ಬೆಂಗಳೂರು: ಕಸ್ತೂರಿ ಕನ್ನಡ ಡಾ. ರಾಜ್ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಾರ್ಚ್ 1ರಿಂದ ಮಾರ್ಚ್3 ರವರೆಗೆ ತ್ರಿಶಕ್ತಿ ಮಾತೆಯರಾದ ಶ್ರೀ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ, ಶ್ರೀ ಗಂಗಮ್ಮ ದೇವಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವಿಯವರ ಉತ್ಸವ ಹಾಗೂ ಕರ್ನಾಟಕ ಎಂದು ನಾಮಕರಣವಾಗಿ 50ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವೈಭವದ ನಾಡಹಬ್ಬ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜಕುಮಾರ್ ವಾರ್ಡಿನ ಅಗ್ರಹಾರ ದಾಸರಹಳ್ಳಿಯ ಕಂಠೀರವ ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 1ರ ಶುಕ್ರವಾರರಂದು ಬೆಳಿಗ್ಗೆ 10 ಗಂಟೆಗೆ ಗ್ರಾಮ ದೇವರಾದ ಶ್ರೀ ಮುನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಂತರ ಬೆಳಗ್ಗೆ 11 ಗಂಟೆಯಿಂದ ತ್ರಿಶಕ್ತಿ ಮಾತೆಯರನ್ನು ನಮ್ಮ ಗ್ರಾಮಕ್ಕೆ ಬರಮಾಡಿಕೊಂಡು ಶಾಸ್ತ್ರೋಕ್ತವಾಗಿ ಪ್ರತಿಸ್ಠಾಪನೆ ಮಾಡಿ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು,
ಸಂಜೆ 5 ಗಂಟೆಗೆ ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದರಾಜುಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಲೋಕಕಲ್ಯಾಣಾರ್ಥವಾಗಿ ಸುಮಂಗಲಿಯರಿಂದ ತ್ರಿಶಕ್ತಿ ದೇವತೆಗಳಿಗೆ ಕುಂಕುಮಾರ್ಚನೆ ಸೇವೆ ನಂತರ ವಿಶೇಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾ. 2ರಂದು ಬೆಳಗ್ಗೆ 10 ಗಂಟೆಗೆ ಕರುನಾಡ ತಾಯಿ ಭುವನೇಶ್ವರಿ ದೇವಿ ಪೂಜೆ ನಂತರ ಕನ್ನಡ ಹೋರಾಟಗಾರರ ಭೀಷ್ಮ ಎಂದೇ ಖ್ಯಾತಿ ಪಡೆದಿರುವ ಶ್ರೀ ಜಾಣಗೆರೆ ವೆಂಕಟರಾಮಯ್ಯ ರವರಿಂದ ಧ್ವಜಾರೋಹಣ. ಮಧ್ಯಾಹ್ನ 12.30ಕ್ಕೆ ಅನ್ನದಾನ ಕಾರ್ಯಕ್ರಮ, ಸಂಜೆ 6 ಗಂಟೆಗೆ ನಾಡಿನ ಹೆಸರಾಂತ ಗಾಯಕ ಆರುಣ್ ವೆಚ್ಛಿ ಮತ್ತು ಗಾಯಕಿ ಶ್ರೀಮತಿ ಗೀತಾ ಭತ್ತದ್ ತಂಡದವರಿಂದ ಜನಪದ – ಭಕ್ತಿ – ಸುಗಮಸಂಗೀತ ಕಾರ್ಯಕ್ರಮ ನೆರವೇರಲಿದೆ. ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವರ ವಿಶೇಷಧಿಕಾರಿಗಳಾದ ಡಾ. ಶಿವಮೂರ್ತಿ ಆರ್. ಕೆ ರವರು, ಬೇಲೂರು ತಾಲ್ಲೂಕಿನ ತಹಶೀಲ್ದಾರ್ ಶ್ರೀಮತಿ ಮಮತಾ ರವರು ಹಾಗೂ ಕಾಂಗ್ರೆಸ್ ಮುಖಂಡರಾದ ಕೆ ವಿ ಸಂದೀಪ್ ರವರು ಆಗಮಿಸಲಿದ್ದಾರೆ.
ಖ್ಯಾತ ಜನಪದ ಗಾಯಕ, ನಟ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾದ ಗುರುರಾಜ ಹೊಸಕೋಟೆ ರವರಿಗೆ, ಇಂದು ಸಂಜೆ ಪತ್ರಿಕೆ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪದ್ಮನಾಗರಾಜು ರವರಿಗೆ ಹಾಗೂ ಖ್ಯಾತ ಕಿರುತೆರೆ ನಟಿ ಶ್ರೀಮತಿ ಅಪೂರ್ವಶ್ರೀ ರವರಿಗೆ ವಿಶೇಷ ಸನ್ಮಾನ ಸಮಾರಂಭ. ಇದೇ ಸಂದರ್ಭದಲ್ಲಿ ನಮ್ಮ ಸಂಘದ ಗೌರವಾಧ್ಯಕ್ಷರಾಗಿದ್ದ ದಿ. ನಾಗರಾಜ್ ಹಾಗೂ ಸಂಘದ ಖಜಾಂಚಿಯಾಗಿದ್ದ ದಿ. ದೇವರಾಜ್ ರವರ ಸ್ಮರಣಾರ್ಥ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ವಿಶೇಷ ಸಾಧಕರಿಗೆ ಕಸ್ತೂರಿ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಮಾ. 3ರಂದು ಬೆಳಗ್ಗೆ 11 ಗಂಟೆಗೆ ಕಂಠೀರವ ಕಾಲೋನಿ, ಅಗ್ರಹಾರ ದಾಸರಹಳ್ಳಿ ಹಾಗೂ ಕೈಗಾರಿಕಾ ನಗರದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾ ತಂಡಗಳ ಜೊತೆ ಹೂವಿನ ಪಲ್ಲಕ್ಕಿಯಲ್ಲಿ ತ್ರಿಶಕ್ತಿ ದೇವತೆಯರ ಮೆರವಣಿಗೆ ನಡೆಯಲಿದೆ.ಮೂರು ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಹನುಮಂತಯ್ಯ, ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಮಾಜಿ ಶಾಸಕ ಉಮಾಪತಿ, ಮಾಜಿ ಉಪ ಮಹಾಪೌರ ಪುಟ್ಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಳ್ಳರಾಜು, ಪಾಲಿಕೆ ಮಾಜಿ ಸದಸ್ಯರಾದ ರೂಪಾದೇವಿ, ಶ್ರೀನಿವಾಸ್, ಉಮಾಶಂಕರ್, ಬಿ. ಮೋಹನ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಎಂ. ಶ್ರೀಕಾಂತ್, ಭವ್ಯ ನರಸಿಂಹಮೂರ್ತಿ, ಶ್ರೀನಾಥ್, ಬಿಜೆಪಿ ಮುಖಂಡ ರಮೇಶ್, ಶ್ರೀಮತಿ ರೇಖಾ ಶ್ರೀಧರ್, ಜಿ ಡಿ. ಮಂಜುನಾಥ್, ಅನಿಲ್ಗೌಡ, ಎಸ್. ಜಿ. ಹರ್ಷ, ಡಾ.ರಾಜಕುಮಾರ್ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್, ಅಪ್ಪು ಯೂತ್ ಬ್ರಿಗೇಡ್ ರಾಜ್ಯಾಧ್ಯಕ್ಷರಾದ ಮುರಳಿ, ಸಮಾಜ ಸೇವಕರಾದ ಮಹೇಶಣ್ಣ, ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಅಧ್ಯಕ್ಷ ಗಂಗಾಧರ. ಟಿ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ರ. ನರಸಿಂಹಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.