ಮಳವಳ್ಳಿ: ತಾಲೂಕಿನ ಕಂದೇ ಗಾಲ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಕೃಷಿ ಮಹಾವಿದ್ಯಾಲಯ ವಿ ಸಿ ಫಾರಂ ಮಂಡ್ಯ ಸ್ಟುಡೆಂಟ್ ರೆಡಿ ಸಹಯೋಗದಲ್ಲಿ ಗ್ರಾಮೀಣ ಕೃಷಿ ಕಾರ್ಯಾ ಅನುಭವ ಶಿಬಿರ ಅಂಗವಾಗಿ 2023-24 ರ ಕೃಷಿ ಸಂಭ್ರಮವು ಕಂದೇಕಾಲ ಗ್ರಾಮದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಕೃಷಿ ಮಹಾವಿದ್ಯಾಲಯ ವಿ ಸಿ ಫಾರಂ ಮಂಡ್ಯ ಡಾ. ಎಡಿ ರಂಗನಾಥ್ ಮುಖ್ಯಾ ಪ್ರಾಧ್ಯಾಪಕರು ಕೃಷಿ ವಿಸ್ತಾರ ವಿಭಾಗ ರವರು ಮಾತನಾಡಿ ದೇಶದ ಆಹಾರ ಸುರಕ್ಷತೆಗಾಗಿ ರೈತರು ಹೆಚ್ಚು ಹೆಚ್ಚು ಆಹಾರ ಉತ್ಪನ್ನಗಳನ್ನು ಬೆಳೆಯಲು ಮುಂದಾಗಬೇಕು. ವಿವಿಧ ಬಗ್ಗೆಯ ತಳಿಯ ಬೆಳೆಯ ಫಸಲನ್ನು ಬೆಳೆಯಲು ಮುಂದಾಗಬೇಕು ಎಂದು ರೈತರಿಗೆ ಕರೆ ನೀಡಿದರು.
ಕೃಷಿ ಮಹಾವಿದ್ಯಾಲಯ ನಿವೃತ್ತ ಅಧಿಕಾರಿಯಾದ ಶಂಕರಯ್ಯ ರವರುಮಾತನಾಡಿ ರೈತರ ಕಷ್ಟ ಸುಖಗಳಿಗೆ ಸರ್ಕಾರ ಸ್ಪಂದಿಸಬೇಕು ರೈತರ ಕೃಷಿ ಪರಿಕರಗಳನ್ನು ನೀಡಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹೇಮಾವತಿ ಶಿಕ್ಷಕರು ಸ.ಕಿ.ಪ್ರಾ.ಶಾ ಸ. ಪ್ರಾ. ಜೇನು ಕೃಷಿ ವಿಭಾಗ ಡಾ. ಶಿವಕುಮಾರ್ ಸ.ಪ್ರಾ. ಬೇಸಾಯ ವಿಭಾಗ ಕೃಪಶ್ರೀ ಸ.ಪ್ರಾ. ಖುಷಿ ಅರ್ಥಶಾಸ್ತ್ರ ವಿಭಾಗ ಡಾ. ರಾಘವೇಂದ್ರ ಗ್ರಾ.ಪಂ. ಸ. ಅನು ಕುಮಾರ್ ಜೈ ಮಾರುತಿ ಕೋಲಾಟ ಸಂಘದ ಅಧ್ಯಕ್ಷರು ನಾಗೇಶ್ ಅಂಚೆ ದೊಡ್ಡಿ ಗ್ರಾಮದ ಮುಖಂಡರಾದ ಟಿ ಸಿದ್ದೇಗೌಡರು ಯ. ನಂಜುಂಡ ಗೌಡ ಯ. ಕೃಷ್ಣೇಗೌಡ ಕೃಷಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.