2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್ ಆರಂಭವಾಗಿ ಎರಡು ವಾರಗಳು ಕಳೆದಿದ್ದು, ಸತತ ಐದು ಪಂದ್ಯಗಳನ್ನು ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಉಳಿದೆಲ್ಲ ತಂಡಗಳು ಸಮಾನ ಹೋರಾಟ ನಡೆಸುತ್ತಿವೆ.
ಈ ಪಂದ್ಯಾವಳಿಗೂ ಮುನ್ನ ಕೆಲವು ತಂಡಗಳ ಆಟಗಾರರು ಗಾಯಕ್ಕೆ ತುತ್ತಾಗಿ ಆರಂಭಿಕ ಪಂದ್ಯಗಳನ್ನು ಕಳೆದುಕೊಂಡಿದ್ದರು.
ಅದರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವೂ ಒಂದು. ಪ್ರಮುಖ ಆಟಗಾರರ ಗೈರಿನಲ್ಲಿ ಆರಂಭಿಕ ಪಂದ್ಯಗಳನ್ನು ಆಡಬೇಕಾಗಿ ಬಂದಿತು.
ಇದೀಗ ಐಪಿಎಲ್ 2023ರ ಉಳಿದ ಪಂದ್ಯಗಳಿಗೆ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮೊಹ್ಸಿನ್ ಖಾನ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸ್ಸಾಗಿದ್ದಾರೆ. ಭುಜದ ಗಾಯದ ಕಾರಣ ಆರಂಭಿಕ ಪಂದ್ಯಗಳಿಂದ ಹೊರಬಿದ್ದಿದ್ದ ಮೊಹ್ಸಿನ್ ಖಾನ್ ಮತ್ತೆ ಮರಳಿರುವುದು ಎಲ್‍ಎಸ್‍ಜಿ ತಂಡಕ್ಕೆ ಬಲ ಬಂದಂತಾಗಿದೆ.
Leave a Review