ಕನ್ನಡದಲ್ಲಿ ಎಷ್ಟೇ ಸಿನಿಮಾಗಳು ಸದ್ದು ಮಾಡಿದರೂ ಓಟಿಟಿ ಸಂಸ್ಥೆಗಳ ಮಲತಾಯಿ ಧೋರಣೆ ಮುಂದುವರೆದಿದೆ. ದೊಡ್ಡ ಸಿನಿಮಾಗಳ ರೈಟ್ಸ್ ಖರೀದಿಸುತ್ತೇವೆ. ಚಿಕ್ಕ ಸಿನಿಮಾಗಳು ಅಂದ್ರೆ ತಾತ್ಸಾರ, ನಾವು ಕೊಟ್ಟಷ್ಟು ಹಣ ತಗೋಬೇಕು ಅಂತಾರೆ. ಅದೇ ಕಾರಣಕ್ಕೆ ಕನ್ನಡ ಸಿನಿಮಾಗಳು ಓಟಿಟಿಗೆ ಬರೋದು ಕೆಲವೊಮ್ಮೆ ತಡವಾಗುತ್ತದೆ. ‘ಕಾಂತಾರ-೧’ ರೀತಿಯ ಹಿಟ್ ಸಿನಿಮಾ ೪ ವಾರಕ್ಕೂ ಮುನ್ನ ಓಟಿಟಿಗೆ ಬರುವಂತಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ಚಿತ್ರವನ್ನು ಈ ಶುಕ್ರವಾರ ಪ್ರೆöÊಂ ವೀಡಿಯೋದಲ್ಲಿ ಸ್ಟಿçÃಮಿಂಗ್ ಮಾಡ್ತಿದ್ದಾರೆ. ಆದರೆ ‘ಎಕ್ಕ’ ಸಿನಿಮಾ ತೆರೆಗೆ ಬಂದು ೪ ತಿಂಗಳು ಕಳೆದರೂ ಡಿಜಿಟಲ್ ಪ್ಲಾಟ್ಫಾರ್ಮ್ಗೆ ಬರಲಿಲ್ಲ. ಈ ಬಗ್ಗೆ ಸಿನಿರಸಿಕರು ಬೇಸರಗೊಂಡಿದ್ದರು.
ಅAತೂ ಇಂತೂ ಸಿನಿಮಾ ಓಟಿಟಿಗೆ ಬರುವ ಸಮಯ ಹತ್ತಿರವಾಗಿದೆ. ಈ ಹಿಂದೆ ಜೀ-೫ ಸಂಸ್ಥೆ ‘ಎಕ್ಕ’ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊAಡಿದೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಈ ಬಗ್ಗೆ ನಿರ್ಮಾಪಕ ಜಯಣ್ಣ ಪ್ರತಿಕ್ರಿಯಿಸಿ ಫಿಲ್ಮಿಬೀಟ್ ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದರು. ಯಾವುದೇ ಸಂಸ್ಥೆಗೆ ಓಟಿಟಿ ರೈಟ್ಸ್ ಒಪ್ಪಂದ ಆಗಿಲ್ಲ ಎಂದಿದ್ದರು. ರೋಹಿತ್ ಪದಕಿ
ನಿರ್ದೇಶನದ ಆಕ್ಷನ್ ಥ್ರಿಲ್ಲರ್ ‘ಎಕ್ಕ’ ಸಿನಿಮಾ ಜುಲೈ ೧೮ರಂದು ತೆರೆಗೆ ಬಂದಿತ್ತು.
ಯುವರಾಜ್ಕುಮಾರ್ ಹೀರೊ ಆಗಿ ನಟಿಸಿದ ಎರಡನೇ ಸಿನಿಮಾ ಇದು. ಸಂಜನಾ ಆನಂದ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಅತುಲ್ ಕುಲಕರ್ಣಿ, ಶ್ರುತಿ ಸೇರಿದಂತೆ ಅನುಭವಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಮುತ್ತು ಪಾತ್ರದಲ್ಲಿ ಯುವ ಮೋಡಿ ಮಾಡಿದ್ದರು. ಡ್ಯಾನ್ಸ್, ಆಕ್ಷನ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದರು. ಚರಣ್ ರಾಜ್ ಸಂಗೀತದಲ್ಲಿ ‘ಬ್ಯಾAಗಲ್ ಬಂಗಾರಿ’ ಸಾಂಗ್ ಸೂಪರ್ ಹಿಟ್ ಆಗಿತ್ತು. ‘ಎಕ್ಕ’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಜುಲೈ ಕೊನೆವಾರ ‘ಸು ಫ್ರಮ್ ಸೋ’ ಸಿನಿಮಾ ತೆರೆಗೆ ಬಂದು ಅಚ್ಚರಿಯ ಗೆಲುವು ಕಂಡಿತ್ತು. ಆ ಸಿನಿಮಾ ಆರ್ಭಟದ ಮುಂದೆ ‘ಎಕ್ಕ’ ಡಲ್ಲಾಗಿತ್ತು. ಬಹಳ ಬೇಗ ಚಿತ್ರಮಂದಿರಗಳಿAದ ದೂರಾಗಿತ್ತು. ನವೆಂಬರ್ ೭ರಂದು ಸಿನಿಮಾ ಸನ್ ನೆಕ್ಸ್÷್ಟ ಓಟಿಟಿಗೆ ಬರುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಬರಬೇಕಿದೆ.



