ಕಲಬುರಗಿ: ಕಲಬುರಗಿಯಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾದರೈತರುತಕ್ಷಣವೇ ನೆರೆ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಇಂದು ಬಂದ್ಗೆಕರೆ ನೀಡಿದ್ದಾರೆ. ಉತ್ತರಕರ್ನಾಟಕದಲ್ಲಿತೀವ್ರ ಮಳೆ ಮತ್ತು ಪ್ರವಾಹದಿಂದ ಬೆಳೆಹಾನಿ ಉಂಟಾದ ಹಿನ್ನೆಲೆಯಲ್ಲಿ ಕಲಬುರಗಿಜಿಲ್ಲೆಯಲ್ಲಿತುರ್ತು ಪರಿಹಾರಕ್ರಮಕ್ಕೆ ಆಗ್ರಹಿಸಿ ಇಂದುಜ ಂಟಿ ಹೋರಾಟ ಸಮಿತಿ ಕಲಬುರಗಿ ಬಂದ್ಗೆಕರೆ ನೀಡಿದೆ. ಬೆಳಗ್ಗೆಯಿಂದಲೇ ಹೋರಾಟಗಾರರುಕೇಂದ್ರ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ, ಬಸ್ ಸಂಚಾರವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಹೋರಾಟಕ್ಕೆರೈತಪರ, ಕನ್ನಡಪರ ಹಾಗೂ ಸಾಮಾಜಿಕ ಸಂಘಟನೆಗಳಾದ ೨೦ಕ್ಕೂ ಹೆಚ್ಚು ಸಂಘಸ ಂಸ್ಥೆಗಳು ಬೆಂಬಲ ಘೋಷಿಸಿವೆ.
ಹೋರಾಟಗಾರರು ಸರ್ಕಾರದ ವಿರುದ್ಧಆಕ್ರೋಶ ವ್ಯಕ್ತಪಡಿಸಿ, ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ರೈತರಿಗೆ ಪ್ರತಿಎಕರೆಗೆ ೨೫,೦೦೦ ರೂ. ಪರಿಹಾರ ನೀಡಬೇಕು, ನದಿ ಪ್ರವಾಹದಿಂದ ಮುಳುಗಿದ ಗ್ರಾಮಗಳಿಗೆ ಶಾಶ್ವತ ಪರಿಹಾರಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಜಿಲ್ಲೆಗೆ ೫,೦೦೦ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಜೊತೆಗೆರೈತರ ಸಾಲಮನ್ನಾ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆಇಟ್ಟಿದ್ದಾರೆ.
ಹೋರಾಟದ ಹಿನ್ನೆಲೆಜಿಲ್ಲೆಯಲ್ಲಿ ಬಹುತೇಕಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗೂಅಡ್ಡಿಯಾಗಿದೆ.ಕಲಬುರಗಿ ಪೊಲೀಸ್ಇಲಾಖೆಯು ಹೆಚ್ಚಿನ ಭದ್ರತೆಕೈಗೊಂಡಿದ್ದು, ಯಾವುದೇಅಶಾಂತಿ ಸಂಭವಿಸದAತೆಎಚ್ಚರಿಕೆ ವಹಿಸಲಾಗಿದೆ.