ಕೊಲಂಬೊ: ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಪ್ರತಿಕೂಲ ಹವಾಮಾನದಿಂದ ತೀವ್ರ ಮಳೆಯಿಂದ ಉಂಟಾದ ಪ್ರಕೃತಿ ವಿಕೋಪದಿಂದ ಶ್ರೀಲಂಕಾದಲ್ಲಿ ಹದಿನೈದು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (DMC) ತಿಳಿಸಿದೆ.
450,000 ಕ್ಕೂ ಹೆಚ್ಚು ಜನರು ಪ್ರವಾಹ, ತೀವ್ರ ಗಾಳಿ ಮತ್ತು ಭೂಕುಸಿತದಂತಹ ದುರ್ಘಟನೆಗಳಿಗೆ ಸಿಲುಕಿದ್ದಾರೆ. ಇದುವರೆಗೆ ಹದಿನೈದು ಜನರು ಮೃತಪಟ್ಟಿದ್ದಾರೆ. ಪೂರ್ವ ಪ್ರಾಂತ್ಯದಲ್ಲಿ ಅತಿ ಹೆಚ್ಚು 10 ಮಂದಿ ಮೃತಪಟ್ಟಿದ್ದಾರೆ.
ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಆಳವಾದ ವಾಯುಭಾರ ಕುಸಿತದಿಂದ ಈ ರೀತಿ ಆಗಿದ್ದು, ಇಂದು ತಮಿಳು ನಾಡು ತೀರಕ್ಕೆ ಚಂಡಮಾರುತ ಅಪ್ಪಳಿಸಿದೆ.
ಶ್ರೀಲಂಕಾದ ಉತ್ತರ ಮಧ್ಯ ಮತ್ತು ಪೂರ್ವ ಟ್ರಿಂಕೋಮಲಿ ಜಿಲ್ಲೆಗಳಲ್ಲಿ 100 ಮಿ.ಮೀ ಗಿಂತ ಹೆಚ್ಚಿನ ಮಳೆ ಬೀಳುವ, ಗಂಟೆಗೆ 60 ಕಿಮೀ ವೇಗದಲ್ಲಿ ಭಾರೀ ಗಾಳಿ ಬೀಸುವ ನಿರೀಕ್ಷೆಯಿದೆ.
ಪೂರ್ವ ಪಟ್ಟಣವಾದ ಸಮ್ಮಂತುರೈನಲ್ಲಿ ಪ್ರವಾಹ ನೀರಿನಿಂದ ಆರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರನ್ನು ಬಂಧಿಸಲಾಗಿದೆ. ಬಸ್ಗಳ ಕೊರತೆಯಿಂದಾಗಿ ಟ್ರ್ಯಾಕ್ಟರ್ನಲ್ಲಿ ಪ್ರಯಾಣಿಸಲು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ತಿಳಿಸಿದ್ದರು.