ಬೆಂಗಳೂರು: ವಿದೇಶಿಯರಿಗೆ ಕಾನೂನು ಬಾಹಿರವಾಗಿ ಕಾಯ್ದೆಗಳನ್ನ ನಿಯಮಗಳನ್ನು ಉಲ್ಲಂಘಿಸಿ ಮನೆ ಬಾಡಿಗೆಗೆ ನೀಡುತ್ತಿದ್ದ 20 ಜನರ ಮಾಲೀಕರ ವಿರುದ್ಧ ಸಿಸಿಬಿ ಪೊಲೀಸರು ದೂರು ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.
ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಮಾತನಾಡಿ ಬೆಂಗಳೂರು ನಗರದ ಬಾನಸ್ವಾಡಿ ರಾಮ್ ಮೂರ್ತಿ ನಗರ ಕೆಆರ್ ಪುರ ಸೋಲದೇವನಹಳ್ಳಿ ಬಾಗಲಕುಂಟೆ ಕಾಡುಗೋಡಿ ಬೇಗೂರು ಬೊಮ್ಮನಹಳ್ಳಿ ಪರಪ್ಪನ ಅಗ್ರಹಾರ ವಿದ್ಯಾರಣ್ಯಪುರ ಮತ್ತು ಚಿಕ್ಕಜಾಲ ಪೊಲೀಸ್ ಠಾಣ ಸರದ್ದುಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ವಿದೇಶಿಯರ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ವಿದೇಶಿ ಪ್ರಜೆಗಳಿಗೆ ಮತ್ತು ಡ್ರಗ್ ಪೆಟ್ಲರ್ಗಳಿಗೆ ಬಾಡಿಗೆ ನೀಡುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುತ್ತಾರೆ.
ವಿದೇಶಿಯರ ಕಾಯ್ದೆ 1944ರ ಕಲಂ ಏಳರ ರೀತಿಯ ಯಾವುದೇ ಮನೆಯ ಮಾಲೀಕ ಅಥವಾ ನಿರ್ವಹಣೆ ಮಾಡುವ ವ್ಯಕ್ತಿ ಯಾವುದೇ ವಿದೇಶಿ ಪ್ರಜೆಗಳಿಗೆ ತನ್ನ ಮನೆಯನ್ನು ಬಾಡಿಗೆಗೆ ನೀಡುವ 24 ಗಂಟೆಯ ಒಳಗಾಗಿ ವಿದೇಶಿಯರ ನೊಂದಣಿ ಇಲಾಖೆಯ ಆನ್ಲೈನ್ ಪೋರ್ಟಲ್ ನಲ್ಲಿ ತಪ್ಪದೇ ಫಾರಂ ಸಿ ನಮೂನೆಯನ್ನು ಎಫ್ ಆರ್ ಆರ್ ಓ ಅಧಿಕಾರಿಗಳಿಗೆ ಸಲ್ಲಿಸಬೇ ಕಾಗಿರುತ್ತದೆ ಎಂದು ಆಯುಕ್ತರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.