ಕೋಲಾರ: ಮಂಜಲಿ ಗ್ರಾಮ ವೇಮಗಲ್ ನಾಡಕಚೇರಿ ವ್ಯಾಪ್ತಿ ಹಾಗೂ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುದರ್ಶನ್ ಚಕ್ರ ಲೇಔಟ್ ಮಾಲಿಕರಾದ ಮುನಿಸ್ವಾಮಿ ರವರು ಸರ್ಕಾರಿ ಗೋಮಾಳ ಜಾಗವನ್ನು ಒತ್ತುವರಿ ಮಾಡಿಕೊಂಡು ಲೇಔಟ್ಗೆ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ.
ಕೂಡಲೇ ಕಾಂಪೌಂಡನ್ನು ತೆರವುಗೊಳಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರು ವೇಮಗಲ್ ಉಪ ತಹಸೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪತಾಹಸಿಲ್ದಾರ್ ಒಂದು ವಾರದ ಒಳಗಡೆ ಸರ್ವೆ ಮಾಡಿಸಿ ಒತ್ತುವರಿಯನ್ನು ತೆರೆಗೊಳಿಸಲಾಗುವುದು ಹಾಗೂ ಲೇಔಟ್ಗೆ ಸಂಬಂಧಪಟ್ಟಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಹೋರಾಟದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷರಾದ ಕೂಲದೇವಿ ಗೋಪಾಲಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ, ಮಾಲೂರು ತಾಲ್ಲೂಕು ಅಧ್ಯಕ್ಷ ತಿಪ್ಪಸಂದ್ರ ಹರೀಶ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಕಡುಕಚ್ಚನಹಳ್ಳಿ ವಿಶ್ವನಾಥಗೌಡ, ಕೋಟಿಗನಹಳ್ಳಿ ಸತೀಶ್ ಕುಮಾರ್, ತೇರಹಳ್ಳಿ ಚಂದ್ರಪ್ಪ, ಮಂಜಲಿ ಅಮರೇಂದ್ರ, ಜಿಂಕೆ ರಾಮು, ಶಿವು, ಸೋಮಶೇಖರ್, ಅಮರನಾಥ್, ಸತೀಶ್, ಕೃಷ್ಣಪ್ಪ, ನಿತಿನ್ ಉಪಸ್ಥಿತರಿದ್ದರು.