ಏಷ್ಯಾ ಕಪ್ ನ ಸೂಪರ್ ಫೋರ್ ಹಂತದ ಮೊದಲ ಪಂದ್ಯನಗಳನ್ನು ಗೆದ್ದು ಬೀಗುತ್ತಿರುವ ಭಾರತ ಮತ್ತು ಬಾಂಗ್ಲಾ ದೇಶ ತಂಡಗಳು ಸೆಪ್ಟೆಂಬರ್ ೨೪ರಂದು ಬುಧವಾರ ಮುಖಾಮುಖಿಯಾಗಲಿದೆ. ದುಬೈ ಅಂತರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಉಭಯ ತಂಡಗಳಿಗೂ
ಮಹತ್ವದ್ದಾಗಿದ್ದು, ರೋಚಕ ಹಣಾಹಣಿಯನ್ನು ನಿರೀಕ್ಷಿಸಬಹುದಾಗಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ ಗೆ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲಿದೆ.
ಸೂಪರ್ ೪ ಹಂತದಲ್ಲಿರುವ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ಮತ್ತುಬಾಂಗ್ಲಾದೇಶ ತಂಡಗಳೆರಡೂ ೨ ಅಂಕಗಳನ್ನು ಗಳಿಸಿವೆ. ೪ ತಂಡಗಳಲ್ಲಿ ಉತ್ತಮ ರನ್ ರೇಟ್ (೦.೬೮೯) ಹೊಂದಿರುವ ಭಾರತ ತಂಡ ಅAಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ೦.೧೨೧ ರನ್ ರೇಟ್ ಹೊಂದಿರುವ ಬಾಂಗ್ಲಾದೇಶ ದ್ವಿತೀಯ ಸ್ಥಾನದಲ್ಲಿದೆ. ಉಭಯ ತಂಡಗಳು ಈವರೆಗೆ ೧೭ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಭಾರತ ೧೬ ಪಂದ್ಯಗಳಲ್ಲಿ ಗೆದ್ದಿದ್ದರೆ, ಬಾಂಗ್ಲಾದೇಶ ಕೇವಲ ೧ ಪ ಂದ್ಯದ ಲ್ಲಿ ವ iÁತ ್ರ.ಈಗ ಲೂ ಎರ ಡ Æತ ಂಡ ಗ ಳ ಲ್ಲಿ ಭಾರತವೇ ಬಲಿಷ್ಠವಾಗಿ ಗೋಚಿಸುತ್ತದೆ. ಭಾರತವೇ ಬಲಿಷ್ಠವಾಗಿ ಗೋಚಿಸುತ್ತದೆ.
ಬಲಿಷ್ಠವಾಗಿದೆ ಭಾರತದ ಬ್ಯಾಟಿಂಗ್ ಏಷ್ಯಾ ಕಪ್ ಟೂರ್ನಿಯಲ್ಲಿ ಎಲ್ಲಾ ಪಂದ್ಯಗಳನ್ನು ಗಲ್ಲುತ್ತಾ ಸಾಗಿರುವ ಭಾರತ ತಂಡ ಬಾಂಗ್ಲಾ ದೇಶ ವಿರುದ್ಧ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಬ್ಯಾಟಿಂಗ್ ನಲ್ಲಿ ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್ ಅವರು ಉತ್ತಮ ಫಾರ್ಮ್ ನಲ್ಲಿದ್ದು ಸೂರ್ಯ ಕುಮಾರ್ ಯಾದವ್ ಅವರು ತಂಡದ ಅಗತ್ಯಕ್ಕೆ ತಕ್ಕಂತೆ ಆಡುತ್ತಿದ್ದಾರೆ. ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಅವರು ಸಹ ಫಲಿತಾಂಶವನ್ನೇ ಬುಡಮೇಲು ಮಾಡಬಲ್ಲ ಸಾಮರ್ಥ್ಯ ಇರುವ ಬ್ಯಾಟರ್ ಗಳು.
ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ. ಅಕ್ಷರ್ ಪಟೇಲ್, ಶಿವಂ ದುಬೆ ಎಲ್ಲರೂ ಟಿ೨೦ ಸ್ಪೆಶಲಿಸ್ಟ್ ಗಳು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದರೂ, ಚೇಸಿಂಗ್ ಮಾಡಿದರೂ ತಂಡವನ್ನು ಮೇಲೆತ್ತುವ ಸಾಮರ್ಥ್ಯ ತಂಡದ ಬ್ಯಾಟಿಂಗ್ ಲೈನ್ ಅಪ್ ನಲ್ಲಿದೆ. ಹೇಗಿದೆ ದುಬೈ ಪಿಚ್- ವಾತಾವರಣ? ದುಬೈ ಅಂತರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣವು ಬ್ಯಾಟಿAಗ್ಗೆ ಹೆಚ್ಚು ಅನುಕೂಲಕರವಾಗಿದೆ. ಬ್ಯಾಟ್ಸ್ಮನ್ಗಳು ಎಚ್ಚರಿಕೆಯಿಂದ ಆಡಬೇಕು.
ಬೌಲರ್ಗಳು ನಿಖರವಾದ ಲೈನ್ ಮತ್ತು ಲೆಂಗ್ತ್ನಲ್ಲಿ ಬೌಲಿಂಗ್ ಮಾಡಬೇಕು. ಸ್ಪಿನ್ನರ್ ಗಳು ಪರಿಣಾಮಕಾರಿಯಾಗಬಹುದು. ಟಾಸ್ ಗೆದ್ದ ತಂಡವು ಚೇಸಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಲಾಗಿದೆ. ದುಬೈನಲ್ಲಿಬುಧವಾರ ಬಿಸಿಲಿನ ವಾತಾವರಣ ಇರಲಿದ್ದು ಶುಭ್ರ ಆಕಾಶ ಇರುವುದರಿಂದ ಯಾವ ಹೊತ್ತಲ್ಲೂ ಮಳೆ ಬೀಳುವ ಆತಂಕವಿಲ್ಲ. ಹಗಲು ಹೊತ್ತಲ್ಲಿ ತಾಪಮಾನ ೩೯ ಡಿಗ್ರಿ ಸೆಲ್ಸಿಯಸ್ ಇರಲಿದ್ದು ರಾತ್ರಿ ೨೯ರವರೆಗೂ ಇಳಿಯಬಹುದು ಎನ್ನಲಾಗಿದೆ. ವಾತಾವರಣದಲ್ಲಿ ಆದ್ರತೆ ಶೇ.೭೫ರಷ್ಟಿರುತ್ತದೆಎಂದು ಹವಾಮಾನ ವರದಿ ತಿಳಿಸಿದೆ.