ಗುಂಡ್ಲುಪೇಟೆ: ರೈತರು ಬರ ಬರಲಿ ಎಂದು ಬಯಸುತ್ತಾರೆ ಎಂಬ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿಕೆಯನ್ನು ಖಂಡಿಸಿ ತಾಲ್ಲೂಕು ರೈತಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಹಳೆ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಕಾರರು, ರಾಷ್ಟ್ರೀಯ ಹೆದ್ದಾರಿ ಮೂಲಕ ತೆರಳಿ ಎಂ.ಡಿ.ಸಿ.ಸಿ ಬ್ಯಾಂಕ್ ವೃತ್ತದ ಬಳಿ ಕೆಲಹೊತ್ತು ರಸ್ತೆ ತಡೆ ನಡಸಿ ಶಿವಾನಂದ ಪಾಟೀಲ ವಿರುದ್ಧ ಘೋಷಣೆ ಕೂಗಿತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು, ರೈತರು ಬರಗಾಲ ಬರಬೇಕು ಎಂದು ಬಯಸುತ್ತಾರೆ ಎಂದು ಹೇಳಿರುವುದು ಅಕ್ಷಮ್ಯ ಅಪರಾಧ ಕೂಡಲೆ ರೈತರ ಕ್ಷಮೆಯಾಚಿಸ ಬೇಕು ಎಂದು ಒತ್ತಾಯಿಸಿದರು.
ಶಿವನಾಂದ ಪಾಟೀಲ ನಾಲಿಗೆಯ ಮೇಲೆಹಿಡಿತವಿಲ್ಲದೆ ರೈತರ ಮೇಲೆ ಪದೆ ಪದೆಅಸಂಬದ್ಧವಾದ ಹೇಳಿಕೆಯನ್ನು ನೀಡುತಿದ್ದಾರೆ
ಅವರು ಕಳೆದ ವರ್ಷ ರೈತರ ಆತ್ಮಹತ್ಯೆ ವಿಚಾರದಬಗ್ಗೆಯೂ ಹಗುರವಾಗಿ ಮಾತನಾಡಿದ್ದರು. ಆಗ ಅವರಿಗೆ ತಕ್ಕ ಪಾಠ ಕಲಿಸಿದ್ದೆವು. ಪ್ರತಿಬಾರಿಯೂ ಅವರು ಇಂತಹದೇ ಹೇಳಿಕೆಯನ್ನುನೀಡುತಿದ್ದಾರೆ ಸಕ್ಕರೆ ಸಚಿವ ಶಿವನಂದಾ ಪಾಟೀಲ್ ತಕ್ಷಣ ರೈತರ ಕ್ಷಮೆ ಕೇಳಬೇಕು.
ಇಲ್ಲದಿದ್ದರೆ, ಅವರು ರಾಜ್ಯದಲ್ಲಿ ಎಲ್ಲಿಯೂ ಓಡಾಡುವುದಕ್ಕೆ ನಾವು ಬಿಡುವುದಿಲ್ಲ ಇಂದು ಸರಳವಾಗಿ ಪ್ರತಿಭಟನೆ ನಡೆಸಲಾಗಿದ್ದು ಸರಕಾರ ಅವರ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಶಿವಪುರ ಮಹದೇವಪ್ಪ ಎಚ್ಚರಿಸಿದರು.
ರೈತರು ಬರ ಬಯಸುವುದಿಲ್ಲ ನಿಮ್ಮಂತಹ ನೀಚ ರಾಜಕಾರಣಿಗಳು ಬರ ಹೆಸರಲ್ಲಿ ಜನರ ಹಣವನ್ನು ಕೊಳ್ಳೆಹೊಡೆಯಲು ಯೋಚಿಸುತ್ತಿರಾ ಎಂದು ಕಿಡಿಕಾರಿದರು.ರೈತರನ್ನು ಎದುರು ಹಾಕಿಕೊಂಡ ಸರಕಾರ ಬಹಳ ದಿನಗಳು ಉಳಿಯುವುದಿಲ್ಲ ಇದಕ್ಕೆ ಉತ್ತಮ ಉದಾಹರಣೆ ರೈತರಿಗೆ ಗುಂಡಿಟ್ಟ ಗುಂಡೂರಾವ್ ಸರಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸಿ ಮನೆಗೆ ಕಳುಹಿಸಿರುವ ಇತಿಹಾಸವಿದೆ ಹಾಗಾಗಿ ರೈತರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವಂತೆ ಹೇಳಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ, ಮಹೇಂದ್ರ, ಪಾಪಣ್ಣ,ಖಜಾಂಚಿ ನಾಗರಾಜಪ್ಪ, ಸಂಘಟನಾ ಕಾರ್ಯದರ್ಶಿ ಅಶೋಕ್, ಪ್ರಧಾನ ಕಾರ್ಯದರ್ಶಿ ಶಿವಣ್ಣ ನಾಗರಾಜು, ಕಾಂತರಾಜು, ಮಂಜಪ್ಪ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.