ಬೆಂಗಳೂರು: ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕöÈತ, ಕನ್ನಡದಖ್ಯಾತಕಾದಂಬಕಾರಿಕಾರಎಸ್ಎಲ್ ಭೈರಪ್ಪಅವರು ನಿನ್ನೆ ಮಧ್ಯಾಹ್ನ ೨.೩೮ಕ್ಕೆ ಹೃದಯಾಘಾತದಿಂದ ನಿಧನರಾದರು. ಭೈರಪ್ಪ ನಿಧನಕನ್ನಡ ಸಾಹಿತ್ಯ ಲೋಕದದೊಡ್ಡಕೊಂಡಿಯೇ ಕಳಚಿದಂತಾಗಿದ್ದು, ಭೈರಪ್ಪ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರಕಲಾಕ್ಷೇತ್ರದಲ್ಲಿಇರಿಸಲಾಗಿದ್ದು, ಹಲವು ಗಣ್ಯರುಅಂತಿಮದರ್ಶನ ಪಡೆದಿದ್ದಾರೆ.
ಅಂತಿಮದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಶಿವರಾಜ್ ತಂಗಡಗಿ, ಮಧುಬಂಗಾರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಂಸದ ಪಿಸಿ ಮೋಹನ್, ಕೇಂದ್ರರಾಜ್ಯ ಸಚಿವೆ ಶೋಭಾಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯಅವರುರವೀಂದ್ರಕಲಾಕ್ಷೇತ್ರಕ್ಕೆ ಆಗಮಿಸಿ ಭೈರಪ್ಪಅವರ ಪಾರ್ಥೀವ ಶರೀರಕ್ಕೆಅಂತಿಮ ನಮನ ಸಲ್ಲಿಸಿದ್ದಾರೆ.
ಖ್ಯಾತ ಸಾಹಿತಿ, ಕಾದಂಬರಿಕಾರಎಸ್ಎಲ್ ಭೈರಪ್ಪಅವರ ಸ್ಮಾರಕ ನಿರ್ಮಾಣಕ್ಕೆಕರ್ನಾಟಕ ಸರ್ಕಾರ ಹಸಿರು ನಿಶಾನೆ ತೋರಿದೆ. ಈ ಕುರಿತು, ಬೆಂಗಳೂರಿನ ರವೀಂದ್ರಕಲಾಕ್ಷೇತ್ರದಲ್ಲಿ ಭೈರಪ್ಪ ಪಾರ್ಥಿವ ಶರೀರದಅಂತಿಮದರ್ಶನ ಪಡೆದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಅಪಾರಓದುಗರನ್ನ ಸಂಪಾದಿಸಿದವರು ಭೈರಪ್ಪನವರು. ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಅವರದ್ದುಜಗತ್ ಪ್ರಸಿದ್ಧ ಆಗಿರುವಂತಹ ಕಾದಂಬರಿಗಳು. ಅವರ, ಕೆಲವು ಕಾದಂಬರಿಗಳನ್ನು ನಾನು ಓದಿದ್ದೇನೆ. ಅವರಕುಟುಂಬದ ಸದಸ್ಯರಿಗೆದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಿದ್ದರಾಮಯ್ಯ ಹೇಳಿದರು.
ವಿಜಯೇಂದ್ರ ಮಾತನಾಡಿ, ಹಿರಿಯ ಸಾಹಿತಿಕಾದಂಬರಿಕಾರ ಭೈರಪ್ಪಅಗಲಿದ್ದಾರೆ. ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ. ಆತ್ಮಸಾಕ್ಷಿಗೆ ಸಾಹಿತ್ಯ ಕೃಷಿ ಮಾಡಿದ್ದಾರೆ. ನೆಮ್ಮದಿಯಾಗಿ ಈಗ ಪ್ರಕೃತಿಯಲ್ಲಿ ಲೀನರಾಗಿದ್ದಾರೆ. ಅವರಕುಟುಂಬಕ್ಕೆ ನಷ್ಟ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥನೆ ಮಾಡುತ್ತೇನೆಎಂದರು.