ಬೆಂಗಳೂರು: ಲೋಕಸಭಾ ಚುನಾವಣಾ ಸಂಬಂಧ ಈಗಾಗಲೇ ಮೊದಲ ಹಂತದಲ್ಲಿ ಕಾಂಗ್ರೆಸ್ನಿಂದ ಏಳು ಅಭ್ಯರ್ಥಿಗಳ ಘೋಷಣೆಯಾಗಿದ್ದು, ಉಳಿದ ಅಭ್ಯರ್ಥಿಗಳ ಘೋಷಣೆಯಾಗಿದ್ದು ನಾಳೆ ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಈಗಾಗಲೇ ಟಿಕೆಟ್ಗಾಗಿ ಹಲವು ಕ್ಷೇತ್ರಗಳಿಂದ ಪ್ರಮುಖ ನಾಯಕರುಗಳು ಯತ್ನಿಸುತ್ತಿದ್ದರೆ ಟಿಕೆಟ್ ಗಿಟ್ಟಿಸಲು ಹಲವು ನಾಯಕರ ಅಭಿಮಾನಿ ಪಡೆ ರಾಜ್ಯ ಹಾಗೂ ರಾಷ್ಟ್ರ ನಾಯಕರನ್ನು ಒತ್ತಾಯಿಸಲು ಮುಂದಾಗಿವೆ.ಇಂದು ಬಾಗಲಕೋಟೆ ಕ್ಷೇತ್ರದ ಕೆಪಿಸಿಸಿ ಮಹಿಳಾ ವಿಭಾಗದ ಉಪಾ ಧ್ಯಕ್ಷೆ ವೀಣಾ ಕಾಶ್ಯಪ್ಪನವರ್ ಬೆಂಬಲಿಗರೆನ್ನಲಾದವರು ಟಿಕೆಟ್ಗಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ಮುಂದೆ ಒತ್ತಾಯಿಸಲು ಜಮಾಯಿಸಿದ್ದಾರೆ.
ವೀಣಾ ಕಾಶ್ಯಪ್ಪನವರ್ ಪರವಾಗಿ ಬಿತ್ತಿಪತ್ರಗಳನ್ನು ಹಿಡಿದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಅವರಿಗೆ ನೀಡುವಂತೆ ಒತ್ತಾಯಿಸಲಾಗುತ್ತಿದೆ.ಮತ್ತೊಂದೆಡೆ ಅದೇ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಸಚಿವ ಶಿವಾನಂದಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ತೀವ್ರ ಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಅತ್ತ ಬಳ್ಳಾರಿಯಿಂದ ಕಾಂಗ್ರೆಸ್ ಟಿಕೆಟ್ಗಾಗಿ ತೆರೆ ಮರೆಯಲ್ಲೇ ಕಸರತ್ತು ನಡೆಯುತ್ತಿದೆ.ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಟಿಕೆಟ್ಗಾಗಿ ತೀವ್ರ ಪ್ರಯತ್ನ ನಡೆಸಿದ್ದು, ಬಳ್ಳಾರಿಯಿಂದ ಸ್ಪರ್ಧಿಸಲು ತಮಗೆ ಟಿಕೆಟ್ ನೀಡಬೇಕು ಎಂದು ವರಿಷ್ಠರ ಬಳಿ ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಸಚಿವ ನಾಗೇಂದ್ರ ಅಥವಾ ಶಾಸಕ ತುಕಾರಾಮ್ ಅವರನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.