ಮಾದನಾಯಕನಹಳ್ಳಿ: ಸೇವೆಯಲ್ಲಿ ಕರ್ತವ್ಯ ನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದೊಂದಿಗೆ ಸಾರ್ಥಕತೆ ಕಂಡುಕೊಂಡು ನಿವೃತ್ತಿ ಹೊಂದುತ್ತಿರುವ ಮಾದನಾಯಕನಹಳ್ಳಿ ನಗರಸಭೆ ಆಯುಕ್ತ ಹನುಮಂತೇಗೌಡ ಹನುಮಂತೇಗೌಡರ ಜೀವನ ಸುಖಮಯವಾಗಿರಲಿ ಎಂದು ಯಲಹಂಕ ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ಹನುಮಯ್ಯ ಹೇಳಿದರು.
ಸರ್ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿ ಹೊಂದಿದ ಮಾದನಾಯಕನಹಳ್ಳಿ ನಗರಸಭೆ ಆಯುಕ್ತ ಹನುಮಂತೇಗೌಡರವರಿಗೆ ನಗರಸಭೆ ಸಿಬ್ಬಂದಿಗಳ ಆಯೋಜಿಸಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು. ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ ಸಾರ್ವಜನಿಕರ ಪ್ರೀತಿ ವಿಶ್ವಾಸ ಗಳಿಸಿ ಮೆಚ್ಚುಗೆ ಗಳಿಸಿದ್ದಾರೆ.
ಯಲಹಂಕ ಕ್ಷೇತ್ರದಲ್ಲಿ ಮಾದನಾಯಕನಹಳ್ಳಿ ನಗರಸಭೆ ಮಾದರಿ ನಗರಸಭೆಯನ್ನಾಗಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದೀರಾ. ನಿವೃತ್ತಿ ನಂತರವೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ನೀವು ಕಾರ್ಯನಿರ್ವಹಿಸಿ ಎಂದರು.ಇನ್ನು ಸನ್ಮಾನ ಸ್ವೀಕರಿಸಿ ಮಾತನಾಡಿದ ಹನುಮಂತೇಗೌಡರು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಹಿರಿಯ ಅಧಿಕಾರಿಗಳ ಪ್ರೋತ್ಸಾಹ ಹಾಗೂ ಸಹೋದ್ಯೋಗಗಳ ಸಹಕಾರವನ್ನು ನಾನು ಎಂದಿಗೂ ಮರೆಯಲಾರೆ ಎಂದು ತಿಳಿಸಿದರು.
ಇನ್ನು ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕರಾದ ರಂಗಸ್ವಾಮಿ. ಎ.ಸಿ. ಚಂದ್ರಶೇಖರ್. ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮಂಜುನಾಥ್. ನಗರಸಭೆ ಎ.ಇ.ಇ ವಿದ್ಯಾಸಾಗರ್, ಸಿಬ್ಬಂದಿಗಳಾದ ಸೌಮ್ಯ ಪುನೀತ್ ರವಿಕುಮಾರ್ ಅನಿಲ್. ರಾಘವೇಂದ್ರ ಜೈ ಸಾರ್ವಜನಿಕರು ಉಪಸ್ಥಿತರಿದ್ದರು.
Leave a Review