ಹೊಸಕೋಟೆ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆಯಿಂದ ನಿವೃತ್ತಿಯಾದ ವಾಣಿಜ್ಯಶಾಸ್ತ್ರ ವಿಭಾಗದ ಡಾ: ಚಂದ್ರಕಾಂತ್ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಇಂಗ್ಲೀಷ್ವಿಭಾಗದ ಪ್ರೊ: ಡೊರಿನ್ರವರು ಡಾ: ಚಂದ್ರಕಾಂತ್ರವರೊಂದಿಗೆ ಒಟ್ಟಿಗೆ ಕಾರ್ಯನಿರ್ವಹಿಸಿ ದ್ದೇವೆ. ಶ್ರದ್ದೆ, ಪ್ರಾಮಾಣಿಕತೆಯಿಂದ ವಿದ್ಯಾರ್ಥಿ ಗಳಿಗೆ ಪಾಠಪ್ರವಚನಗಳನ್ನು ಮಾಡುವ ಮೂಲಕವಿದ್ಯಾರ್ಥಿಗಳಿಂದ ಅಭಿಮಾನ ಗಳಿಸುವುದರೊಂ ದಿಗೆ ಉಪನ್ಯಾಸಕರ ಹುದ್ದೆಯ ಗೌರವವನ್ನು ಎತ್ತಿಹಿಡಿದಿದ್ದಾರೆ.
ಇವರ ಶ್ರಮ, ಕಾರ್ಯನಿರ್ವಹಣೆ ಇತರರಿಗೆ ಮಾದರಿಯಾಗಿದೆ. ಸತತವಾಗಿ 37 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಗೊಳ್ಳುತ್ತಿದ್ದು ಇದೊಂದು ವಯೋಸಹಜ ಪ್ರಕ್ರಿಯೆಯಾಗಿದೆ. ಇವರಿಂದ ಪಾಠ ಪ್ರವಚನಗಳನ್ನು ಕಲಿತ ಸಹಸ್ರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಅವರುಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವುದು ಅವರ ಸೇವೆಗೆ ನಿದರ್ಶನವಾಗಿದೆ ಎಂದರು.
ಸಮಾಜಶಾಸ್ರ್ತ ವಿಭಾಗದ ಪ್ರಾಧ್ಯಾಪಕರಾದ ದೊಡ್ಡಹನುಮಯ್ಯನವರು ಮಾತನಾಡಿ ಕಾಲಬದಲಾದಂತೆ ನಾವು ಕೂಡ ಆಧುನಿಕ ತಂತ್ರಜ್ಞಾನ ವನ್ನು ಬೋಧನೆಯಲ್ಲಿ ಅಳವಡಿಸಕೊಳ್ಳಬೇಕಾದ್ದು ಅತ್ಯವಶ್ಯವಾಗಿದೆ. ಇದರಿಂದ ಮಾತ್ರ ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಮೂಲಕ ಶಿಕ್ಷಣದ ಸಾರ್ಥಕವಾಗಲು ಸಾಧ್ಯ. ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಗೌರವಯುತವಾದ ವೃತ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕಾಲೇಜಿನಪ್ರಾಂಶುಪಾಲರಾದ ಡಾ: ಮುನಿನಾರಾಯಣಪ್ಪ ನವರು ಮಾತನಾಡಿ ಡಾ: ಚಂದ್ರಕಾಂತ್ರವರು ವಾಣಿಜ್ಯ ವಿಭಾಗದಲ್ಲಿ ಬಹಳಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ.
ನ್ಯಾಕ್ ಸಂದರ್ಭದಲ್ಲಿ ಉಪಯುಕ್ತ ವಾದ ಸಲಹೆ ಸೂಚನೆ ನೀಡಿದ್ದರು. ಕಾಲೇಜಿನಲ್ಲಿ ಅವರ ಸೇವೆ ಅವಿಸ್ಮರಣೀಯವಾದುದಾಗಿದೆ ಎಂದು ಹೇಳಿ ಡಾ: ಚಂದ್ರಕಾಂತ್ರವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಸಾಂಸೃತಿಕ ಸಮಿತಿಯ ಸಂಚಾಲಕರಾದ ಪ್ರೊ: ಚೆಲುವರಾಜು, ಐಕ್ಯೂಎ ಸಂಯೋಜಕರಾದ ಪ್ರೊ : ಅಡಿವಲ್ ವೆಂಕಟೇಶಲು ಪ್ರೊ: ಈರಣ್ಣ, ಪ್ರೊ: ಶ್ರೀನಿವಾಸಆಚಾರ್, ಡಾ: ದ್ಯಾವಪ್ಪ, ಪ್ರೊ: ಶ್ರೀನಿವಾಸಪ್ಪ, ಪ್ರೊ: ರಘು, ಕಾಲೇಜಿನ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.