರು. ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಯಶಸ್ವಿ ಜೈಸ್ವಾಲ್‍ಗೆ ಶತಕ ಗಳಿಸಲು 6 ರನ್ ಬೇಕಾಗಿತ್ತು. ಈ ವೇಳೆ ಕೆಕೆಆರ್ ಬೌಲರ್ ಸುಯಾಶ್ ವೈಡ್ ಎಸೆತ ಎಸೆದರು.

ಆದರೆ ಸಂಜು ಉಪಾಯವಾಗಿ ಇದನ್ನು ತಡೆದು ವೈಡ್ ಆಗದಂತೆ ನೋಡಿಕೊಂಡರಲ್ಲದೆ, ರನ್ ಕೂಡಾ ಗಳಿಸದೇ ಓವರ್ ಮುಗಿಸಿದರು. ವಿಶೇಷವೆಂದರೆ ಸಂಜು ಕೂಡಾ ಅರ್ಧಶತಕದ ಹೊಸ್ತಿಲಲ್ಲಿದ್ದರು. ಆದರೆ ತಮ್ಮನ್ನು ಲೆಕ್ಕಕ್ಕಿಡದೇ ಯಶಸ್ವಿ ಶತಕ ಗಳಿಸಲು ಸಂಜು ಪ್ರಯತ್ನ ಪಟ್ಟರು.

ಆದರೆ, ಮುಂದಿನ ಓವರ್‍ನಲ್ಲಿ ಯಶಸ್ವಿ ಜೈಸ್ವಾಲ್ ಸಿಕ್ಸರ್ ಗಟ್ಟಲು ಯತ್ನಿಸಿದರೂ ಅದು ಬೌಂಡರಿ ಆಗಿತ್ತಷ್ಟೇ. ಹೀಗಾಗಿ ಯಶಸ್ವಿ 98 ರನ್‍ಗೆ ಅಜೇಯರಾಗುಳಿದರು. ರಾಜಸ್ಥಾನ್ ಗೆಲುವು ಕಂಡಿತು. ಆದರೆ ತಮ್ಮ ವೈಯಕ್ತಿಕ ಲಾಭ ಲೆಕ್ಕಕ್ಕಿಡದೇ ಯಶಸ್ವಿಗಾಗಿ ತ್ಯಾಗ ಮಾಡಿದ ಸಂಜು ವರ್ತನೆಗೆ ಫ್ಯಾನ್ಸ್ ಕೊಂಡಾಡಿದ್ದಾರೆ.