ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ ಶಿವರಾಮ್ ಕೆ ರವರಿಗೆ ಅಭಿನಂದಿಸಿ ಬೀಳ್ಕೊಡಲಾಯಿತು.
ತಾಲೂಕಿನ ಪ್ರಸಾದಿಹಳ್ಳಿ ಗ್ರಾಮದಲ್ಲಿ ಜನಿಸಿದ ಇವರು ಪೊಲೀಸ್ ಇಲಾಖೆಗೆ ಕಾನ್ಸ್ಟೇಬಲ್ ಆಗಿ 1993 ರಲ್ಲಿ ಸೇರ್ಪಡೆಗೊಂಡು ದಕ್ಷತೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸುವ ಮೂಲಕ ತಮ್ಮ ಸೇವಾ ಅವಧಿಯಲ್ಲಿ ಹಂತ ಹಂತವಾಗಿ ಸಹಾಯಕ ಉಪ ನಿರೀಕ್ಷರಾಗಿ ಸೇವಾ ಬಡ್ತಿ ಪಡೆದ ಇವರು ಹಳೆಬೀಡು ಸೇರಿದಂತೆ ಇನ್ನಿತರ ಪೊಲೀಸ್ ಠಾಣೆಯಲ್ಲಿ ಸುಮಾರು 31 ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿದ ಇವರಿಗೆ ಅಭಿನಂದಿಸಿ ಬೀಳ್ಕೊಡಲಾಯಿತು.