ಕುಣಿಗಲ್: ತನ್ನ ಪ್ರೀತಿಗೆ ವಿರೋದ ವ್ಯಕ್ತಪಡಿಸಿದ ತಂದೆಯನ್ನೇ ಮಗಳು ಸುಫಾರಿ ಕೊಟ್ಟು ಕೊಲೆ ಮಾಡಿಸಿದ ಹಾಗೂ ಕೃತ್ಯಕ್ಕೆ ತಾಯಿ ಕೂಡ ಸಾಥ್ ನೀಡಿರುವ ಘಟನೆ ಕುಣಿಗಲ್ ತಾಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದೆ.ಕಳೆದ ಮೂರು ದಿನಗಳ ಹಿಂದೆ ಕುಣಿಗಲ್ ತಾಲೂಕಿನ ಹೇರೂರು ಸಮೀಪದ ಕುಳ್ಳಿನಂಜಯ್ಯನಪಾಳ್ಯದ ಬಳಿ ಅಥಿತಿ ಶಿಕ್ಷಕ ಕೆ.ಜಿ.ಮರಿಯಪ್ಪ ಎಂಬವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣ ತಾಲೂಕಿನಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.
ಕೇವಲ ಮೂರೇ ದಿನದಲ್ಲಿ ಕೊಲೆ ಪ್ರಕರಣವನ್ನು ಬೇದಿಸುವ ಮೂಲಕ ಕುಣಿಗಲ್ ಪೋಲಿಸರು ಕಾರ್ಯಕ್ಷಮತೆ ಮೆರೆದಿದ್ದಾರೆ.
ಕೊಲೆಗೆ ಸಂಬಂದಿಸಿದಂತೆ ಕೊಲೆಯಾದ ಮರಿಯಪ್ಪನ ಮಗಳು ನರ್ಸಿಂಗ್ ವಿದ್ಯಾರ್ಥಿನಿ ಕೆ.ಎಂ.ಹೇಮಲತಾ, ಹೆಂಡತಿ ಶೋಭಾ, ಪ್ರಿಯಕರ ಶಾಂತಕುಮಾರ್, ಹಾಗೂ ಜಮೀನು ವಿಚಾರದಲ್ಲಿ ಮರಿಯಪ್ಪ ಅವರೊಂದಿಗೆ ವಿವಾದ ಇಟ್ಟುಕೊಂಡಿದ್ದ ಸಂತೋಷ್ ಇತನ ಸ್ನೇಹಿತರಾದ ಹೇಮಂತ್ ಮತ್ತು ಕಾನೂನು ಸಂಘರ್ಷಕ್ಕೆ ಒಳಾಗದ ಮೂರು ಮಂದಿ ಸೇರಿದಂತೆ 8 ಮಂದಿ ಆರೋಪಿಗಳನ್ನು ಪೋಲಿಸರು ಬಂದಿಸಿದ್ದಾರೆ.
ಮಗಳ ಪ್ರೀತಿ ತಂದೆಯ ಪ್ರಾಣ ಪಕ್ಷಿನ್ನೇ ಹಾರಿಸಿತು: ಮಗಳು ಹೇಮಲತಾ ಅದೇ ಗ್ರಾಮದ ಶಾಂತಕುಮಾರ್ ಎಂಬವನ್ನು ಪ್ರೀತಿಸುತ್ತಿದ್ದಳು ಇಬ್ಬರು ಮದುವೆ ಮಾಡಿಕೊಳ್ಳಲು ತಿರ್ಮಾನ ಮಾಡಿದ್ದರು. ಈ ಸಂಬಂದ ಕಳೆದ ಆರು ತಿಂಗಳ ಹಿಂದೆ ತಂದೆ ಮರಿಯಪ್ಪನಿಗೆ ಈ ವಿಚಾರ ತಿಳಿದು ವಿರೋದ ವ್ಯಕ್ತಪಡಿಸಿ ಶಾಂತಕುಮಾರನ್ನು ಹಿಡಿದು ಥಳಿಸಿದರು ಎನ್ನಲಾಗಿದೆ, ಈ ಸಂಬಂದ ಮರಿಯಪ್ಪನ ಮೇಲೆ ದ್ವೇಷ ಹೆಚ್ಚಾಗಿತ್ತು.
ಶಾಂತಕುಮಾರ್ ಹಾಲಿಬೆಂಗಳೂರಿನಲ್ಲಿ ವಾಸವಾಗಿದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಚರ್ಚಿಸಿ ಕೊಲೆಗೆಸಂಚು ರೂಪಿಸಿದ್ದರು. ಇದಕ್ಕೆ ಮಗಳು ಹೇಮಲತಾ ಹಾಗೂ ಹೆಂಡತಿ ಶೋಭಾ ಕೂಡ ಸಾಥ್ ನೀಡಿದರು. ಸುಫಾರಿ ನೀಡಿದ ಹೆಂಡತಿ ಹಾಗೂ ಮಗಳು ಮರಿಯಪ್ಪನ ಚಲನಚಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.
ಕಣ್ಣೀಗೆ ಪೆಪ್ಪರ್ ಸ್ಪ್ರೈ : ಅಮಾವಾಸ್ಯೆ ದಿನ ಪೂಜೆ ಮುಗಿಸಿಕೊಂಡು ಊರಿಗೆಬರುತ್ತಿದ್ದ ಮರಿಯಪ್ಪನನ್ನು ಶಾಂತಕುಮಾರ್ ಮತ್ತು ಸ್ನೇಹಿತರು ಕುಳ್ಳಿನಂಜಯ್ಯನಪಾಳ್ಯ ಸಮೀಪ ಹೊಂಚು ಹಾಕಿ ಕಾದು ಬೈಕ್ನಲ್ಲಿ ಬಂದ ಮರಿಯಪ್ಪನ ಕಣ್ಣೀಗೆ ಪೆಪ್ಪರ್ ಸ್ಪ್ರೈ ಹಾಕಿದ್ದಾರೆ ಗಾಬರಿಯಿಂದ ಬೈಕ್ ಬಿಳಿಸಿ ರಸ್ತೆಪಕ್ಕದ ಜಮೀನಿಗೆ ಓಡಿ ಹೋದ ಮರಿಯಪ್ಪನ್ನು ಅಟ್ಟಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಐದು ಲಕ್ಷ ಸುಫಾರಿ : ಮರಿಯಪ್ಪ ಕೊಲೆಗೆ ಐದು ಲಕ್ಷರೂ ಸುಫಾರಿ ಮಾತನಾಡಿದ್ದು, ಈ ಪೈಕಿ ಮುಂಗಡವಾಗಿ 50 ಸಾವಿರ ರೂಗಳನ್ನು ಹಂತಕರಿಗೆ ನೀಡಿದ್ದರು ಎನ್ನಲಾಗಿದೆ, ಉಳಿದ ಹಣವನ್ನು ಪತಿಯ ಹೆಸರಿನಲ್ಲಿ ಇರುವ ಬ್ಯಾಂಕ್ ಖಾತೆಯಿಂದ ಎಟಿಎಂ ಮೂಲಕ ತೆಗೆದುಕೊಡಲಾಗುವುದೆಂದು ಮರಿಯಪ್ಪ ಪತ್ನಿ ತಿಳಿಸಿದರು ಎನ್ನಲಾಗಿದೆ,
ತಂದೆ ಕೊಲೆಯಾಗಿರುವ ಬಗ್ಗೆ ಮಗಳೇ ದೂರು ನೀಡಿದಳು: ತಂದೆ ಕೊಲೆಯಾಗಿರುವುದು ಗೊತ್ತೇ ಇಲ್ಲ ಎಂಬಂದ ನಟಿಸಿದ್ದ ಮಗಳು ಹೇಮಲತಾ ಕುಣಿಗಲ್ ಪೋಲಿಸ್ ಠಾಣಿಗೆ ಹೋಗಿ ದೂರು ನೀಡಿದ್ದಳು. ಗ್ರಾಮಸ್ಥರೊಬ್ಬರು ಮನೆ ಬಳಿ ಬಂದು ಊರರಾಚಿನ ಜಮೀನಿನಲ್ಲಿ ನಿಮ್ಮ ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು. ಆಗ ನಮಗೆ ವಿಷಯ ತಿಳಿಯಿತು ಈ ಸಂಬಂದ ಆರೋಪಿಗಳನ್ನು ಪತ್ತೇ ಮಾಡಿ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಳು.
ಪೊಲೀಸರಿಗೆ ದಾರಿ ತಪ್ಪಿಸಿದ ಹೇಮಲತಾ : ತನ್ನ ಬಗ್ಗೆ ಅನುಮಾನ ಬಾರದಂತೆ ನಡೆದುಕೊಳ್ಳಲು ಪ್ರಯತ್ನಿಸಿದ ಹೇಮಲತಾ ಗ್ರಾಮದ ಶಿವಕುಮಾರ್ ಹಾಗೂ ನನ್ನ ತಂದೆ ಮರಿಯಪ್ಪ ಅವರ ನಡುವೆ ವೈಮನಸ್ಸಿತ್ತು ಅವರೇ ಕೊಲೆ ಮಾಡಿರಬಹುದೆಂದು ಪೋಲಿಸರಿಗೆ ತಿಳಿಸಿ ದಾರಿ ತಪ್ಪಿಸಿದ್ದಳು. ಈ ಸಂಬಂದ ಪೋಲಿಸರು ಶಿವಕುಮಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೇ ಹೇಮಲತಾ ಹೇಳಿದ್ದು ಸುಳ್ಳಾಗಿತ್ತು.
ಕೊಲೆ ಜಾಡು ಹಿಡಿದ ಪೊಲೀಸರು : ಹೇಮಲತಾ ಪ್ರೇಮಪ್ರಕರಣದ ಜಾಡು ಹಿಡಿದ ಹೊರಟ ಪೋಲಿಸರಿಗೆ ಆರೋಪಿಗಳು ಸಿಕ್ಕಿ ಬಿದ್ದರು. ಕೊಲೆ ನಡೆದ ರಾತ್ರಿಯೇ ಶಾಂತಕುಮಾರ ಹಾಗೂ ಹೇಮಂತ್ ವಾಸಿದ್ದ ಬೆಂಗಳೂರು ಮನೆಯನ್ನು ಶೋದ ನಡೆಸಿ ಅವರ ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಗಳು ಹೇಮಲತಾ, ಹೆಂಡತಿ ಶೋಭ ಸೇರಿದಂತೆ 8 ಮಂದಿ ಈಗ ಜೈಲು ಸೇರಿದ್ದಾರೆ.
ಕಾರ್ಯದಕ್ಷತೆ ಮೆರೆದ ಪೊಲೀಸ್ : ಕೊಲೆಯನ್ನು ಸವಾಲಾಗಿ ಸ್ವೀಕರಿಸಿದಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತುಮಕೂರು ಎಸ್ಪಿ ಆಶೋಕ್ ಅವರ ನೇತೃತ್ವದಲ್ಲಿ ಎಎಸ್ಪಿ ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಕುಣಿಗಲ್ ಡಿವೈಎಸ್ಪಿ ಓಂಪ್ರಕಾಶ್, ಸಿಪಿಐಗಳಾದ ನವೀನ್ಗೌಡ, ಮಾದ್ಯಾನಾಯ್ಕ್, ಮುಂತ್ತಾದವರು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿ ಕಾರ್ಯದಕ್ಷತೆ ಮೆರೆದಿದ್ದಾರೆ.