ಕೋಲ್ಕತಾ: ಭಾರತದಲ್ಲಿ ಆಳವಾಗಿ ಬೇರೂರಿರುವ ಕ್ರಿಕೆಟ್, ಕ್ರಿಕೆಟಿಗರೆಂದರೆ ದೇವರು ಎಂದು ಪೂಜಿಸಲ್ಪಡುವ ಜಾಯಮಾನದಲ್ಲಿ ಒಬ್ಬ ಫುಟ್ಬಾಲ್ ಆಟಗಾರ 20 ವರ್ಷಗಳಿಂದ ದೇಶಕ್ಕಾಗಿ ಆಡುತ್ತಾನೆ ಅಂದರೆ ನಂಬಲು ಕಷ್ಟ ಆಗಬಹುದು.
ಫುಟ್ಬಾಲಿಗೆ ಕೆಲವು ಶ್ರೀಮಂತ ಕ್ಲಬ್ ಬಿಟ್ಟರೆ ಬೇರೆ ಯಾವ ಸಪೋರ್ಟ್ ಕೂಡ ಇಲ್ಲದ ಸನ್ನಿವೇಶದಲ್ಲಿ ಕೂಡ ಈ ದೈತ್ಯ ಪ್ರತಿಭೆಯ ಆಟಗಾರ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಾನೆ ಅಂದರೆ ಅದು ನಿಜವಾಗಿಯೂ ಅದ್ಭುತ!
ಭಾರತೀಯ ಫುಟ್ಬಾಲ್ ತಂಡದ ಕ್ಯಾಪ್ಟನ್ ಆಗಿ ಭಾರತದಲ್ಲಿ ಫುಟ್ಬಾಲ್ ಕ್ರೇಜನ್ನು ಜೀವಂತವಾಗಿ ಉಳಿಸಿದ ಲೆಜೆಂಡ್ ಮಿಂಚು ಹರಿಸುವ ಫಾರ್ವರ್ಡ್ ಆಟಗಾರ ಸುನೀಲ್ ಚೆಟ್ರಿ ವಿದಾಯದ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.
ಇಂದು (ಗುರುವಾರ) ನಡೆಯುವ ಕುವೈಟ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್ ವೇತ್ತಿ ಜೀವನಕ್ಕೆ ತೆರೆ ಎಳೆಯಲಿದ್ದಾರೆ. ಭಾರತ ಮುಂದಿನ ಸುತ್ತು ಪ್ರವೇಶಿಸಬೇಕಾದರೆ ಈ ಪಂದ್ಯ ಗೆಲ್ಲಲೇಬೇಕಿದೆ. 38 ವರ್ಷದ ಚೆಟ್ರಿ ಕೆಲವು ವಾರಗಳ ಹಿಂದೆ ತಮ್ಮ ವಿದಾಯ ಘೋಷಿಸಿದ್ದರು. ಒಟ್ಟು ಭಾರತ ಪರ 150 ಪಂದ್ಯಗಳನ್ನಾಡಿ 94 ಗೋಲು ಬಾರಿಸಿದ್ದಾರೆ.
ಮೆಸ್ಸಿ ಮತ್ತು ರೊನಾಲ್ಡೊ ಬಳಿಕ ಅತ್ಯಧಿಕ ಗೋಲು ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ ಚೆಟ್ರಿಗೆ ಗೆಲುವಿನ ವಿದಾಯ ನೀಡಬೇಕಿದೆ. ಜೂನ್ 12, 2005 ರಂದು ಕ್ವೆಟ್ಟಾದಲ್ಲಿ ಪಾಕಿಸ್ತಾನದ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಚೆಟ್ರಿ ಮೊದಲ ಬಾರಿಗೆ ಹಿರಿಯ ರಾಷ್ಟ್ರೀಯ ತಂಡದ ಜರ್ಸಿಯನ್ನು ತೊಟ್ಟಿದ್ದರು. ಆ ಪಂದ್ಯ 1-1 ಡ್ರಾದಲ್ಲಿ ಅತ್ಯಂಕಡಿತ್ತು. ಭಾರತದ ಈ ಒಂದು ಗೋಲ್ ಬಾರಿಸಿದ್ದು ಚೆಟ್ರಿ. ಅಂದಿನಿಂದ, ಅವರು ಇದುವರೆಗೂ ರಾಷ್ಟ್ರೀಯ ತಂಡದ ಪರ ಹಲವು ಸಾಧನೆ ಮಾಡಿದ್ದಾರೆ.