ಲುಸಾನ್ (ಸ್ವಿಜರ್ಲೆಂಡ್): ಭಾರತ ಹಾಕಿ ತಂಡದ ಮಿಡ್ ಫೀಲ್ಡರ್ ಹಾರ್ದಿಕ್ ಸಿಂಗ್ ಮತ್ತು ಮಹಿಳಾ ತಂಡದ ನಾಯಕಿ ಸವಿತಾ ಅವರು ಮಂಗಳವಾರ ಕ್ರಮವಾಗಿ ಎಫ್ಐಎಚ್ ವರ್ಷದ ಆಟಗಾರ ಮತ್ತು ವರ್ಷದ ಗೋಲ್ ಕೀಪರ್ (ಮಹಿಳಾ) ಪ್ರಶಸ್ತಿಗೆ ಭಾಜನರಾದರು.ತಜ್ಞರ ಸಮಿತಿ, ರಾಷ್ಟ್ರೀಯ ಫೆಡರೇಷನ್ಗಳ ಮತಗಳ ನಂತರ ಪ್ರಶಸ್ತಿ ಪ್ರಕಟಿಸಲಾಯಿತು.
ರಾಷ್ಟ್ರೀಯ ಫೆಡರೇಷನ್ಗಳನ್ನು ಆಯಾ ರಾಷ್ಟ್ರೀಯ ತಂಡಗಳ ನಾಯಕರು, ತರಬೇತುದಾರರು ಮತ್ತು ಮಾಧ್ಯಮದವರು ಪ್ರತಿನಿಧಿಸಿದ್ದರು.ರಾಷ್ಟ್ರೀಯ ತಂಡದ ಪರ 114 ಪಂದ್ಯಗಳನ್ನು ಆಡಿರುವ ಹಾರ್ದಿಕ್, 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಂತರದ ದಿನಗಳಲ್ಲಿ ಅವರ ಸುಧಾರಿತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.