ಪುಣೆ (ಮಹಾರಾಷ್ಟ್ರ) : ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಆಟಗಾರರಲ್ಲಿ ಒಬ್ಬರಾಗಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿರುದ್ದ ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕಾಗಿ, ದೂರು ಅರ್ಜಿ ಸಲ್ಲಿಕೆಯಾಗಿದೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯ, ಗುಜರಾತ್ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು. ಭರ್ಜರಿಯಾಗಿ ಗೆದ್ದು ವಿಶ್ವ ಚಾಂಪಿಯನ್ ಆದ ನಂತರ, ಟೀಂ ಇಂಡಿಯಾದ ಸದಸ್ಯರು ವಿಜಯೋತ್ಸವ ಆಚರಿಸಿಕೊಂಡಿದ್ದರು. ಆ ವೇಳೆ, ಹಾರ್ದಿಕ್ ಪಾಂಡ್ಯ, ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡು, ಗ್ರೌಂಡ್ ಫುಲ್ ಓಡಾಡಿದ್ದರು. ಈ ಸಂಬಂಧ, ಅವರ ವಿರುದ್ದ ದೂರು ದಾಖಲಾಗಿದೆ.
ಈಗ, ಪುಣೆಯ ವಾಜಿದ್ ಖಾನ್ ಎನ್ನುವ ವಕೀಲರು, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ನಗರದ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಫ್.ಐ.ಆರ್ ದಾಖಲಿಸುವಂತೆ ಕೋರಿ ವಕೀಲ ಖಾನ್ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ವಿರುದ್ದ ದೂರು ದಾಖಲಾಗಿರುವುದನ್ನು ಹಿರಿಯ ಅಧಿಕಾರಿಗಳೂ ಖಚಿತ ಪಡಿಸಿದ್ದಾರೆ. ಆದರೆ, ಯಾವ ಕಾರಣಕ್ಕಾಗಿ ಎನ್ನುವ ಮಾಹಿತಿಯನ್ನು ಬಹಿರಂಗ ಪಡಿಸಲಿಲ್ಲ. ವಾಜಿದ್ ಖಾನ್ ತಮ್ಮ ದೂರಿನಲ್ಲಿ, ಕ್ರಿಕೆಟರ್ ಹಾರ್ದಿಕ್ ಪಾಂಡ್ಯ, ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡು, ಮೈದಾನದಲ್ಲಿ ಅಶ್ಲೀಲವಾಗಿ ವರ್ತಿಸಿದ್ದಾರೆ ಎಂದು ವಕೀಲ ವಾಜಿದ್ ಖಾನ್ ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯ, ಮೈದಾನದಲ್ಲಿ ನಡೆಸಿದ ಈ ಕೃತ್ಯ, ಕಾನೂನಡಿಯಲ್ಲಿ ಅಪರಾಧವಾಗಿದೆ ಮತ್ತು ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು, ವಕೀಲರು ತಮ್ಮ ದೂರಿನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದು ಪ್ರತೀ ಭಾರತೀಯರ ಕರ್ತವ್ಯ ಎಂದು ದೂರಿನಲ್ಲಿ ಹೇಳಲಾಗಿದೆ. ಪಾಂಡ್ಯ, ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡಿದ್ದಾಗ, ಅವರ ಗೆಳತಿಯೊಬ್ಬರು ಅವರಿಗೆ ಮುತ್ತಿಡುವ ದೃಶ್ಯ ವೈರಲ್ ಆಗಿತ್ತು.
ಭಾರತ ತಂಡ ಎರಡನೇ ಬಾರಿ ಪ್ರಶಸ್ತಿಯನ್ನು ಗೆದ್ದಿರುವುದು ಮತ್ತು ಎರಡೂ ಬಾರಿ ತಂಡದ ಸದಸ್ಯನಾಗಿದ್ದದ್ದು ನನ್ನ ವೈಯಕ್ತಿಕವಾಗಿ ಆಸೆಯಾಗಿತ್ತು ಮತ್ತು ಭರವಸೆಯೂ ಆಗಿತ್ತು. ಇದು ಕೇವಲ ಆರಂಭ ಎಂದು ತಂಡದ ಶಕ್ತಿಯನ್ನು ಹಾರ್ದಿಕ್ ಪಾಂಡ್ಯ ಕೊಂಡಾಡಿದ್ದರು.
ತ್ರಿವರ್ಣ ಧ್ವಜ ಸುತ್ತಿಕೊಂಡು ಅಶ್ಲೀಲ ವರ್ತನೆ: ಪಾಂಡ್ಯ ವಿರುದ್ದ ದೂರು ದಾಖಲು



