ಕೋಲ್ಕತಾ: ಭಾರತೀಯ ಫುಟ್ಬಾಲ್ನ ಖ್ಯಾತ ಗೋಲ್ಕೀಪರ್ ಸುಬ್ರತ ಪಾಲ್ ಶುಕ್ರವಾರ ವಿದಾಯ ಘೋಷಿಸಿದರು. ಇದರೊಂದಿಗೆ ಪಾಲ್ ಅವರ 16 ವರ್ಷಗಳ ಸುದೀರ್ಘ ಫುಟ್ಬಾಲ್ ವೃತ್ತಿಬದುಕಿಗೆ ತೆರೆ ಬಿತ್ತು.
`ಥ್ಯಾಂಕ್ ಯೂ ಸ್ಪೈಡರ್ಮ್ಯಾನ್. ಬ್ಲೂ ಟೈಗರ್ ಪಾಲಕ ಇಂದು ತಮ್ಮ ಗ್ಲೌಸ್ಗಳನ್ನು ಕಳಚಿಟ್ಟರು’ ಎಂಬುದಾಗಿ ಅಖೀಲ ಭಾರತ ಪುಟ್ಬಾಲ್ ಫೆಡರೇಶನ್ ಸುಬ್ರತ ಪಾಲ್ ಅವರ ಕರ್ತವ್ಯನಿಷ್ಠೆಯನ್ನು ಕೊಂಡಾಡಿದೆ.
36 ವರ್ಷದ ಸುಬ್ರತ ಪಾಲ್ ಭಾರತ ಪರ 65 ಪಂದ್ಯಗಳನ್ನಾಡಿದ್ದಾರೆ. 2007ರಲ್ಲಿ ಲೆಬನಾನ್ ವಿರುದ್ಧದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು.
ಸುಮಾರು 35 ಗೋಲುಗಳನ್ನು ತಡೆದ ಸಾಹಸ ಪಾಲ್ ಅವರದು. 2018ರ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ವೇಳೆ ಭಾರತದ ನೇತೃತ್ವವನ್ನೂ ವಹಿಸಿದ್ದರು.