ನವದೆಹಲಿ : ಖಾಸಗಿ ವಾಹನಗಳ ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ ದರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.
ಪ್ರಸ್ತುತ ವಾರ್ಷಿಕ ಪಾಸ್ಗಾಗಿ ೩,೦೦೦ ರೂಪಾಯಿಗಳನ್ನು ಪಾವತಿಸಬೇಕಿದೆ. ಆದರೆ, ಏಪ್ರಿಲ್ ೧, ೨೦೨೬ ರಿಂದ ಈ ದರವು ೩,೦೭೫ ರೂಪಾಯಿಗಳಿಗೆ ಏರಿಕೆಯಾಗಲಿದೆ. ಅಂದರೆ ಸರ್ಕಾರವು ಒಟ್ಟು ದರದಲ್ಲಿ ಶೇ. ೨.೫ ರಷ್ಟು (೭೫ ರೂ.) ಹೆಚ್ಚಳ ಮಾಡುತ್ತಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ ವರ್ಷ ಟೋಲ್ ದರಗಳನ್ನು ಪರಿಷ್ಕರಿಸುವ ನಿಯಮವಿದೆ. ಅದರಂತೆಯೇ ಈ ಬಾರಿಯೂ ವಾರ್ಷಿಕ ಏರಿಕೆಯನ್ನು ಮಾಡಲಾಗುತ್ತಿದೆ. ೨೦೨೫ ರ ಆಗಸ್ಟ್ ೧೫ ರಂದು ಈ ವಾರ್ಷಿಕ ಪಾಸ್ ಸೌಲಭ್ಯವನ್ನು ಪ್ರಾರಂಭಿಸಲಾಗಿತ್ತು. ಕೇವಲ ಏಳೂವರೆ ತಿಂಗಳ ಅವಧಿಯಲ್ಲಿ ಸುಮಾರು ೫೨ ಲಕ್ಷಕ್ಕೂ ಹೆಚ್ಚು ಕಾರು ಮಾಲೀಕರು ಈ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.
ಹೊಸ ದರಗಳು ಏಪ್ರಿಲ್ ೧ ರಿಂದ ಜಾರಿಗೆ ಬರುವುದರಿಂದ, ನೀವು ಇದೇ ಮಾರ್ಚ್ ತಿಂಗಳ ಅಂತ್ಯದೊಳಗೆ ರೀಚಾರ್ಜ್ ಮಾಡಿಕೊಂಡರೆ ೩,೦೦೦ ರೂಪಾಯಿಗಳ ಹಳೆಯ ದರದಲ್ಲೇ ಪಾಸ್ ಪಡೆಯಬಹುದು.
ಏ.೧ರಿಂದ ಫಾಸ್ಟ್ ಟ್ಯಾಗ್, ವಾರ್ಷಿಕ ಪಾಸ್ ದರ ಹೆಚ್ಚಳ



