ಬೆಳಗಾವಿ: ಬೆಳಗಾವಿ ಜಿಲ್ಲೆಯಖಾನಾಪುರತಾಲೂಕಿನ ಸುಳೆಗಾಳಿ ಗ್ರಾಮದಲ್ಲಿ ವಿದ್ಯುತ್ತಂತಿ ಸ್ಪರ್ಶಿಸಿ ಎರಡು ಕಾಡಾನೆಗಳು ಸಾವನ್ನಪ್ಪಿದದಾರುಣಘಟನೆ ನಡೆದಿದೆ. ರೈತರಜಮೀನಿನ ಬಳಿ ತಂತಿ ಬೇಲಿಗೆ ವಿದ್ಯುತ್ಕನೆಕ್ಷನ್ ನೀಡಿದ್ದಕಾರಣ ಈ ದುರ್ಘಟನೆ ಸಂಭವಿಸಿದೆ. ಒಂದುಗAಡು ಮತ್ತು ಮತ್ತೊಂದು ಹೆಣ್ಣು ಆನೆ ಮೃತಪಟ್ಟಿದ್ದು, ಭಾನುವಾರ ಮಧ್ಯಾಹ್ನಘಟನೆ ನಡೆದಿದೆ.ಜಮೀನಿನ ಬೇಲಿಗೆ ಅಕ್ರಮವಾಗಿ ಮನೆಯಿಂದ ವಿದ್ಯುತ್ ಸಂಪರ್ಕ ನೀಡಿದ್ದಆರೋಪದಲ್ಲಿರೈತಗಣಪತಿ ಸಾತೇರಿಗುರವ್ಅವರನ್ನುಅರಣ್ಯ ಇಲಾಖೆ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆಒಪ್ಪಿಸಲಾಗಿದೆ. ಇದೇ ಪ್ರಕರಣದಲ್ಲಿಗಣಪತಿಯ ಮಗ ಶಿವಾಜಿ ಗುರವ್ ಪರಾರಿಯಾಗಿದ್ದಾನೆಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಕುರಿತುಅರಣ್ಯ ಸಚಿವಈಶ್ವರ್ಖಂಡ್ರೆತೀವ್ರಆಕ್ರೋಶ ವ್ಯಕ್ತಪಡಿಸಿದ್ದು ತನಿಖೆಗೆ ಆದೇಶಿಸಿದ್ದಾರೆ.ಜತೆಗೆ, ಐದು ದಿನಗಳ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಆರ್ಎಫ್ಓ ಶಿವಾನಂದ ಅವರ ನೇತೃತ್ವದತಂಡ ಸ್ಥಳದಲ್ಲಿ ಮಾಹಿತಿ ಕಲೆ ಹಾಕಿದ್ದು, ತನಿಖೆ ನಡೆಸುತ್ತಿದೆ. ಆನೆಗಳ ಮರಣೋತ್ತರ ಪರೀಕ್ಷೆಇಂದು ಬೆಳಿಗ್ಗೆ ನೆರವೇರಿಸಲಾಯಿತು.ಬಳಿಕ ಅರಣ್ಯಇಲಾಖೆಯ ವತಿಯಿಂದಅAತ್ಯಕ್ರಿಯೆ ನೆರವೇರಿಸಲಾಯಿತು. ವಿದ್ಯುತ್ ಸಂಪರ್ಕ ವಿಚಾರವಾಗಿ, ಅಧಿಕಾರಿಗಳ ನಿರ್ಲಕ್ಷ÷್ಯ ಹಿನ್ನೆಲೆಯಲ್ಲಿಅವರಿಗೂಅರಣ್ಯ ಇಲಾಖೆ ನೋಟಿಸ್ ನೀಡಿದೆ. ಈ ಘಟನೆಕರ್ನಾಟಕದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷದ ಬಗ್ಗೆ ಮತ್ತೆಚರ್ಚೆಹುಟ್ಟುಹಾಕಿದೆ.ವನ್ಯಜೀವಿ ಸುರಕ್ಷತೆ ಹಾಗೂ ಜನರರಕ್ಷಣೆ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.



