ಚಿಕ್ಕಬಳ್ಳಾಪುರ: ಪ್ಲಾಸ್ಟಿಕ್ ಬಾಟಲಿ, ಕ್ಯಾನ್ಗಳಿಗೆ ಪೆಟ್ರೋಲ್- ಡೀಸೆಲ್ ಹಾಕದ ಹಿನ್ನೆಲೆ ಪೆಟ್ರೋಲ್ ಬಂಕ್ ಬಂದ್ ಮಾಡಿಸಿ ರೈತರು ಆಕ್ರೋಶ ಹೊರಹಾಕಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಭಾರತ್ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ.ಪ್ಲಾಸ್ಟಿಕ್ ಬಾಟಲಿ, ಕ್ಯಾನ್ಗಳಿಗೆ ಪೆಟ್ರೋಲ್ ಡೀಸೆಲ್ ಹಾಕದಂತೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಬಂಕ್ ಮಾಲೀಕರಿಗೆ ಖಡನ್ ಸೂಚನೆ ಕೊಟ್ಟಿದೆ. ಹೀಗಾಗಿ ಬಂಕ್ನವರು ಪ್ಲಾಸ್ಟಿಕ್ ಬಾಟಲಿ, ಕ್ಯಾನ್ಗಳಿಗೆ ಪೆಟ್ರೋಲ್ ಡಿಸೇಲ್ ಹಾಕುತ್ತಿಲ್ಲ. ಇದರಿಂದ ರೋಸಿ ಹೋದ ರೈತರು, ಬೆಳೆಗಳಿಗೆ ಮದ್ದು ಹೊಡೆಯುವ ಮಿನಿ ಟ್ರಾಕ್ಟರ್ನಿಂದ ಮದ್ದು ಹೊಡೆಯಲು ಪೆಟ್ರೋಲ್ ಡೀಸೆಲ್ ಬೇಕೇ ಬೇಕು. ಇಷ್ಟು ದಿನ ಪ್ಲಾಸ್ಟಿಕ್ ಬಾಟಲಿಗಳಿಗೆ ಪೆಟ್ರೋಲ್-ಡೀಸೆಲ್ ಹಾಕುತ್ತಿದ್ದ ಬಂಕ್ನವರು ಈಗ ಹಾಕಲ್ಲ ಅಂತಿದ್ದಾರೆ. ನಮಗೆ ಪೆಟ್ರೋಲ್ ಡೀಸೆಲ್ ಬೇಕು ಅಂತ ಆಕ್ರೋಶ ಹೊರ ಹಾಕಿದರು. ರೈತರಿಗೆ ಹಾಕಲ್ಲ ಅಂದರೆ ಯಾರಿಗೂ ಪೆಟ್ರೋಲ್ ಡೀಸೆಲ್ ಹಾಕಬೇಡಿ ಎಂದು ಗಲಾಟೆ ಮಾಡಿ ಪೆಟ್ರೋಲ್ ಬಂಕ್ ಬಂದ್ ಮಾಡಿಸಿ ಆಕ್ರೋಶ ವ್ಯಕ್ತಪಡಿಸಿದರು.



