ಬೆಂಗಳೂರು: ಬೆಂಗಳೂರು ಮತ್ತು ಚೆನ್ನೈನಲ್ಲಿ ಅಸ್ತಿತ್ವ ಹೊಂದಿರುವ ಫಿಡಾ ಡಿಸೈನ್ ಸ್ಕೂಲ್, ಶುಕ್ರವಾರ ತನ್ನ ತರಬೇತಿ ಕೇಂದ್ರ ಡಿಸೈನ್ 11 ಅನ್ನು ಘೋಷಿಸಿದೆ. ಇದು ದೇಶದ ಪ್ರಮುಖ ಸಂಸ್ಥೆಗಳು ನೀಡುವ ವಿನ್ಯಾಸ ಕೋರ್ಸ್‍ಗಳಿಗೆ ಪ್ರವೇಶಿಸಲು ಉದ್ದೇಶಿತ ತರಬೇತಿ ಕೇಂದ್ರವಾಗಿದೆ.
ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (NIFT), ಆರ್ಕಿಟೆಕ್ಚರ್‍ನಲ್ಲಿ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ (NATA), ಮತ್ತು ಡಿಸೈನ್‍ಗಾಗಿ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ (UCEED) ಮೊದಲಾದ ಪ್ರವೇಶ ಪರೀಕ್ಷೆಗಳಿಗೆ ಈ ಕೇಂದ್ರ ತರಬೇತಿ ಒದಗಿಸಲಿದೆ.
ಡಿಸೈನ್ 11ಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್, ‘’ಇಂತಹ ಕೋಚಿಂಗ್ ಸೆಂಟರ್‍ಗಳು ಬೇರೆ ಜಿಲ್ಲೆಗಳಲ್ಲಿಯೂ ಪ್ರಾರಂಭವಾಗಬೇಕು, ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅವಕಾಶ ಸಿಗುತ್ತದೆ. ವಿನ್ಯಾಸವು ಇಂದು ಬಹಳ ಮುಖ್ಯವಾಗಿರುವುದರಿಂದ ಇದರಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯವಿದೆ ಎಂದು ಇದು ಖಚಿತಪಡಿಸುತ್ತದೆ ಎಂದರು.
ಫಿಡಾ ದಿ ಡಿಸೈನ್ ಸ್ಕೂಲ್‍ನ ಸಂಸ್ಥಾಪಕ ನಿರ್ದೇಶಕಿ ಎಸ್ ಫರೀದಾ ಖಾನ್ ಮಾತನಾಡಿ, ಡಿಸೈನ್ ಎಂದರೇನು ಎಂಬುದರ ಬಗ್ಗೆ ನಮ್ಮಲ್ಲಿ ಬಹಳ ಕಡಿಮೆ ತಿಳುವಳಿಕೆ ಇದೆ. ಉನ್ನತ ವಿನ್ಯಾಸ ಶಾಲೆಗಳಿಗೆ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವಲ್ಲಿ ಡಿಸೈನ್ 11 ಪ್ರಮುಖ ಸಂಸ್ಥೆಯಾಗಲಿದೆ. ನಾವು ವಿದ್ಯಾರ್ಥಿಗಳು ತಮ್ಮ ವೃತ್ತಿಯಲ್ಲಿ ಛಾಪು ಮೂಡಿಸಲು ಸಹಾಯ ಮಾಡುತ್ತೇವೆ. ಡಿಸೈನ್ 11 ಅಭ್ಯರ್ಥಿಗಳಿಗೆ ದೇಶದ ಉನ್ನತ ವಿನ್ಯಾಸ ಶಾಲೆಗಳಿಗೆ ಉತ್ತಮ ಅವಕಾಶವಿದೆ ಎಂದು ಖಚಿತಪಡಿಸುವ ನಿಟ್ಟಿನಲ್ಲಿ ಸರಿಯಾದ ತರಬೇತಿಯನ್ನು ನೀಡುತ್ತದೆ ಎಂದರು.
ಪ್ರತಿ ವರ್ಷ ಉಂಖಿ (ಸಾಮಾನ್ಯ ಸಾಮರ್ಥ್ಯ ಪರೀಕ್ಷೆ) ಮತ್ತು ಅಂಖಿ (ಸೃಜನಶೀಲತೆ ಸಾಮರ್ಥ್ಯ ಪರೀಕ್ಷೆ) ಗಾಗಿ 40,000 ಕ್ಕೂ ಹೆಚ್ಚು ಆಕಾಂಕ್ಷಿಗಳು ಹಾಜರಾಗುತ್ತಾರೆ. ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಲ್ಲಿ(ಎನ್‍ಐಎಫ್‍ಟಿ) ಕೇವಲ 4,517 ಸೀಟುಗಳಿವೆ. ಎನ್‍ಐಎಫ್‍ಟಿ 2023 ರಲ್ಲಿ ಸುಮಾರು 16 ಕಾಲೇಜುಗಳಿವೆ. ಪ್ರಬಲ ಸ್ಪರ್ಧೆಯೊಂದಿಗೆ, ಯಶಸ್ಸಿನ ಪ್ರವೇಶಕ್ಕಾಗಿ ತರಬೇತಿ ಇಂದು ಅತ್ಯಗತ್ಯವಾಗಿದೆ.
Leave a Review