ಮೈಸೂರು (ನಂಜನಗೂಡು): ಸಿಡಿಲು ಬಡಿದು ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಹುಣಸನಾಳು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಸಮೀಪದಲ್ಲೇ ಇದ್ದ ರೈತ ಚನ್ನಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂಜನಗೂಡು ತಾಲೂಕಿನ ಹುಣಸನಾಳು ಗ್ರಾಮದಲ್ಲಿ ಚನ್ನಶೆಟ್ಟಿ ಎಂಬುವರು ತಮ್ಮ ಹಸುಗಳನ್ನು ಜಮೀನಿನಲ್ಲಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಮಳೆ ಪ್ರಾರಂಭವಾಗಿದೆ.
ಆಗ ಹಸುಗಳನ್ನು ಹುಣಸೆ ಮರದ ಕೆಳಗಡೆ ಕಟ್ಟಿದ್ದರು,ಇದೇ ವೇಳೆ ಸಿಡಿಲು ಬಡಿದು ಸ್ಥಳದಲ್ಲಿಯೇ ಹಸಗಳು ಮೃತಪಟ್ಟಿವೆ. ಮೃತ ಹಸುಗಳ ಪೈಕಿ ಒಂದು ಹಸು ಗರ್ಭಿಣಿಯಾಗಿತ್ತು. ಈ ಸಂದರ್ಭದಲ್ಲಿ ಅದೃಷ್ಟವಶಾತ್ ಸಮೀಪದಲ್ಲೇ ಇದ್ದ ರೈತ ಚನ್ನಶೆಟ್ಟಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಸುಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಚನ್ನಶೆಟ್ಟಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.