ಚಿಕ್ಕಬಳ್ಳಾಪುರ: ನಗರದ ಹೊರವಲಯದ ಕಂದವಾರ ಟೀಚರ್ಸ್ ಕಾಲೋನಿಯಲ್ಲಿರುವ ಬ್ಲೂಮ್ಸ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಶಾರದಾ ಪೂಜೆ ಮತ್ತು ದ್ವೀತಿಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬ್ಲೂಮ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್,ವಿಧ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಿ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲು ಶಿಕ್ಷಕರ ವರ್ಗ ಸದಾ ಸಿದ್ಧರಿದ್ದೇವೆ,ಕಲಿಕಾ ಸಾಮರ್ಥ್ಯ ಹೆಚ್ಚು ಮಾಡಿಕೊಳ್ಳಬೇಕು ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಉನ್ನತ ಶಿಕ್ಷಣ ಪಡೆಯಲು ಶ್ರಮ ವಹಿಸಬೇಕು,ಇದಲ್ಲದೆ ಶಿಸ್ತು ಪಾಲಿಸಿ,ಓದಿನ ಕಡೆ ಗಮನ ಹರಿಸಿ ಕಾಲ ಕಾಲಕ್ಕೆ ಓದಿರುವುದನ್ನು ತಮ್ಮನ್ನು ತಾವೆ ಪರಿಕ್ಷಿಸಿಕೂಳ್ಳಿ,
ಪರೀಕ್ಷೆಯಲ್ಲಿ ಚನ್ನಾಗಿ ಬರೆಯಿರಿ ಉತ್ತಮ ಫಲಿತಾಂಶ ತನ್ನಿ ಪೋಷಕರ ಕನಸು ನನಸು ಮಾಡಿ ಎಂದ ಅವರು ಇನ್ನೋ ದ್ವಿತೀಯ ಪಿಯು ವಿಧ್ಯಾರ್ಥಿಗಳಿಗೆ ಹತ್ತಿರದಲ್ಲಿ ಪರೀಕ್ಷೆಗಳು ಬರುತ್ತಿದ್ದು ಅದಕ್ಕೆ ನಿವೇಲ್ಲಾ ತಯಾರಾಗಬೇಕು, ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಸ್ಥಾನಕ್ಕೆ ಬೆಳೆಯಿರಿ ,ಹಾಗೆ ನನ್ನ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕುಮಾರ್ ಅವರಿಗೆ ಅಭಿನಂದನೆಗಳು ತಿಳಿಸಿದರು.
ಈ ಸಂದರ್ಭದಲ್ಲಿ ವರ್ಣ ಸೇವಾ ಟ್ರಸ್ಟ್ ಚಿಕ್ಕಬಳ್ಳಾಪುರ ಅಧ್ಯಕ್ಷರಾದ ಉಮೇಶ್.ಜಿ ಮಾತನಾಡಿ ವಿಧ್ಯಾರ್ಥಿಗಳು ಯಶಸ್ಸು ಕಾಣಬೇಕಾದರೆ ಗಮನ ಹರಿಸಿ ಓದ ಬೇಕು. ಅಧ್ಯಯನದ ದಿನಗಳಲ್ಲಿ ಸರಿಯಾದ ಪಾಠ ಕಲಿತರೆ ಜೀವನ ಚೆನ್ನಾಗಿರುತ್ತೆ ಅದೆ ತಪ್ಪು ದಾರಿಗೆ ಹೊದರೆ ಜೀವನವೆ ನಿಮಗೆ ಪಾಠ ಕಲಿಸುತ್ತೆ,ಹಾಗಾಗಿ ಓದುವ ದಿನಗಳಲ್ಲಿ ತಪ್ಪು ದಾರಿಗೆ ಹೊಗ್ಬೇಡಿ,ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ.ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಳ್ಳಿ,ಚನ್ನಾಗಿ ಓದಿ ನೀವು ಓದುತ್ತಿರುವ ಸಂಸ್ಥೆಗೆ ಒಳ್ಳೆಯ ಹೆಸರು ತಂದು ಕೂಡಬೇಕು ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಈ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದಮುಖ್ಯ ಅಥಿತಿಗಳು ಮತ್ತು ಕಾಲೇಜಿನ ಸಿಬ್ಬಂದಿ ವರ್ಗಕ್ಕೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಲೂಮ್ಸ್ ಪಿಯು ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕುಮಾರ್(ಎಂ.ಎಲ್.ಎ),ಕಾಲೇಜಿನ ಮುಖ್ಯಸ್ಥರಾದ ಜಗದೀಶ್,ಕಾಲೇಜಿನ ಉಪನ್ಯಾಸಕರಾದ ಉಮೇಶ್, ಪ್ರವೀಣ್,ಗೌತಮಿ ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.