ಹೊಸದಲ್ಲಿ: ಪ್ರೊ ಕಬಡ್ಡಿ 10ನೇ ಆವೃತ್ತಿಯ ನೂರನೇ ಪಂದ್ಯವು ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ ನಡುವೆ ಶುಕ್ರವಾರ ನಡೆಯಲಿದೆ. ಈ ತಿಂಗಳಾಂತ್ಯದಲ್ಲಿ ಲೀಗ್ ಹಂತದ ಪಂದ್ಯಗಳು ಮುಗಿಯುವ ಕಾರಣ ಮುಂದಿನ ಎಲ್ಲ ಪಂದ್ಯಗಳು ರೋಮಾಂಚಕವಾಗಿ ಸಾಗುವ ಸಾಧ್ಯತೆಯಿದೆ.
ಆಡಿದ 17 ಪಂದ್ಯಗಳಲ್ಲಿ 12ರಲ್ಲಿ ಗೆದ್ದು 71 ಅಂಕ ಪಡೆದಿರುವ ಜೈಪುರ ಪಿಂಕ್ ಪ್ಯಾಂಥರ್ ಈಗಾಗಲೇ ಪ್ಲೇ ಆಫ್ಗೆ ತೇರ್ಗಡೆಯಾಗಿದೆ. ಪುನೇರಿ ಪಲ್ಟಾನ್ಸ್ 68 ಅಂಕ ಗಳಿಸಿದ್ದು ದ್ವಿತೀಯ ಸ್ಥಾನದಲ್ಲಿದೆ. ಆತಿಥೇಯ ಡೆಲ್ಲಿ ತಂಡವು 16 ಪಂದ್ಯಗಳನ್ನಾಡಿದ್ದು 59 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ತವರಿನಲ್ಲಿ ಡೆಲ್ಲಿ ತಂಡಕ್ಕೆ ನಾಲ್ಕು ಪಂದ್ಯಗಳಿದ್ದು ಗರಿಷ್ಠ ಅಂಕ ಪಡೆಯಲು ಕಠಿನ ಪ್ರಯತ್ನ ನಡೆಸುವ ಸಾಧ್ಯತೆಯಿದೆ. ದಿನದ ಎರಡನೇ ಪಂದ್ಯವು ಗುಜರಾತ್ ಜೈಂಟ್ಸ್ ಮತ್ತು ಹರಿಯಾಣ ಸ್ಟೀಲರ್ ನಡುವೆ ನಡೆಯಲಿದೆ.